ಲಕ್ನೋ: ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಆರತಿ ಎತ್ತಿ ಹಣ್ಣು ಕೊಟ್ಟ ಪೊಲೀಸರು
ಲಕ್ನೋ, ಏಪ್ರಿಲ್ 22: ಕೊರೊನಾ ಮಹಾಮಾರಿ ವಿಶ್ವದ ಎಲ್ಲೆಡೆ ಹಬ್ಬಿದೆ. ಕೊರೊನಾದಿಂದ ದೂರವಿರಲು ಲಾಕ್‌ಡೌನ್ ಒಂದೇ ಪರಿಹಾರವೆಂದುಕೊಂಡರೂ ಜನರು ಮನೆಯಿಂದ ಹೊರಬರುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ.
Recommended Video
ಹೀಗಾಗಿ ಬಸ್ಕಿ ಹೊಡೆಸಿದ್ದಾಯಿತು, ರಸ್ತೆ ಮೇಲೆ ಮಲಗಿಸಿದ್ದಾಯಿತು. ಪೊಲೀಸರು ಇದೀಗ ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಆರತಿ ಎತ್ತಿ ಬಾಳೆ ಹಣ್ಣು ನೀಡುತ್ತಿದ್ದಾರೆ.
ಕಾನ್ಪುರದ ಕಿದ್ವಾಯಿ ನಗರದಲ್ಲಿ ನಿಯಮ ಉಲ್ಲಂಘಿಸಿದ ಏಳೆಂಟು ಮಂದಿ ಯುವಕರನ್ನು ಹಿಡಿದು ತಂದು ಪೊಲೀಸರು ಅವರಿಗೆ ಆರತಿ ಎತ್ತಿ ಕೈಗೆ ಹಣ್ಣು ಕೊಟ್ಟು ಕಳುಹಿಸಿದ್ದಾರೆ.
#WATCH: Police perform 'aarti' of people who violated #CoronavirusLockdown norms at Kidwai Nagar in Kanpur. pic.twitter.com/crm5w3s9JZ
— ANI UP (@ANINewsUP) April 22, 2020
ನಂತರ ಬುದ್ಧಿವಾದ ಹೇಳಿರುವ ಪೊಲೀಸರು ಮೊದಲ ಬಾರಿ ಉಲ್ಲಂಘಿಸಿದರೆ ಇದೆಲ್ಲಾ ಮಾಡುತ್ತೇವೆ . ಎರಡನೇ ಬಾರಿ ಉಲ್ಲಂಘಿಸಿದರೆ ಆರತಿ ಎತ್ತುವುದಿಲ್ಲ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಮೊದಲು ಲಾಕ್‌ಡೌನ್ ಉಲ್ಲಂಘಿಸಿದರೆ ಲಾಠಿ ಏಟು ನೀಡುತ್ತಿದ್ದರು. ಉತ್ತರ ಪ್ರದೇಶದಲ್ಲಿ 1294 ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. 20 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ 19,984 ಮಂದಿಗೆ ಕೊರೊನಾ ಮಹಾಮಾರಿ ಬಂದಿದ್ದು, 3850 ಮಂದಿ ಗುಣಮುಖರಾಗಿದ್ದಾರೆ. 640 ಮಂದಿ ಮೃತಪಟ್ಟಿದ್ದಾರೆ.
ವಿಶ್ವದಲ್ಲಿ 25,73,143 ಮಂದಿಗೆ ಕೊರೊನಾ ತಗುಲಿದ್ದು, 6,88,129 ಮಂದಿ ಗುಣಮುಖರಾಗಿದ್ದಾರೆ. 1,77,602 ಮಂದಿ ಮೃತಪಟ್ಟಿದ್ದಾರೆ.












Click it and Unblock the Notifications