ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಿಜೆಪಿ ನೋಡಿ ಕಲಿಯಬೇಕು...' ಅಖಿಲೇಶ್ ಯಾದವ್ ಅಚ್ಚರಿಯ ಮಾತು

|
Google Oneindia Kannada News

ಲಕ್ನೋ, ಮಾರ್ಚ್ 15: "ಮೈತ್ರಿ ಪಕ್ಷಗಳನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ನಾವು ಬಿಜೆಪಿಯನ್ನು ನೋಡಿ ಕಲಿಯಬೇಕು" ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಬಿಎಸ್‌ಪಿ, ಎಸ್‌ಪಿ ಚುನಾವಣೆಯಲ್ಲಿ ಮಾತ್ರವಲ್ಲ, ಧ್ವಜದಲ್ಲೂ ಮೈತ್ರಿ!ಬಿಎಸ್‌ಪಿ, ಎಸ್‌ಪಿ ಚುನಾವಣೆಯಲ್ಲಿ ಮಾತ್ರವಲ್ಲ, ಧ್ವಜದಲ್ಲೂ ಮೈತ್ರಿ!

ತಮ್ಮ ಪತ್ನಿ, ಎಸ್ಪಿ ನಾಯಕಿ ಡಿಂಪಲ್ ಯಾದವ್ ಅವರೊಂದಿಗೆ ಟಿವಿ ಚಾನೆಲ್ ವೊಂದಕ್ಕೆ ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಈ ಮಾತನ್ನು ಹೇಳಿದರು.

ಪ್ರಿಯಾಂಕಾ ದಲಿತ ರಾಜಕೀಯಕ್ಕೆ ಕಂಗಾಲಾದ ಮಾಯಾವತಿ, ಅಖಿಲೇಶ್ಪ್ರಿಯಾಂಕಾ ದಲಿತ ರಾಜಕೀಯಕ್ಕೆ ಕಂಗಾಲಾದ ಮಾಯಾವತಿ, ಅಖಿಲೇಶ್

ಉತ್ತರ ಪ್ರದೇಶದಲ್ಲಿ ಎಸ್ಪಿ ಮತ್ತು ಮಾಯಾವತಿ ಅವರ ಬಹುಜನ ಸಮಾಜ ಪಕ್ಷಗಳು ಕಾಂಗ್ರೆಸ್ ಅನ್ನು ಹೊರಗಿಟ್ಟು ಮೈತ್ರಿ ಮಾಡಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, 'ಈಗ ಮೈತ್ರಿಗೆ ಸಮಯವಿಲ್ಲ. ಕಾಂಗ್ರೆಸ್ ದೊಡ್ಡ ಪಕ್ಷ ಎಂಬುದು ನಿಜ. ಉತ್ತರ ಪ್ರದೇಶದಲ್ಲಿ ನಮ್ಮ ಮೈತ್ರಿ ಆಗಿದೆ. ಇನ್ನೇನಿದ್ದರೂ ಕಾಂಗ್ರೆಸ್ ನಮಗೆ ಬೆಂಬಲ ನೀಡಬೇಕು ಅಷ್ಟೆ' ಎಂದರು.

Should learn from BJP, says Akhilesh Yadav

'ಬಿಜೆಪಿಯು ತನ್ನ ಮೈತ್ರಿ ಪಕ್ಶಃಗಳನ್ನು ಹೇಗೆ ನಿಯಂತ್ರಿಸುತ್ತದೆ ಎಮಬುದನ್ನು ನಾವೆಲ್ಲರೂ ನೋಡಿ ಕಲಿಯಬೇಕು. ಒಗ್ಗಟ್ಟಿದ್ದರೆ ಮಹಾಘಟಬಂಧನ ಸಾಧ್ಯ, ಬಿಜೆಪಿ ವಿರುದ್ಧ ಹೋರಾಡಲು ನಮಗೆ ಮೈತ್ರಿ ಅತ್ಯಗತ್ಯ ಮತ್ತು ಅನಿವಾರ್ಯವಾಗಿತ್ತು. ಆದ್ದರಿಂದ ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಂಡೆವು' ಎಂದು ಯಾದವ್ ಹೇಳಿದರು.

English summary
We should leran from BJP how to manage alliances Uttar Pradesh chief minister Akhilesh Yadav told in an interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X