• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇಸ್ ಹಾಕಿದ್ದಕ್ಕೆ ರಮ್ಯಾ ನೀಡಿದ್ದು ಎರಡೇ ಪದದ ಪ್ರತಿಕ್ರಿಯೆ!

|

ಬೆಂಗಳೂರು, ಸೆಪ್ಟೆಂಬರ್ 26: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನಾಕಾರಿಯಾಗಿ ಚಿತ್ರಿಸುವ ಫೋಟೊವನ್ನು ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ ಎಂದು ಆರೋಪಿಸಿ ತಮ್ಮ ವಿರುದ್ಧ ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಎಫ್‌ಐಆರ್ ಕುರಿತು ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ನಟಿ ರಮ್ಯಾ ಎರಡೇ ಪದದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿರುವ ದೂರನ್ನು ರಮ್ಯಾ ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಅವರ ಪ್ರತಿಕ್ರಿಯೆಯಿಂದ ತಿಳಿಯುತ್ತದೆ.

'ಚೋರ್ ಪಿಎಂ' ಎಂದು ಟೀಕಿಸಿದ ಗೌರಮ್ಮನ ವಿರುದ್ಧ ಉತ್ತರ ಪ್ರದೇಶದಲ್ಲಿ ಕೇಸ್

'ಚೋರ್ ಪಿಎಂ' ಎಂದು ಮೋದಿ ಅವರನ್ನು ನಿಂದಿಸುವ ಟ್ವೀಟ್ ಮಾಡಿದ್ದ ರಮ್ಯಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ ಎಂದು ಪತ್ರಕರ್ತೆ ಕಾರ್ಣಿಕಾ ಕೊಹ್ಲಿ ಅವರು ಮಾಡಿದ್ದ ಟ್ವೀಟ್‌ಅನ್ನು ಹಂಚಿಕೊಂಡಿರುವ ರಮ್ಯಾ, 'ಓಹ್ ವೆಲ್' ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ.

ಅಧಿಕೃತ ಹೇಳಿಕೆ!

ರಫೇಲ್ ಒಪ್ಪಂದ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದ ಟ್ವೀಟ್‌ಗಳನ್ನು ಹಂಚಿಕೊಳ್ಳುತ್ತಿರುವ ರಮ್ಯಾ, ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವುದಕ್ಕೆ 'ಓಹ್ ವೆಲ್' ಎಂದಷ್ಟೇ ಹೇಳಿಕೆ ನೀಡಿದ್ದು ಅಚ್ಚರಿ ಮೂಡಿಸಿದೆ.

ಇದು ನಿಮ್ಮ ಅಧಿಕೃತ ಹೇಳಿಕೆಯೇ ಎಂದು ಪತ್ರಕರ್ತೆ ಕಾರ್ಣಿಕಾ ಪ್ರಶ್ನಿಸಿದ್ದು, ಅದಕ್ಕೆ ರಮ್ಯಾ 'ಹೌದು' ಎಂದು ಉತ್ತರಿಸಿದ್ದಾರೆ.

ರಿಜ್ವಾನ್ ಅಹ್ಮದ್ ದೂರು

ರಿಜ್ವಾನ್ ಅಹ್ಮದ್ ದೂರು

ವಕೀಲಿಕೆ, ಸಾಮಾಜಿಕ ಧಾರ್ಮಿಕ ಭಾಷಣ, ಫೋಟೋಗ್ರಫಿ ಮುಂತಾದ ವೃತ್ತಿಯಲ್ಲಿ ತೊಡಗಿಕೊಂಡಿರುವ ಡಾ. ಸೈಯದ್ ರಿಜ್ವಾನ್ ಅಹ್ಮದ್, ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು 'ಚೋರ್' (ಕಳ್ಳ) ಎಂದು ಕರೆದಿದ್ದಕ್ಕೆ ಭಾರತೀಯ ದಂಡ ಸಂಹಿತೆಯ 124ಎ ಸೆಕ್ಷನ್ ಅಡಿಯಲ್ಲಿ 'ದೇಶದ್ರೋಹ'ದ ದೂರು ದಾಖಲಿಸಿದ್ದಾರೆ.

ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು

ದೇಶಕ್ಕೆ ಮಾಡಿದ ಅಗೌರವ

ದೇಶಕ್ಕೆ ಮಾಡಿದ ಅಗೌರವ

"ಅವರ ಟ್ವೀಟ್ ತೀರ ಅವಹೇಳನಕಾರಿಯಾಗಿದೆ. ಪ್ರಧಾನ ಮಂತ್ರಿಯವರು ನಮ್ಮ ಸಾರ್ವಭೌಮತ್ವವನ್ನು ಪ್ರತಿನಿಧಿಸುತ್ತಾರೆ. ಅವರನ್ನು ಚೋರ್ ಎಂದು ಕರೆದಿರುವುದು ದೇಶಕ್ಕೆ ಮಾಡಿದ ಅಗೌರವ. ಅವರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ಸಲ್ಲಿಸಲಾಗಿದೆ" ಎಂದು ಲಖನೌದಲ್ಲಿ ಎಫ್ಐಆರ್ ದಾಖಲಿಸಿರುವ ರಿಜ್ವಾನ್ ಅವರು ಹೇಳುತ್ತಾರೆ.

ರಮ್ಯಾ ಬರೆದಿದ್ದೇನು?

ನರೇಂದ್ರ ಮೋದಿಯವರೇ ಸ್ವತಃ ತಮ್ಮ ಹಣೆಯ ಮೇಲೆ 'ಚೋರ್' ಎಂಬ ಕುಂಚದಿಂದ ಬರೆಯುವಂಥ ಚಿತ್ರವನ್ನು ರಮ್ಯಾ ಅವರು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದರು. ಜೊತೆಗೆ, ಚೋರ್ ಪಿಎಂ ಚುಪ್ ಹೈ (ಕಳ್ಳ ಪ್ರಧಾನಿ ಬಾಯಿಬಿಚ್ಚುತ್ತಿಲ್ಲ) ಎಂದು ಕೂಡ ದಿವ್ಯಾ ಸ್ಪಂದನಾ ಅವರು ಟ್ವಿಟ್ಟರ್ ಪೋಸ್ಟ್ ನಲ್ಲಿ ಬರೆದಿದ್ದರು.

ಯುವಜನರಿಂದ ಹಣ ಕದ್ದು, ಅಂಬಾನಿ ಕಿಸೆಗೆ ತುಂಬಿಸುವ ಚೌಕಿದಾರ: ರಾಹುಲ್ ಆರೋಪ

ಕಾಂಗ್ರೆಸ್‌ಗೆ ಹಾನಿಕರ

ಮೇಡಂ, ನಿಮ್ಮ ಪೋಸ್ಟ್ ಖಂಡಿತ ಟ್ರೋಲ್ ಅಲ್ಲ. ನಾನು ಸಿಟ್ಟಿನಿಂದ ಕುದಿಯುತ್ತಿದ್ದೇನೆ. ನಿಮ್ಮ ಟ್ವೀಟ್ ನನ್ನನ್ನು ಘಾಸಿಯನ್ನಾಗಿ ಮಾಡಿದೆ. ಬಿಜೆಪಿ ಸೇರುವಂತೆ ನನ್ನನ್ನು ಉತ್ತೇಜಿಸುತ್ತಿದೆ. ದಯವಿಟ್ಟು ಇನ್ನು ತೆಗೆಯಿರಿ. ಇದು ನಿಮ್ಮ (ಕಾಂಗ್ರೆಸ್) ಪಕ್ಷಕ್ಕೇ ಹಾನಿಕರ ಎಂದು ಸೈಯದ್ ರಿಜ್ವಾನ್ ಅಹ್ಮದ್ ಅವರು ರಮ್ಯಾ ಅವರನ್ನು ನಿನ್ನೆಯೇ ಕೋರಿದ್ದರು.

English summary
Congress leader Ramya (Divya Spandana) reacted with only two words for the sedition case filed against her for sharing offensive photograph of Narendra Modi in Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X