• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾವು ಅಮೇಥಿ ಗೆದ್ದಿಲ್ಲ, ಇಲ್ಲಿಯ ಜನರ ಹೃದಯ ಗೆದ್ದಿದ್ದೇವೆ : ನರೇಂದ್ರ ಮೋದಿ

|
   Lok sabha elections 2019 : ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡಿದ ಮೋದಿ..! | Oneindia kannada

   ಲಕ್ನೋ, ಮಾರ್ಚ್ 03 : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಅಮೇಥಿಯಲ್ಲಿ ಭಾನುವಾರ ಚುನಾವಣಾ ಪ್ರಚಾರ ಸಮಾವೇಶ ನಡೆಸಿದರು. 2014ರ ಬಳಿಕ ಅಮೇಥಿಗೆ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.

   ಭಾನುವಾರ ನರೇಂದ್ರ ಮೋದಿ ಅವರು ಅಮೇಥಿಯಲ್ಲಿ ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ತವರು ಕ್ಷೇತ್ರ ಅಮೇಥಿ. ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.

   PM Narendra Modi rally in Amethi, Uttar Pradesh

   '2014ರ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರನ್ನು ನೀವು ಅಮೇಥಿಯಲ್ಲಿ ಸೋಲಿಸಿದಿರಿ. ನಾವು ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ. ಆದರೆ, ನಿಮ್ಮ ಹೃದಯವನ್ನು ಗೆದ್ದಿದ್ದೇವೆ' ಎಂದು ನರೇಂದ್ರ ಮೋದಿ ಹೇಳಿದರು.

   ಎಕೆ 47 ಹೋಲುವ ಎಕೆ 203 ಉತ್ಪಾದನೆಗೆ ಮೋದಿಯಿಂದ ಚಾಲನೆ

   'ಜಗತ್ತಿನಲ್ಲಿಯೇ ಅತ್ಯಾಧುನಿಕ ಬಂದೂಕು ಅಮೇಥಿಯಲ್ಲಿ ತಯಾರಾಗಲಿದೆ. ನಮ್ಮ ಯೋಧರು ಮೇಡ್ ಇನ್ ಅಮೇಥಿ ಬಂದೂಕು ಹಿಡಿದು ಉಗ್ರರ ವಿರುದ್ಧ, ನಕ್ಸಲರ ವಿರುದ್ಧ ಹೊರಾಡಲಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

   Newest First Oldest First
   5:27 PM, 3 Mar
   ಅಮೇಥಿಯಲ್ಲಿ ಇಂದಿನ ಉತ್ಸಾಹ ನೋಡಿ ನನಗೆ ಭರವಸೆ ಮೂಡುತ್ತಿದೆ. ನೀವು ದೇಶದಲ್ಲಿ ಹೊಸ ಇತಿಹಾಸವನ್ನು ನಿರ್ಮಾಣ ಮಾಡಲಿದ್ದೀರಿ. ಅಮೇಥಿಯ ಜನರ ತೀರ್ಪನ್ನು ಇಡೀ ದೇಶವೇ ನೋಡಲಿದೆ.
   5:24 PM, 3 Mar
   ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ನೇರವಾಗಿ ಹಣ ಸಿಗಲಿವೆ. ಬಿತ್ತನೆ ಬೀಜ ಖರೀದಿ, ಔಷಧಿಗಳ ಖರೀದಿ ಮುಂತಾದವುಗಳನ್ನು ಖರೀದಿ ಮಾಡಬಹುದು
   5:23 PM, 3 Mar
   ಮತಗಳನ್ನು ಪಡೆದ ಬಳಿಕ ಬಡವರನ್ನು ಮರೆತು ಬಿಡುವುದು ಕೆಲವು ಕುಟುಂಬಗಳ ಸಾಮಾನ್ಯ ಪ್ರಕ್ರಿಯೆ. ಆದರೆ, ಬಡವರನ್ನು ಮರೆತ ಅವರು ಬಡವರ ಬಗ್ಗೆ ಮಾತನಾಡುತ್ತಾರೆ.
   5:19 PM, 3 Mar
   ನಿಯತ್ತು ಇಲ್ಲದ ಜನರು ಅಮೇಥಿಗೆ ಏನು ದ್ರೋಹ ಮಾಡಿದರು ಎಂಬುದು ನಿಮಗೆ ಬಿಟ್ಟು ಬೇರೆ ಯಾರಿಗೂ ಉತ್ತಮವಾಗಿ ಗೊತ್ತಿರಲು ಸಾಧ್ಯವಿಲ್ಲ.
   5:18 PM, 3 Mar
   ರಫೆಲ್ ಖರೀದಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ ಎಂದು ಹೇಳಿದೆ. ಹಿಂದಿನ ಸರ್ಕಾರ ಕಮೀಷನ್ ಸಿಗಲಿಲ್ಲ ಎಂದು ಈಗ ರಫೆಲ್ ಬಗ್ಗೆ ಆರೋಪಗಳನ್ನು ಮಾಡಲಿಲ್ಲ.
   5:16 PM, 3 Mar
   ನಮ್ಮ ದೇಶದಕ್ಕೆ ಆಧುನಿಕ ಬಂದೂಕು, ಬುಲೆಟ್ ಪ್ರೂಫ್ ಜಾಕೆಟ್ ಮಾತ್ರವಲ್ಲ ಅತ್ಯಾಧುನಿಕ ವಿಮಾನಗಳು ಬೇಕಾಗುತ್ತವೆ. ಆದರೆ, ಹಿಂದಿನ ಸರ್ಕಾರ ರಫೆಲ್ ವಿಮಾನದ ಖರೀದಿಯನ್ನು ಮಾಡಲಿಲ್ಲ
   5:14 PM, 3 Mar
   ಹಿಂದಿನ ಸರ್ಕಾರ ನಮ್ಮ ಯೋಧರ, ರಕ್ಷಣಾ ಪಡೆಗಳ ಸುರಕ್ಷತೆಯನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಯೋಧರಿಗಾಗಿ ಬುಲೆಟ್ ಫ್ರೂಫ್ ಜಾಕೆಟ್ ಖರೀದಿ ಮಾಡಲಿಲ್ಲ.
   5:13 PM, 3 Mar
   ಜಗತ್ತಿನಲ್ಲಿಯೇ ಅತ್ಯಾಧುನಿಕ ಬಂದೂಕು ಅಮೇಥಿಯ ಈ ಘಟಕದಲ್ಲಿ ಸ್ಥಾಪನೆಯಾಗಲಿದೆ. ಅಮೇಥಿಯ ಯುವಜನರಿಗೆ ಉದ್ಯೋಗದ ಭರವಸೆ ನೀಡಿದ ಹಿಂದಿನ ಸರ್ಕಾರ ನಿಮ್ಮ ಸಂಸದರು 10 ವರ್ಷ ಏನು ಮಾಡಿದರು ಎಂದು ಕೇಳಿ
   5:12 PM, 3 Mar
   2010ರಲ್ಲಿ ಕಾರ್ಯ ಆರಂಭವಾಗಬೇಕಿದ್ದ ಘಟಕ 2019ರಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಏಕೆ ಸರ್ಕಾರ ಈ ಕೆಲಸವನ್ನು ಮಾಡಲಿಲ್ಲ ಎಂದು ನೀವು ಕೇಳಿ
   5:10 PM, 3 Mar
   ಈ ಘಟಕ 10 ವರ್ಷಗಳ ಹಿಂದೆ ಆಗಬೇಕಿತ್ತು. ನಿಮ್ಮ ಸಂಸದರು 2010ರಲ್ಲಿ ಈ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದ್ದರು. ಅವರದ್ದೇ ಪಕ್ಷದ ಸಂಸದರ ಇದ್ದರು ಘಟಕ ಸ್ಥಾಪನೆಯಾಗಲಿಲ್ಲ.
   5:08 PM, 3 Mar
   ರಷ್ಯಾ ಸಹಕಾರದೊಂದಿಗೆ ಅಮೇಥಿಯಲ್ಲಿ ಬಂದೂಕಿನ ಘಟಕ ಆರಂಭಿಸಲಾಗಿದೆ. ಇದಕ್ಕಾಗಿ ನಾನು ಪುಟಿನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರಿಂದ ಇಲ್ಲಿನ ಯುವಕರಿಗೆ ಉದ್ಯೋಗ ಸಿಗಲಿದೆ.
   5:08 PM, 3 Mar
   2022ರಲ್ಲಿ ನಮ್ಮ ಸೈನಿಕರು ಬಳಸುವ ಬಂದೂರು ಮೇಡ್ ಇನ್ ಅಮೇಥಿ ಎಂದು ಇರುತ್ತದೆ. ಉಗ್ರರ ವಿರುದ್ಧ, ನಕ್ಸಲರ ವಿರುದ್ಧ ಯೋಧರು ಅದನ್ನು ಬಳಸುತ್ತಾರೆ.
   5:07 PM, 3 Mar
   2014ರ ಚುನಾವಣೆಯಲ್ಲಿ ನಾವು ಅಮೇಥಿಯನ್ನು ಗೆದ್ದಿಲ್ಲ. ಆದರೆ, ನಿಮ್ಮ ಹೃದಯವನ್ನು ಗೆದ್ದಿದ್ದೇವೆ.
   5:06 PM, 3 Mar
   ನಮ್ಮ ಸಬ್ ಕೇ ಸಾಥ್ ಸಬ್ ಕೇ ವಿಕಾಸ್ ಮಂತ್ರಕ್ಕೆ ಅಮೇಥಿ ಉತ್ತಮ ಉದಾಹರಣೆ. ನಮಗೆ ಓಟು ಕೊಟ್ಟವರು, ಓಟು ಕೊಡದೇ ಇರುವವರು ಸಹ ನಮ್ಮವರು. 5 ವರ್ಷಗಳ ಬಳಿಕ ನಾನು ಅಮೇಥಿಗೆ ಬಂದಿದ್ದಾನೆ.
   5:05 PM, 3 Mar
   ಸ್ಮೃತಿ ಇರಾನಿ ಅಭ್ಯರ್ಥಿಯಾಗಿ ನಿಮ್ಮ ಮುಂದೆ ಬಂದಿದ್ದರು. ಆದರೆ, ನೀವು ಅವರಿಗೆ ಆಶೀರ್ವಾದ ಮಾಡಲಿಲ್ಲ. ಆದರೆ, ನಾವು ನಿಮ್ಮ ಅಭಿವೃದ್ಧಿ ನೋಡಿದೆವು. ನೀವು ಯಾರನ್ನು ಗೆಲ್ಲಿಸಿದಿರಿ, ಸೋಲಿಸಿದಿರಿ ಎಂದು ನೋಡಲಿಲ್ಲ.

   English summary
   Prime Minister Narendra Modi rally in Amethi, Uttar Pradesh on March 3, 2019. Amethi parliamentary constituency of Congress president Rahul Gandhi.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X