ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಪಿ, ಆರ್‌ಎಲ್‌ಡಿ ಜಂಟಿ ಅಭ್ಯರ್ಥಿಯಾಗಿ ಜಯಂತ್‌ ಚೌಧರಿ ಕಣಕ್ಕೆ

|
Google Oneindia Kannada News

ಲಕ್ನೋ, ಮೇ 27: ಉತ್ತರ ಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳ ಜಂಟಿ ಅಭ್ಯರ್ಥಿಯಾಗಿ ಆರ್‌ಎಲ್‌ಡಿ ಪಕ್ಷದ ಅಧ್ಯಕ್ಷ ಜಯಂತ್ ಚೌಧರಿ ಸ್ಪರ್ಧಿಸಲಿದ್ದಾರೆ ಎಂದು ಸಮಾಜವಾದಿ ಪಕ್ಷ ಪ್ರಕಟಿಸಿದೆ.

ಇತ್ತೀಚೆಗಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ರಾಜ್ಯಸಭಾ ಚುನಾವಣೆಗೆ ಎಸ್‌ಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದ್ದರು. ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಜಾವೇದ್ ಅಲಿ ಖಾನ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು.

ರಾಜ್ಯಸಭೆಗೆ ಲಾಲು ಪುತ್ರಿ ಮಿಸಾ ಭಾರತಿ, ಫೈಯಾಜ್ ಅಹ್ಮದ್ ಆರ್‌ಜೆಡಿ ಅಭ್ಯರ್ಥಿಗಳು ರಾಜ್ಯಸಭೆಗೆ ಲಾಲು ಪುತ್ರಿ ಮಿಸಾ ಭಾರತಿ, ಫೈಯಾಜ್ ಅಹ್ಮದ್ ಆರ್‌ಜೆಡಿ ಅಭ್ಯರ್ಥಿಗಳು

"ಜಯಂತ್ ಚೌಧರಿ ಎಸ್‌ಪಿ ಮತ್ತು ಆರ್‌ಎಲ್‌ಡಿಯ ಜಂಟಿ ಅಭ್ಯರ್ಥಿಯಾಗಲಿದ್ದಾರೆ" ಎಂದು ಸಮಾಜವಾದಿ ಪಕ್ಷವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಘೋಷಿಸಿದೆ.

Rajya Sabha polls: Samajwadi Party fields RLD chief Jayant Chaudhary as joint candidate

ಉತ್ತರ ಪ್ರದೇಶ ವಿಧಾನಸಭೆಯಲ್ಲಿ 273 ಶಾಸಕರ ಬಲ ಹೊಂದಿರುವ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸಂಸತ್ತಿನ ಮೇಲ್ಮನೆಗೆ ಎಂಟು ಸದಸ್ಯರನ್ನು ಸುಲಭವಾಗಿ ಆಯ್ಕೆ ಮಾಡಲು ಸಾಧ್ಯವಾಗುತ್ತದೆ, ಆದರೆ ಎಸ್‌ಪಿ ಮತ್ತು ಅದರ ಮಿತ್ರಪಕ್ಷಗಳಾದ ಆರ್‌ಎಲ್‌ಡಿ ಮತ್ತು ಎಸ್‌ಬಿಎಸ್‌ಪಿ, 125 ಶಾಸಕರ ಬಲ ಹೊಂದಿದ್ದು, ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದಾಗಿದೆ.

ಗೆಲುವಿಗೆ ಬೇಕು ಕನಿಷ್ಠ 34 ಮತ; ರಾಜ್ಯದ 11 ನಿವೃತ್ತ ರಾಜ್ಯಸಭಾ ಸದಸ್ಯರ ಪೈಕಿ ಐವರು ಭಾರತೀಯ ಜನತಾ ಪಕ್ಷ (ಬಿಜೆಪಿ), ಮೂವರು ಎಸ್‌ಪಿ, ಇಬ್ಬರು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಒಬ್ಬರು ಕಾಂಗ್ರೆಸ್‌ಗೆ ಸೇರಿದವರಾಗಿದ್ದಾರೆ. ಅವರ ಅಧಿಕಾರಾವಧಿ ಕೊನೆಗೊಳ್ಳುತ್ತಿರುವ ವೇಳೆ, ಕಪಿಲ್ ಸಿಬಲ್, ಬಿಎಸ್‌ಪಿಯ ಸತೀಶ್ ಚಂದ್ರ ಮಿಶ್ರಾ ಮತ್ತು ಸಮಾಜವಾದಿ ಪಕ್ಷದ ರಿಯೋತಿ ರಮಣ್ ಸಿಂಗ್ ಸ್ಪರ್ಧಿಸುತ್ತಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆಯಲ್ಲಿ 403 ಚುನಾಯಿತ ಸದಸ್ಯರನ್ನು ಹೊಂದಿರುವ ಅಭ್ಯರ್ಥಿ ಗೆಲುವಿಗೆ ಕನಿಷ್ಠ 34 ಮತಗಳು ಬೇಕಾಗುತ್ತವೆ.

ರಾಜ್ಯಸಭೆ ಚುನಾವಣೆ; ಎಸ್‌ಪಿ ಬೆಂಬಲದೊಂದಿಗೆ ಕಪಿಲ್ ಸಿಬಲ್‌ ನಾಮಪತ್ರ ರಾಜ್ಯಸಭೆ ಚುನಾವಣೆ; ಎಸ್‌ಪಿ ಬೆಂಬಲದೊಂದಿಗೆ ಕಪಿಲ್ ಸಿಬಲ್‌ ನಾಮಪತ್ರ

ವಿಧಾನಸಭೆಯಲ್ಲಿ ಕಾಂಗ್ರೆಸ್ ಇಬ್ಬರು ಶಾಸಕರನ್ನು ಹೊಂದಿದ್ದರೆ, ಮಾಯಾವತಿ ನೇತೃತ್ವದ ಬಿಎಸ್‌ಪಿ ಒಬ್ಬ ಶಾಸಕರನ್ನು ಹೊಂದಿದೆ. ಇಬ್ಬರು ಹಿರಿಯ ಬಿಎಸ್‌ಪಿ ನಾಯಕರಾದ ಮಿಶ್ರಾ ಮತ್ತು ಅಶೋಕ್ ಸಿದ್ಧಾರ್ಥ್ ಜುಲೈನಲ್ಲಿ ರಾಜ್ಯಸಭಾ ಸದಸ್ಯ ಸ್ಥಾನದಿಂದ ನಿವೃತ್ತರಾಗುತ್ತಾರೆ, ನಂತರ ಪಕ್ಷದ ರಾಮ್‌ಜಿ ಗೌತಮ್ ಮಾತ್ರ ರಾಜ್ಯಸಭೆಯಲ್ಲಿ ಉಳಿಯುತ್ತಾರೆ.

Rajya Sabha polls: Samajwadi Party fields RLD chief Jayant Chaudhary as joint candidate

ಬಿಜೆಪಿಯ ಐವರ ಅಧಿಕಾರಾವಧಿ ಪೂರ್ಣ; ಜಾಫರ್ ಇಸ್ಲಾಂ, ಶಿವ ಪ್ರತಾಪ್ ಶುಕ್ಲಾ, ಸಂಜಯ್ ಸೇಠ್, ಸುರೇಂದ್ರ ನಗರ ಮತ್ತು ಜೈ ಪ್ರಕಾಶ್ ನಿಶಾದ್ ಬಿಜೆಪಿಯಿಂದ ನಿವೃತ್ತರಾಗುತ್ತಿರುವ ರಾಜ್ಯಸಭಾ ಸದಸ್ಯರಾಗಿದ್ದಾರೆ. ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಿರುವ ಎಸ್‌ಪಿ ನಾಯಕರಲ್ಲಿ ಉತ್ತರ ಪ್ರದೇಶದ ವಿಧಾನ ಪರಿಷತ್ತಿನ ಮಾಜಿ ಅಧ್ಯಕ್ಷ ಸುಖರಾಮ್ ಸಿಂಗ್ ಯಾದವ್ ಪುತ್ರ ಮೋಹಿತ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಯಾದವ್ ಜೊತೆಗೆ ರೆಯೋಟಿ ರಮಣ್ ಸಿಂಗ್ ಮತ್ತು ವಿಶಂಭರ್ ಪ್ರಸಾದ್ ನಿಶಾದ್ ಅವರ ಅಧಿಕಾರವೂ ಜುಲೈನಲ್ಲಿ ಕೊನೆಗೊಳ್ಳಲಿದೆ.

ಮೇ 24 ರಂದು ಚುನಾವಣಾ ಆಯೋಗ ರಾಜ್ಯಸಭಾ ಚುನಾವಣೆಯ ಅಧಿಸೂಚನೆಯನ್ನು ಘೋಷಿಸಿದ್ದು, ಜೂನ್ 10ರಂದು ಮತದಾನ ನಡೆಯಲಿದೆ, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.

English summary
The Samajwadi Party has announced that RLD party president Jayant Chaudhary will contest as the joint candidate of the Samajwadi Party (SP) and Rashtriya Lok Dal (RLD) in the Rajya Sabha elections from Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X