Arecanut Price: ಶಿವಮೊಗ್ಗ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮೇ 22ರ ದರಪಟ್ಟಿ
Arecanut Price: ಅಡಿಕೆ ಧಾರಣೆಯಲ್ಲಿ ಏರಿಳಿತ ಆಗುತ್ತಲಿರುತ್ತದೆ. ಹಾಗಾದ್ರೆ ಮಲೆನಾಡಿನ ಹೆಬ್ಬಾಗಿಲು ಅಂತಲೇ ಪ್ರಸಿದ್ಧಿ ಆಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಇಂದು (ಮೇ 22) ಯಾವ ರೀತಿಯ ಅಡಿಕೆ ಧಾರಣೆ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅಡಿಕೆ ಧಾರಣೆ ಎಲ್ಲಾ ಕಡೆಗಳಲ್ಲೂ ಒಂದೇ ರೀತಿ ಇರುವುದಿಲ್ಲ, ತುಸು ವ್ಯತ್ಯಾಸ ಇರುತ್ತದೆ. ಅದರಲ್ಲೂ ರಾಜ್ಯದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ದೊಡ್ಡ ಮಾರುಕಟ್ಟೆಗಳಿದ್ದು, ಈ ಭಾಗಗಳ ಬೆಳೆಗಾರರು ಬೆಲೆಯನ್ನು ಗಮನಿಸಿ ಯಾವ ಮಾರುಕಟ್ಟೆಗೆ ಹಾಕಬೇಕೆಂದು ನಿರ್ಧರಿಸುತ್ತಾರೆ. ಯಾಕಂದ್ರೆ ಹಾಕಿದ ಶ್ರಮಕ್ಕೆ ತಕ್ಕಂತೆ ತಕ್ಕ ಪ್ರತಿಫಲ ಅವರ ಬಯಕೆ ಆಗಿರುತ್ತದೆ. ಇಲ್ಲದಿದ್ದರೆ ಎಲ್ಲಿ ನಷ್ಟ ಅನುಭವಿಸುತ್ತೇವೆಯೋ ಎನ್ನುವ ಆತಂಕವೂ ಕಾಡುತ್ತಿರುತ್ತದೆ. ಹಾಗಾದ್ರೆ ಇಂದು ಯಾವ ಅಡಿಕೆ ಧಾರಣೆ ಎಷ್ಟಿದೆ ಎಂದು ಇಲ್ಲಿ ಗಮನಿಸಿ.


ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 55,555 ರೂಪಾಯಿ
* ಗರಿಷ್ಠ - 94,696 ರೂಪಾಯಿ
ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಟ್ಟೆ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 50,069 ರೂಪಾಯಿ
* ಗರಿಷ್ಠ - 64,500 ರೂಪಾಯಿ
ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 43,899 ರೂಪಾಯಿ
* ಗರಿಷ್ಠ - 53,759 ರೂಪಾಯಿ
ಶಿವಮೊಗ್ಗ ಮಾರುಕಟ್ಟೆಯಲ್ಲಿ ಗೊರಬಲು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 19,000 ರೂಪಾಯಿ
* ಗರಿಷ್ಠ - 43,099 ರೂಪಾಯಿ
ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 48,244 ರೂಪಾಯಿ
* ಗರಿಷ್ಠ - 48,244 ರೂಪಾಯಿ
ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಸಿಪ್ಪೆಗೋಟು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 15,000 ರೂಪಾಯಿ
* ಗರಿಷ್ಠ - 15,000 ರೂಪಾಯಿ
ಭದ್ರಾವತಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 51,500 ರೂಪಾಯಿ
* ಗರಿಷ್ಠ - 53,099 ರೂಪಾಯಿ
ಸಾಗರ ಮಾರುಕಟ್ಟೆಯಲ್ಲಿ ಕೆಂಪುಗೋಟು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 30,009 ರೂಪಾಯಿ
* ಗರಿಷ್ಠ - 41,509 ರೂಪಾಯಿ
ಸಾಗರ ಮಾರುಕಟ್ಟೆಯಲ್ಲಿ ಕೋಕ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 12,199 ರೂಪಾಯಿ
* ಗರಿಷ್ಠ - 34,009 ರೂಪಾಯಿ
ಸಾಗರ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 32,999 ರೂಪಾಯಿ
* ಗರಿಷ್ಠ - 42,999 ರೂಪಾಯಿ
ಸಾಗರ ಮಾರುಕಟ್ಟೆಯಲ್ಲಿ ಬಿಳೆ ಗೋಟು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 20,666 ರೂಪಾಯಿ
* ಗರಿಷ್ಠ - 33,101 ರೂಪಾಯಿ
ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 37,099 ರೂಪಾಯಿ
* ಗರಿಷ್ಠ - 62,599 ರೂಪಾಯಿ
ಸಾಗರ ಮಾರುಕಟ್ಟೆಯಲ್ಲಿ ಸಿಪ್ಪೆಗೋಟು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 10,599 ರೂಪಾಯಿ
* ಗರಿಷ್ಠ - 21,789 ರೂಪಾಯಿ
ಹಿಂದಿನ ದಿನದ ಅಡಿಕೆ ಧಾರಣೆ
ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 56,399 ರೂಪಾಯಿ
* ಗರಿಷ್ಠ - 93,729 ರೂಪಾಯಿ
ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಟ್ಟೆ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 53,099 ರೂಪಾಯಿ
* ಗರಿಷ್ಠ - 65,300 ರೂಪಾಯಿ
ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 40,900 ರೂಪಾಯಿ
* ಗರಿಷ್ಠ - 53899 ರೂಪಾಯಿ
ಶಿವಮೊಗ್ಗ ಮಾರುಕಟ್ಟೆಯಲ್ಲಿ ಗೊರಬಲು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 20,511 ರೂಪಾಯಿ
* ಗರಿಷ್ಠ - 42,511 ರೂಪಾಯಿ
ಇದೀಗ ರಣಬಿಸಿಲು ಮುಂದುವರೆದ ಕಾರಣ ಗಿಡಗಳನ್ನು ರಕ್ಷಣೆ ಮಾಡುವುದೇ ದೊಡ್ಡ ಸವಾಲಾಗಿದೆ. ಈಗಾಗಲೇ ಬಹುತೇಕ ಭಾಗಗಳಲ್ಲಿ ರಕ್ಷಣೆ ದಾರಿಯನ್ನು ಕಂಡುಕೊಂಡಿದ್ದು, ಪ್ರತಿ ಗಿಡಕ್ಕೂ ಸುಣ್ಣ ಬಳಿದು ಗರಿ ಕಟ್ಟುವ ಕಟ್ಟಲಾಗಿದೆ. ಇಲ್ಲದಿದ್ದರೆ ಸೂರ್ಯನ ಶಾಖಕ್ಕೆ ಬುಡದಲ್ಲಿ ಬಿರುಕು ಬಿಟ್ಟು ಹಾಳಾಗುವ ಸಾಧ್ಯತೆ ಇರುತ್ತದೆ. ಮತ್ತೊಂದೆಡೆ ಭಾರಿ ಬಿಸಿಲಿನ ನಡುವೆಯೇ ಹಲವೆಡೆ ಮಳೆಯಾಗುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕೆಲವೆಡೆ ಭಾರಿ ಮಳೆಯಿಂದಾಗಿ ಗಿಡಗಳು ಧರೆಗುರುಳಿ ಬೆಳೆಗಾರರು ಕಂಗಾಲಾಗಿರುವ ಘಟನೆಗಳು ಕೂಡ ನಡೆದಿವೆ.












Click it and Unblock the Notifications