ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಿಕ್ಷುಕರ ಮಕ್ಕಳ ಬಾಳಿಗೆ ಆಶಾಕಿರಣವಾದ ಪೊಲೀಸ್‌ ಅಧಿಕಾರಿ

|
Google Oneindia Kannada News

ಲಕ್ನೋ, ಜುಲೈ, 21: ಅಯೋಧ್ಯೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಂಜಿತ್ ಯಾದವ್ ಎನ್ನುವವರು ಬಡ ಕುಟುಂಬಗಳ, ಅದರಲ್ಲೂ ಭಿಕ್ಷುಕರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಿ ಗಮನ ಸೆಳೆದಿದ್ದಾರೆ. ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ಒದಗಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಅಯೋದ್ಯೆಯಲ್ಲಿ ಎಷ್ಟೋ ಮಕ್ಕಳು ವಿದ್ಯಾಭ್ಯಾಸಕ್ಕೆ ಹಣವಿಲ್ಲದೆ ಭಿಕ್ಷಾಟನೆಗೆ ಇಳಿದಿದ್ದಾರೆ. ಅಷ್ಟೇ ಅಲ್ಲ ಮಕ್ಕಳ ಪೋಷಕರು ಕೂಡ ಕಡುಬಡತನದಲ್ಲಿದ್ದು, ಒಂದು ತುತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಪ್ರದೇಶಗಳಿಗೆ ಪೊಲೀಸ್‌ ಅಧಿಕಾರಿ ರಂಜಿತ್‌ ಭೇಟಿ ನೀಡಿ ಮಕ್ಕಳು ಅವರ ಪೋಷಕರಂತೆ ಆಗಬಾರದೆಂದು ಶಿಕ್ಷಣಕ್ಕೆ ನೆರವು ನೀಡಲು ಮುಂದಾಗಿದ್ದಾರೆ.

ಇದನ್ನೆಲ್ಲ ಪ್ರತಿನಿತ್ಯ ವೀಕ್ಷಣೆ ಮಾಡುತ್ತಿದ್ದ ಅವರು ಮಕ್ಕಳನ್ನು ಶಿಕ್ಷಣ ಕ್ಷೇತ್ರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡುವುದರ ಮೂಲಕ ಉಜ್ವಲ ಭವಿಷ್ಯವನ್ನು ಒದಗಿಸಲು ನಿರಂತರವಾಗಿ ಪ್ರಯತ್ನ ಪಡುತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ಅಲ್ಲಿನ ಮಕ್ಕಳಿಗೆ ಶಿಕ್ಷಣ ಅಂದರೆ ಅಚ್ಚುಮೆಚ್ಚು, ಆದರೆ ಅವರಿಗೆ ಸೂಕ್ತ ಸೌಲಭ್ಯಗಳಿಲ್ಲದೆ ಇರುವುದರಿಂದ ಭಿಕ್ಷಾಟನೆಯ ದಾರಿಯನ್ನು ಹಿಡಿದಿದ್ದರು. ಇದನ್ನೆಲ್ಲ ಗಮನಿಸುತ್ತಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ಮಕ್ಕಳ ಶಿಕ್ಷಣದ ನೆರವಿಗೆ ಧಾವಿಸಿ ಅವರಿಗೆ ಆಶಾಕಿರಣವಾಗಿದ್ದಾರೆ.

Police officer Ranjit Yadav help for beggars childrens education

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಂಜಿತ್ ಯಾದವ್ ಅವರು ಮಕ್ಕಳಿಗಾಗಿ ಕೆಲವು ತಿಂಗಳ ಹಿಂದೆ ತರಗತಿಗಳನ್ನು ಪ್ರಾರಂಭಿಸಿದರು. ಅಯೋಧ್ಯೆ ನಗರದಲ್ಲಿ ಮಕ್ಕಳ ಪೋಷಕರು ಭಿಕ್ಷೆ ಬೇಡುವುದನ್ನು ನೋಡಿದ ನಂತರ ರಂಜಿತ್ ಅವರು ಈ ನಿರ್ಧಾರಕ್ಕೆ ಇಳಿದಿದ್ದಾರೆ. ಇನ್ನು ಅಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಶಾಲೆಯ ಬಗ್ಗೆ ಮಾತನಾಡಿ ನಾವು ಶಿಕ್ಷಣಕ್ಕಾಗಿ ಶಾಲೆಗೆ ಹೋಗಲು ಬಯಸುತ್ತೇವೆ. ಇಲ್ಲಿ ನಮಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಪೊಲೀಸ್‌ ಅಧಿಕಾರಿ ರಂಜಿತ್‌, ನಾನು ಸ್ವಂತ ಶಾಲೆಯನ್ನು ಪ್ರಾರಂಭಿಸಿದ್ದೇನೆ. ರಜೆ ಸಿಕ್ಕಾಗಲೆಲ್ಲಾ ಮಕ್ಕಳಿಗೆ ಪಾಠ ಹೇಳಿಕೊಡುತ್ತೇನೆ. ಮಕ್ಕಳ ಪೋಷಕರು ಭಿಕ್ಷೆ ಬೇಡುವುದನ್ನು ಗಮನಿದ್ದೇನೆ. ನಂತರ ಅವರೊಂದಿಗೆ ಮಾತನಾಡಿ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದ್ದೇನೆ ಎಂದು ತಿಳಿಸಿದ್ದಾರೆ. 50ಕ್ಕೂ ಹೆಚ್ಚು ಮಕ್ಕಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಅವರಿಗೆ ಶಿಕ್ಷಣಕ್ಕೆ ಬೇಕಾದ ಪಠ್ಯಪುಸ್ತಕಗಳನ್ನು ಸಹ ಒದಗಿಸಲಾಗಿದೆ ಎಂದರು.

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹಣವಿದ್ದರೂ ಎಷ್ಟೋ ಮಕ್ಕಳು ಸುಮ್ಮನೆ ಸಮಯ ವ್ಯರ್ಥ ಮಾಡುವುದನ್ನು ನೋಡಿದ್ದೇವೆ. ಆದರೆ, ಅಯೋದ್ಯೆ ನಗರದಲ್ಲಿ ಕೆಲ ಮಕ್ಕಳು ಯಾವುದೇ ಮಾರ್ಗಗಳಿಲ್ಲದೆ ಶಿಕ್ಷಣ ವಂಚಿತರಾಗಿದ್ದರು. ಆ ಮಕ್ಕಳಿಗೆ ಕಲಿಯಬೇಕೆಂಬ ಹಂಬಲ. ಆದರೆ ಕಲಿಯಲು ಸೂಕ್ತ ಸೌಲಭ್ಯಗಳೇ ಇರಲಿಲ್ಲ. ಇವರ ತಂದೆ, ತಾಯಿಗಳು ಕೂಡ ತುತ್ತು ಅನ್ನಕ್ಕಾಗಿ ಅಲೆದಾಡಿದ್ದಾರೆ. ಇದನ್ನ ಗಮನಿಸಿದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಮಕ್ಕಳು ಪೋಷಕರಂತೆ ಭಿಕ್ಷಾಟನೆ ದಾರಿ ತುಳಿಯಬಾರದೆಂದು ಅವರಿಗಾಗಿ ಶಾಲೆಯನ್ನು ಆರಂಭಿಸಿ ಗಮನ ಸೆಳೆದಿದ್ದಾರೆ. ಮಕ್ಕಳಿಗೆ ಬಿಡುವಿನ ಸಮಯದಲ್ಲಿ ಇವರೇ ಹೋಗಿ ಪಾಠ ಪ್ರವಚನ ಮಾಡಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Recommended Video

ಜಿಂಬಾಬ್ವೆ ವಿರುದ್ಧ ಉತ್ತಮ ಪ್ರದರ್ಶನ ನೀಡದಿದ್ರೆ ಟೀಂ ಇಂಡಿಯಾದಿಂದ ಈ ಮೂವರಿಗೆ ಗೇಟ್ ಪಾಸ್ | *Cricket | OneIndia

English summary
Ayodhya Police Sub-Inspector Ranjit Yadav has drawn attention by providing free education to children of poor families, especially beggars. He has started an effort to provide a bright future for the childrens, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X