ಫೋಟೋಗ್ರಾಫರ್ ಕರೆಸಿಲ್ಲ ಎಂದು ಮದುವೆಯನ್ನೇ ನಿಲ್ಲಿಸಿದ ವಧು!
ಲಕ್ನೋ: ವಧು ವರನನ್ನು ಮದುವೆ ಸಮಯದಲ್ಲಿ ತಾನು ಬೇರೊಬ್ಬ ಹುಡುಗನ್ನು ಪ್ರೀತಿಸುತ್ತಿದ್ದೇನೆ ಎಂಬ ಕಾರಣಕ್ಕಾಗಿಯೋ ಇಲ್ಲ ತನಗಿಷ್ಟವಿಲ್ಲದೆ ಮದುವೆ ಮಾಡಲಾಗುತ್ತಿದೆ ಎಂಬ ಕಾರಣಕ್ಕಾಗಿಯೋ ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ ಅನೇಕ ಉದಾಹರಣೆಗಳು ಇವೇ. ಆದರೆ ಇಲ್ಲೊಬ್ಬ ವಧು ತನ್ನ ಮದುವೆಗೆ ಛಾಯಾಗ್ರಾಹಕನನ್ನು ವ್ಯವಸ್ಥೆ ಮಾಡಲು ಕರೆತರದ ಕಾರಣ ಉತ್ತರ ಪ್ರದೇಶದ ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.
ಕಾನ್ಪುರ ದೇಹತ್ ಜಿಲ್ಲೆಯ ಹಳ್ಳಿಯೊಂದರಿಂದ ಭಾನುವಾರ ಈ ಘಟನೆ ವರದಿಯಾಗಿದೆ. ಕಾನ್ಪುರ ದೇಹತ್‌ನ ಮಂಗಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವಾಸಿಸುವ ರೈತನ ಮಗಳ ಮದುವೆಯನ್ನು ಭೋಗ್ನಿಪುರದ ನಿವಾಸಿಯಾಗಿರುವ ವ್ಯಕ್ತಿಯೊಂದಿಗೆ ನಿಶ್ಚಯಿಸಲಾಗಿತ್ತು. 'ಬರಾತ್' (ಮದುವೆ ಮೆರವಣಿಗೆ) ಬಂದಾಗ 'ಜಯಮಾಲ' ಸಮಾರಂಭಕ್ಕಾಗಿ ವೇದಿಕೆಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು, ಅದನ್ನು ವಧುವಿನ ಕುಟುಂಬದವರು ಸ್ವಾಗತಿಸಿದರು ಮತ್ತು ವಧು-ವರರು ಜೈಮಾಲ್~ ಸಮಾರಂಭಕ್ಕೆ ವೇದಿಕೆಯನ್ನು ತಲುಪಿದರು.

ಹುಡುಗಿಯ ಮನವೊಲಿಸಲು ಸಾಕಷ್ಟು ಪ್ರಯತ್ನ
ಆದಾಗ್ಯೂ ತನ್ನ ಮದುವೆಯ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯಲು ಛಾಯಾಗ್ರಾಹಕ ಇಲ್ಲ ಎಂದು ಕಂಡುಕೊಂಡ ವಧು ಸಮಾರಂಭದಲ್ಲಿ ಭಾಗವಹಿಸಲು ನಿರಾಕರಿಸಿದ್ದಾಳೆ. ಬಳಿಕ ವೇದಿಕೆಯಿಂದ ಮನೆಗೆ ತೆರಳಿದ್ದಾಳೆ. ಎಲ್ಲರೂ ಹುಡುಗಿಯ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು, ಆದರೆ ಅವಳು ಇಂದು ನಮ್ಮ ಮದುವೆಯ ಬಗ್ಗೆ ತಲೆಕೆಡಿಸಿಕೊಳ್ಳದ ವ್ಯಕ್ತಿ, ಮುಂದೆ ನನ್ನನ್ನು ಹೇಗೆ ನೋಡಿಕೊಳ್ಳುತ್ತಾನೆ? ಎಂದು ಪ್ರಶ್ನಿಸಿದ್ದಾಳೆ. ಬಳಿಕ ಕುಟುಂಬದ ಹಿರಿಯರೂ ಎಷ್ಟೇ ಪರ ಪರಿಯಾಗಿ ಆಕೆಯನ್ನು ಮನವೊಲಿಸಲು ಪ್ರಯತ್ನಿಸಿದರೂ ವ್ಯರ್ಥವಾಯಿತು.

ಫೋಟೋಗ್ರಾಫರ್, ವಿಡಿಯೋಗ್ರಾಫರ್ ಬಗ್ಗೆ ವಿವಾದವಿತ್ತು
ಬಳಿಕ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ವಿನಿಮಯ ಮಾಡಿಕೊಂಡ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಈ ವಿಷಯವನ್ನು ಪರಸ್ಪರ ಬಗೆಹರಿಸಿಕೊಳ್ಳಲಾಗಿದೆ ಎಂದು ಮಂಗಲ್‌ಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಡೋರಿ ಲಾಲ್ ತಿಳಿಸಿದ್ದಾರೆ. "ಎರಡೂ ಕಡೆಯವರು ಪರಸ್ಪರ ನೀಡಿದ ವಸ್ತುಗಳು ಮತ್ತು ನಗದನ್ನು ಹಿಂದಿರುಗಿಸಿದರು. ಇದಾದ ನಂತರ ವರನು ವಧುವಿಲ್ಲದೆ ತನ್ನ ಸ್ವಗ್ರಾಮಕ್ಕೆ ತೆರಳಿದನು ಎಂದು ಅವರು ಹೇಳಿದರು ಮತ್ತು "ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಬಗ್ಗೆ ವಿವಾದವಿತ್ತು, ಅದನ್ನು ವರನ ಕಡೆಯವರು ಮಾಡಲಿಲ್ಲ. ಇದರಿಂದ ಕೋಪಗೊಂಡ ಹುಡುಗಿ ಮದುವೆಯಾಗಲು ನಿರಾಕರಿಸಿದಳು.

ಮದುವೆಯಾಗದೆ ಮನೆಗೆ ಒಬ್ಬನೇ ಮರಳಿದ ವರ
ಹಿಂದೊಮ್ಮೆ ವರ ವಿಗ್ ಧರಿಸಿರುವುದನ್ನು ನೋಡಿದ ವಧು ಮಂಟಪದಲ್ಲೇ ತಲೆ ಸುತ್ತು ಬಂದು ಬಿದ್ದಿದ್ದು ನಂತರ ವರನನ್ನು ಮದುವೆಯಾಗಲು ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಪುರ್ನಿಯಾದ ಮೊಹಾನಿ ಪಂಚಾಯತ್‌ನ ಬಟೌನಾ ಗ್ರಾಮದ ಈಸ್ವರಿ ಟೋಲಾದಲ್ಲಿ ಘಟನೆ ನಡೆದಿದೆ. ಫೆಬ್ರವರಿ 23ರಂದು ವರ ಅಜಯ್ ಹಾಗೂ ಕುಟುಂಬ ಮತ್ತು ಸಂಬಂಧಿಕರು ಔರೈಯಾ ಪಟ್ಟಣದ ಇಟಾವಾನ ಭರ್ತನ ಪ್ರದೇಶಕ್ಕೆ ಪ್ರಯಾಣ ಬೆಳೆಸಿದರು. ವಧು ಮದುವೆಯ ದಿನ ವರ ಬೋಳು ಎಂದು ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ವರ ಅಜಯ್ ಕುಮಾರ್, ಔರೈಯಾ ಜಿಲ್ಲೆಯ ಬಿದುನಾ ಪಟ್ಟಣದ ನಿವಾಸಿಯಾಗಿದ್ದು, ಮದುವೆಯಾಗದೆ ಮನೆಗೆ ಒಬ್ಬನೇ ಮರಳಬೇಕಾಯಿತು.

ತಲೆಗೂದಲು ಇದೇಯೋ ಇಲ್ಲವೋ ಎಂದು ಅನುಮಾನ
ಸಂಪ್ರದಾಯದಂತೆ ಮದುವೆಯ ಮೆರವಣಿಗೆ ಭಾರೀ ಜೋರಾಗಿಯೇ ನಡೆದಿತ್ತು. ಎರಡು ಕುಟುಂಬದ ಸದಸ್ಯರು ಊರ ಜನರು, ಸಂಬಂಧಿಕರು ಭಾಗಿಯಾಗಿದ್ದರು. ಉದ್ದೆತ್‌ಪುರಕ್ಕೆ ಮೆರವಣಿಗೆ ತಲುಪಿತ್ತು. ನಂತರ ಶಾಸ್ತ್ರದ ಪ್ರಕಾರವೇ ವಧು ವರ ಹಾರ ಬದಲಾಯಿಸಿಕೊಂಡರು. ಈ ವೇಳೆ ವರನು ತಲೆಯ ಮೇಲಿನ ಬಾಸಿಂಗ ಹಾಗೂ ಟೋಪಿಯನ್ನು ಪದೇ ಪದೇ ಸರಿಪಡಿಸಿಕೊಳ್ಳುತ್ತಿದ್ದನು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ವಧು ಸತ್ಯ ಕಂಡುಕೊಂಡಿದ್ದಾಳೆ. ಆಗ ವರನಿಗೆ ತಲೆಗೂದಲು ಇದೇಯೋ ಇಲ್ಲವೋ ಎಂದು ಅನುಮಾನ ವ್ಯಕ್ತಪಡಿಸಿದಳು.
ಅದೇ ಸಮಯಕ್ಕೆ ವಿಗ್ ಕೂಡ ಅಲುಗಾಡತೊಡಗಿತು. ಆಗ ವಧು ತಲೆ ಸುತ್ತಿ ಬಿದ್ದವಳಂತೆ ನಟಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ನಂತರ ವರನೊಂದಿಗೆ ತನಗೆ ಮದುವೆಯಾಗಲು ಇಷ್ಟವಿಲ್ಲ. ಬವರನಿಗೆ ತಲೆ ಕೂದಲೇ ಇಲ್ಲ ಎಂದು ಹೇಳಿದ್ದಾಳೆ. ಆದರೆ ಕುಟುಂಬಸ್ಥರು ವರನಿಗೆ ಬೋಳು ತಲೆ ಇದ್ದರೇನು ಶಾಸ್ತ್ರ ಮುಗಿದಿದೆ. ನೀನು ಮುದುವೆಯಾಗು ಎಂದು ಹೇಳಿದ್ದಾರೆ. ಆದರೆ ಆಕೆ ವರನೊಂದಿಗೆ ಮದುವೆಯಾಗಲು ನಿರಾಕರಿಸಿದ್ದಾಳೆ. ಬಂದ ದಾರಿಗೆ ಸುಂಕವಿಲ್ಲದಂತೆ ವರ ಆಗ ವಾಪಸ್ಸು ಹೋಗಿದ್ದಾನೆ.

ವಧುವಿನ ನಿರ್ಧಾರದಿಂದ ಮನೆಯವರು ದಿಗ್ಬ್ರಾಂತ
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲೂ ವಧು ತನ್ನ ಮದುವೆ ನಿಲ್ಲಿಸಿದ ಘಟನೆ ಮೇ 28ರಂದು ವರದಿಯಾಗಿದೆ. ಇನ್ನೇನು ಮಹೂರ್ತದ ಸಮಯ ಬಂತು, ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ಈ ಮದುವೆ ಬೇಡ ಎಂದಿದ್ದಾಳೆ. ಹಾರ ಬದಲಾಯಿಸಿ, ತಾಳಿ ಕಟ್ಟಲು ಬಂದಾಗ ವರನ ಕೈ, ತನ್ನ ಕೊರಳು ಮತ್ತು ಕಿವಿಗೆ ತಾಗಿತು ಎನ್ನುವ ನೆಪವೊಡ್ಡಿ ವಧು ಈ ಮದುವೆ ಬೇಡ ಎಂದು ತಗಾದೆ ತೆಗೆದಿದ್ದಾಳೆ. ಏಕಾಏಕಿ ವಧುವಿನ ಈ ನಿರ್ಧಾರದಿಂದ ಎರಡೂ ಕಡೆಯವರು ಒಂದು ಕ್ಷಣ ದಿಗ್ಬ್ರಾಂತರಾಗಿದ್ದಾರೆ.

ತಾಳಿ ಸಹಿತ ಹೂವಿನ ಹಾರವನ್ನು ಎಸೆದು ಈ ಮದುವೆಯೇ ಬೇಡ ಎಂದಳು
ವಧುವಿಗೆ ಈ ಮದುವೆ ಇಷ್ಟವಿರಲಿಲ್ಲ ಎನ್ನುವ ಕಾರಣಕ್ಕಾಗಿ, ಎರಡೂ ಕುಟುಂಬದವರು ಮಾತುಕತೆ ನಡೆಸಿ ಮದುವೆಗೆ ದಿನ ನಿಗದಿ ಮಾಡಿದ್ದರು. ಕುಟುಂಬದ ಒತ್ತಾಯಕ್ಕೆ ಮಣಿದಿದ್ದ ವಧುಗೆ ಕಾರಣ ಒಂದು ಬೇಕಿತ್ತೋ ಏನೋ? ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಸಿಟ್ಟಿಗೆದ್ದ ವಧು, ತಾಳಿ ಸಹಿತ ಹೂವಿನ ಹಾರವನ್ನು ಎಸೆದು ಈ ಮದುವೆಯೇ ಬೇಡ ಎಂದಿದ್ದಾಳೆ. ಈ ಘಟನೆಯ ನಂತರ ಎರಡೂ ಕುಟುಂಬದ ನಡುವೆ ಸಣ್ಣಮಟ್ಟಿನ ಜಗಳ ಏರ್ಪಟ್ಟಿತ್ತು. ಸ್ಥಳಕ್ಕೆ ಆಗಮಿಸಿದ ಜಿಲ್ಲೆಯ ವೇಣೂರು ಪೊಲೀಸರು, ಎರಡೂ ಕುಟುಂಬದವರ ಸಮ್ಮುಖ ಮಾತುಕತೆ ನಡೆದರೂ ಪ್ರಯೋಜನವಾಗಲಿಲ್ಲ. ಮದುವೆ ನಡೆಯಲಿಲ್ಲ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications