• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾರಣಾಸಿಯಿಂದ ಮೋದಿ ಮತ್ತೆ ಕಣಕ್ಕೆ, ಗರಿಗೆದರಿದ ಉತ್ತರ ಪ್ರದೇಶ ರಾಜಕೀಯ

|
   Lok Sabha Elections 2019 : ನರೇಂದ್ರ ಮೋದಿಯವರು ಮತ್ತೆ ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ

   ಲಖ್ನೋ, ಮಾರ್ಚ್ 9: ಪ್ರಧಾನಿ ನರೇಂದ್ರ ಮೋದಿ ಮತ್ತೆ ವಾರಣಾಸಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಈ ಹಿಂದೆ ಸುಮಾರು 3 ಲಕ್ಷ ಮತಗಳಿಂದ ಆಮ್‌ಆದ್ಮಿ ಪಕ್ಷದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದ ವಾರಣಾಸಿ ಕ್ಷೇತ್ರದಿಂದ ಮೋದಿ ಎರಡನೇ ಬಾರಿಗೆ ಸ್ಪರ್ಧಿಸಲಿದ್ದಾರೆ.

   ಆದರೆ ಪ್ರಧಾನಿ ಮೋದಿ ಸ್ಪರ್ಧಿಸಲಿರುವ ಎರಡನೇ ಕ್ಷೇತ್ರದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ, ಶುಕ್ರವಾರ ರಾತ್ರಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

   ವಾರಣಾಸಿಯಿಂದ ಮತ್ತೊಮ್ಮೆ ಲೋಕಸಭೆಗೆ ಪ್ರಧಾನಿ ಮೋದಿ ಸ್ಪರ್ಧೆ?

   ಇದರೊಂದಿಗೆ ಉತ್ತರ ಪ್ರದೇಶದ ಲೋಕಸಭಾ ಕಣಕ್ಕೆ ಹೆಚ್ಚಿನ ಕಳೆ ಬಂದಂತಾಗಿದೆ. ಈಗಾಗಲೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಸೇರಿದಂತೆ ಇನ್ನಿತರೆ ಪ್ರವೇಶದಿಂದ ಉತ್ತರ ಪ್ರದೇಶ ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಪಟ್ಟವನ್ನು ಪಡೆದಿತ್ತು.

   ಪ್ರಧಾನಿ ವಾರಣಾಸಿಯಿಂದ ಬೇರೆಯ ಕಡೆ ಕ್ಷೇತ್ರ ಬದಲಿಸುತ್ತಾರೆ ಎಂಬ ಊಹಾಪೋಹಗಳಿದ್ದವು ಆದರೆ ಕಳೆದ ಐದು ವರ್ಷಗಳಿಂದ ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ಅಲ್ಲಿಂದಲೇ ಕಣಕ್ಕಿಳಿಯಲು ಮೋದಿ ತೀರ್ಮಾನಿಸಿದ್ದಾರೆ.

   2014ರಲ್ಲಿ ಬಿಜೆಪಿ ಗೆದ್ದ ಹೈಪ್ರೊಫೈಲ್ ಲೋಕಸಭಾ ಸೀಟುಗಳು

   ಧಾರ್ಮಿಕ ಹಾಗೂ ರಾಜಕೀಯ ಕಾರಣಗಳಿಂದಲೂ ವಾರಣಾಸಿ ಸಾಕಷ್ಟು ಮಹತ್ವ ಪಡೆದಿದೆ. ಇನ್ನೊಂದೆಡೆ ಬಿಜೆಪಿಯು ತನ್ನ 75 ವರ್ಷದ ಮಿತಿಯ ಪಟ್ಟನ್ನು ಸಡಿಲಿಸಲು ನಿರ್ಧರಿಸಿದೆ. ಗೆಲ್ಲುವ ಅಭ್ಯರ್ಥಿಗಳ ವಯಸ್ಸು ಎಷ್ಟೇ ಆಗಿದ್ದರೂ ಅಲ್ಲಿಂದ ಟಿಕೆಟ್ ನೀಡಲು ನಿರ್ಧರಿಸಿದೆ. 75 ವರ್ಷಕ್ಕಿಂತ ಅಧಿಕ ವಯಸ್ಸಿನ ಅಭ್ಯರ್ಥಿಗಳಿದ್ದರೆ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಇದೆ ಎನ್ನುವ ಮಾತುಗಳಿದ್ದವು. ಹೀಗಾಗಿ ಹಿಡಿಯ ಮುಖಂಡರಾದ ಎಲ್‌ಕೆ ಅಡ್ವಾಣಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

   English summary
   In a hope to continue his winning streak, Prime Minister Narendra Modi is all set to contest from Uttar Pradesh's Varanasi seat again in the upcoming Lok Sabha elections. The second seat will be finalised later.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X