'ನೋ ವಿಐಪಿ'- ಕೈಪಂಪ್ ನೀರಿನಲ್ಲಿ ಸ್ನಾನ ಮಾಡಿದ ಯುಪಿ ಸಚಿವ
ಲಕ್ನೋ ಮೇ 7: ಪಕ್ಷದ ಕಾರ್ಯಕರ್ತರೊಬ್ಬರ ಮನೆಯಲ್ಲಿ ರಾತ್ರಿ ತಂಗಿದ್ದ ಉತ್ತರ ಪ್ರದೇಶದ ಸಚಿವರೊಬ್ಬರು ಕೈಪಂಪ್‌ನ ನೀರಿನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಸರಕಾರದಲ್ಲಿ ವಿಐಪಿ ಸಂಸ್ಕೃತಿ ಇಲ್ಲ ಎಂದು ಒತ್ತಿ ಹೇಳಿದ್ದಾರೆ.
ಕೈಗಾರಿಕಾ ಅಭಿವೃದ್ಧಿ ಸಚಿವ ನಂದ ಗೋಪಾಲ್ ಗುಪ್ತಾ 'ನಂದಿ' ಅವರು ಶಹಜಹಾನ್‌ಪುರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಚಿತ್ರೀಕರಿಸಿದ ವಿಡಿಯೊಗಳನ್ನು ಟ್ವೀಟ್ ಮಾಡಿದ್ದಾರೆ. ಒಂದು ಕ್ಲಿಪ್‌ನಲ್ಲಿ ಶಹಜಹಾನ್‌ಪುರ ಜಿಲ್ಲೆಯ ಚಕ್ ಕನ್ಹೌ ಗ್ರಾಮದಲ್ಲಿ ಅವರು ಹ್ಯಾಂಡ್ ಪಂಪ್ ಬಳಿ ಸ್ನಾನ ಮಾಡುತ್ತಿರುವುದು ಕಂಡುಬರುತ್ತದೆ. ಜೊತೆಗೆ ನಂತರ ಸ್ನಾನ ಮಾಡಿದ ನಂತರ ಒಂದು ಕಪ್ ಚಹಾದೊಂದಿಗೆ ದಿನವನ್ನು ಪ್ರಾರಂಭಿಸಿದರೆಂದು ಅವರು ಹೇಳಿದರು.
आज शाहजहांपुर जनपद के सिंधौली विकासखंड के चक कन्हऊ गांव में श्रीमती सहोदरा जी पत्नी श्री लीलाराम जी के घर पर रात्रि विश्राम के बाद सुबह की चाय और लोगों से बातचीत करते हुए दिन की शुरुआत हुई। वहीं हैंडपंप के पानी से स्नान किया। pic.twitter.com/fbewNxpx2b
— Nand Gopal Gupta 'Nandi' (@NandiGuptaBJP) May 7, 2022
ಟ್ವಿಟ್ಟರ್‌ನಲ್ಲಿ ಮತ್ತೊಂದು ವಿಡಿಯೋದಲ್ಲಿ ಗುಪ್ತಾ ಸಿದ್ಧವಾಗುತ್ತಿರುವುದು ಕಂಡು ಬಂದಿದೆ. ಹಿಂದಿಯಲ್ಲಿ ಬರೆದಿರುವ ಪೋಸ್ಟ್‌ನಲ್ಲಿ, "ಯೋಗಿ ಸರ್ಕಾರ ಮತ್ತು ಹಿಂದಿನ ಸರ್ಕಾರಗಳ ನಡುವಿನ ವ್ಯತ್ಯಾಸವಾಗಿದೆ. ಯೋಗಿ ಸರ್ಕಾರ ಮತ್ತು ಸಾಮಾನ್ಯ ಜನರ ನಡುವೆ ಯಾವುದೇ ಅಂತರ ಅಥವಾ ಯಾವುದೇ ವ್ಯತ್ಯಾಸವಿಲ್ಲ.

ಈ ಸರ್ಕಾರದಲ್ಲಿ ವಿಐಪಿ ಸಂಸ್ಕೃತಿ ಇಲ್ಲ" ಎಂದು ಬರೆದುಕೊಂಡಿದ್ದಾರೆ. ನಂದಗೋಪಾಲ್ ಗುಪ್ತ ಗ್ರಾಮಕ್ಕೆ ಗುಪ್ತಾ ಭೇಟಿಯ ಸಮಯದಲ್ಲಿ ಪ್ರದೇಶಗಳಲ್ಲಿನ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನವನ್ನು ಪರಿಶೀಲಿಸಿದ್ದಾರೆ.
आज शाहजहांपुर जनपद के सिंधौली विकासखंड के चक कन्हऊ गांव में श्रीमती सहोदरा जी पत्नी श्री लीलाराम जी के घर पर रात्रि विश्राम के बाद सुबह की चाय और लोगों से बातचीत करते हुए दिन की शुरुआत हुई। वहीं हैंडपंप के पानी से स्नान किया। pic.twitter.com/fbewNxpx2b
— Nand Gopal Gupta 'Nandi' (@NandiGuptaBJP) May 7, 2022
ಕಳೆದ ವಾರ ಬರೇಲಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗುಪ್ತಾ ಅವರು ಭರತೌಲ್ ಗ್ರಾಮದ ನಾಗರಿಕರ ಮನೆಯಲ್ಲಿ ರಾತ್ರಿ ತಂಗಿದ್ದರು. ಅಲ್ಲಿ ಕೈ ಪಂಪ್ ನೀರಿನಲ್ಲಿ ಸ್ನಾನ ಮಾಡಿದ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಸಚಿವರ ಸರಳತೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಪ್ರತಿಯೊಬ್ಬರೂ ಈ ಸರಳತೆಯನ್ನು ಇಷ್ಟಪಡುತ್ತಾರೆ" ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Click it and Unblock the Notifications