'ಇದು ಸಹಜ ಅಪಘಾತವಲ್ಲ ನಮ್ಮನ್ನು ಮುಗಿಸಲು ವ್ಯವಸ್ಥಿತ ಪಿತೂರಿ'

ನವದೆಹಲಿ, ಜುಲೈ 29: 'ಇದು ಸಹಜವಾಗಿ ಸಂಭವಿಸಿದ ಅಪಘಾತವಲ್ಲ, ನಮ್ಮನ್ನು ಮುಗಿಸಲು ಮಾಡಿದ್ದ ವ್ಯವಸ್ಥಿತ ಪಿತೂರಿ' ಎಂದು ಉನ್ನಾವೋ ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ.

ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಗಾರ್ ಪ್ರಮುಖ ಆರೋಪಿಯಾಗಿರುವ ಉನ್ನವೋ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಭಾರೀ ತಿರುವು ಪಡೆದುಕೊಂಡಿದ್ದು ಇಂದು ಸಂಭವಿಸಿದ ಭೀಕರ ಅಪಘಾತ ಅತ್ಯಾಚಾರ ಸಂತ್ರಸ್ತೆ ಗಂಭೀರ ಗಾಯಗೊಂಡಿದ್ದು, ಆಕೆಯ ವಕೀಲೆ ಮತ್ತು ಪ್ರಮುಖ ಸಾಕ್ಷಿ ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದ ಉನ್ನಾವೋ ಮತ್ತು ಲಾಲ್ ಗಂಜ್ ವಿಭಾಗದಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ 232ರಲ್ಲಿ ಅಪಘಾತ ಸಂಭವಿಸಿದ್ದು ಅತ್ಯಾಚಾರ ಸಂತ್ರಸ್ತೆ, ಆಕೆಯ ವಕೀಲೆ ಮತ್ತು ಪ್ರಮುಖ ಸಾಕ್ಷಿ ತೆರಳುತ್ತಿದ್ದ ಕಾರಿಗೆ ಟ್ರಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿತ್ತು.

Not Just a Accident Conspiracy Behind

ಸಂತ್ರಸ್ತೆ ಮತ್ತು ಆಕೆಯ ತಾಯಿಗೆ ಗಂಭೀರ ಗಾಯವಾಗಿದ್ದು ತಾಯಿಯನ್ನು ಲಖನೌದ ಟ್ರಾಮ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು ಸಂತ್ರಸ್ತೆ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಉನ್ನಾವೋ ಸಂತ್ರಸ್ತೆ ತಾಯಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದು, ಇದು ಸಹಜ ಅಪಘಾತವಲ್ಲ, ನಮ್ಮನ್ನು ಕೊಲ್ಲುವುದೇ ಉದ್ದೇಶವಾಗಿತ್ತು.ಅದೃಷ್ಟ ವಶಾತ್ ನಾವು ಬದುಕುಳಿದಿದ್ದೇವೆ ಎಂದು ಆರೋಪಿಸಿದ್ದಾರೆ.

ಕಾರಿಗೆ ಗುದ್ದಿದ್ದ ಟ್ರಕ್‌ನ ನಂಬರ್‌ ಪ್ಲೇಟ್‌ಗೆ ಕಪ್ಪು ಮಸಿ ಬಳಿಯಲಾಗಿತ್ತು.ಆರೋಪಿಯೇ ಜೈಲಿನಲ್ಲಿದ್ದುಕೊಂಡೇ ಈ ಕೆಲಸ ಮಾಡಿಸಿದ್ದಾನೆ ಎಂದಿದ್ದಾರೆ. ಟ್ರಕ್ ಡ್ರೈವರ್ ಹಾಗೂ ಮಾಲೀಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷದಿಂದ ಬಿಜೆಪಿ ಶಾಸಕ ಕುಲ್ ದೀಪ್ ಸೆಂಗರ್ ಮತ್ತು ಸೋದರ ಅತುಲ್ ಸಿಂಗ್ ಜೈಲಿನಲ್ಲೇ ಇದ್ದಾರೆ. ಸಂತ್ರಸ್ತೆಯ ಅತ್ತೆಯ ಗಂಡ ರಾಯ್ ಬರೇಲಿ ಜೈಲಿನಲ್ಲಿದ್ದು ಅವರನ್ನು ಭೇಟಿಯಾಗಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ಅಪಘಾತದ ಬಳಿಕ ಸಂತ್ರಸ್ತೆಯ ಅತ್ತೆ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಮೃತಪಟ್ಟರೆ, ತಾಯಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಇನ್ನು ಕಾರನ್ನು ಚಲಾಯಿಸುತ್ತಿದ್ದ ನ್ಯಾಯವಾದಿ ಮಹೇಂದ್ರ ಸಿಂಗ್ ಮತ್ತು ಸಂತ್ರಸ್ತೆ ಗಂಭೀರವಾಗಿ ಗಾಯಗೊಂಡು ಲಕ್ನೋ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+