"ಉಕ್ರೇನ್‌ನಲ್ಲಿ ನಮ್ಮವರು ಸಿಲುಕಿರುವಾಗ ಪ್ರಚಾರದಲ್ಲೇ ಮೋದಿ ಬ್ಯುಸಿ"
ಲಕ್ನೋ, ಮಾರ್ಚ್ 3: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ನೆಲದಲ್ಲಿ ಭಾರತೀಯ ಮಕ್ಕಳಲು ಸಿಲುಕಿಕೊಂಡಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರು ಪ್ರಚಾರದಲ್ಲೇ ಬ್ಯುಸಿ ಆಗಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
"ನಿನ್ನೆ ನಾನು ವಿಮಾನ ನಿಲ್ದಾಣದಿಂದ ಘಾಟ್‌ಗೆ ಹೋಗುತ್ತಿದ್ದಾಗ, ಕೆಲವು ಬಿಜೆಪಿ ಕಾರ್ಯಕರ್ತರು, ತಮ್ಮ ವಾಹನವನ್ನು ತಡೆದು ನಿಲ್ಲಿಸಿದರು. ನಡುರಸ್ತೆಯಲ್ಲೇ ಗೂಂಡಾಗಿರಿ ಪ್ರದರ್ಶಿಸಿದ್ದನ್ನು ನಾನು ನೋಡಿದೆ. ನನ್ನ ಕಾರಿನ ಮೇಲೆ ಕೋಲುಗಳಿಂದ ಹೊಡೆದ ಅವರು ವಾಪಸ್ ಹೋಗುವಂತೆ ಆವಾಜ್ ಹಾಕಿದರು," ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಸಮಾಜವಾದಿ ಪಕ್ಷದ ಪರವಾಗಿ ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಕೆಲವು ಉದ್ರಿಕ್ತರ ಗುಂಪು ತಮ್ಮನ್ನು ತಡೆದಿರುವುದರ ಬಗ್ಗೆ ಮಮತಾ ಬ್ಯಾನರ್ಜಿ ವಿವರಿಸಿದ್ದಾರೆ. ಅದೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಾನು ಹೇಡಿಯಲ್ಲ ಎಂದ ದೀದಿ:
"ನನಗೆ ಭಯವಿಲ್ಲ. ನಾನು ಹೇಡಿಯಲ್ಲ. ನಾನೊಬ್ಬ ಹೋರಾಟಗಾರ್ತಿ. ನನ್ನ ಜೀವನದಲ್ಲಿ ನಾನು ಹಲವಾರು ಬಾರಿ ಹಲ್ಲೆ ಮತ್ತು ಗುಂಡಿನ ದಾಳಿಗಳನ್ನು ಎದುರಿಸಿದ್ದೇನೆ. ಆದರೆ ನಾನು ಎಂದಿಗೂ ತಲೆಬಾಗಿಲ್ಲ. ನಿನ್ನೆ ಅವರು ನನ್ನನ್ನು ಸುತ್ತುವರೆದಿರುವಾಗ, ನಾನು ನನ್ನ ಕಾರಿನಿಂದ ಇಳಿದು ಅವರು ಏನು ಮಾಡಬಹುದು ಎಂದು ನೋಡಲು ಎದುರಿಸಿದೆ. ಅವರು ಹೇಡಿಗಳು," ಎಂದು ಮಮತಾ ಬ್ಯಾನರ್ಜಿ ಹೇಳಿಕೊಂಡಿದ್ದಾರೆ.
आज वाराणसी (UP) में BJP के कुछ कार्यकर्ताओं ने जिस तरह @MamataOfficial दीदी की गाड़ी रुकवा कर काले झंडे लहराये, वह बताता है कि भाजपाई कितने घबराये हुए हैं!
— Ashok Tanwar (@Tanwar_Indian) March 2, 2022
यह ममता दीदी का सत्य का बल और तेज है, कि वे गाड़ी से उतर कर सामने खड़ी हो गईं और कोई कार्यकर्ता पास आने की हिम्मत न कर सका। pic.twitter.com/KSr5shKfLH
ಉತ್ತರ ಪ್ರದೇಶ ಪ್ರಚಾರದಲ್ಲಿ ಪ್ರಧಾನಿ ಬ್ಯುಸಿ:
ರಷ್ಯಾ ನಡೆಸುತ್ತಿರುವ ಆಕ್ರಮಣದ ಮಧ್ಯೆ ಉಕ್ರೇನ್ ನೆಲದಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡು ನರಳುತ್ತಿದ್ದಾರೆ. ಇಂಥ ಸಂದರ್ಭದಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಚಾರದಲ್ಲೇ ಬ್ಯುಸಿ ಆಗಿ ಬಿಟ್ಟಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು.
ಕೇಂದ್ರ ಸರ್ಕಾರದ ಜವಾಬ್ದಾರಿ ನೆನಪಿಸಿದ ದೀದಿ:
ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದರು. ಕೇಂದ್ರ ಸರ್ಕಾರವು ಅಲ್ಲಿ ಸಿಲುಕಿರುವ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ನಾನು ಶಾಂತಿಯ ಪರವಾಗಿರುತ್ತೇನೆಯೇ ಹೊರತೂ ಯುದ್ಧದ ಪರವಾಗಿ ಅಲ್ಲ. ಕೊವಿಡ್-19 ಸಾಂಕ್ರಾಮಿಕ ರೋಗವು ಈಗಾಗಲೇ ಸಾಕಷ್ಟು ನಾಶವಾಗಿದೆ. ವಿಶ್ವಶಾಂತಿಯನ್ನು ಕಾಪಾಡಲು ಭಾರತ ಮಾತುಕತೆ ನಡೆಸಬಹುದು ಎಂದು ಬ್ಯಾನರ್ಜಿ ಹೇಳಿದ್ದರು.
ರಾಜಕೀಯಕ್ಕಿಂತ ವಿದ್ಯಾರ್ಥಿಗಳ ಬದುಕು ಮುಖ್ಯ:
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಸಮಾಜವಾದಿ ಪಕ್ಷದ ಪರ ಪ್ರಚಾರಕ್ಕೆ ತೆರಳುವ ಮುನ್ನ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದರು. ರಾಜಕೀಯಕ್ಕಿಂತ ಮಾನವೀಯತೆ ಮುಖ್ಯವಾಗಿದ್ದು, ಕೇಂದ್ರ ಸರ್ಕಾರ ಇದನ್ನು ಅರಿತುಕೊಳ್ಳಬೇಕು. ರಾಜಕೀಯಕ್ಕಿಂತ ವಿದ್ಯಾರ್ಥಿಗಳ ಬದುಕು ಮುಖ್ಯವಾಗಿದೆ ಎಂದು ಹೇಳಿದರು.












Click it and Unblock the Notifications