• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಸ್ಲಿಮರಿಗೆ 50 ಹೆಂಡಿರು, 1050 ಮಕ್ಕಳು: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

|

ಬಾಲ್ಲಿಯಾ(ಉತ್ತರ ಪ್ರದೇಶ), ಜುಲೈ 15: "ಮುಸ್ಲಿಂ ಮತದಲ್ಲಿ ಜನರು 50 ಪತ್ನಿಯರನ್ನು ಮದುವೆಯಗುತ್ತಾರೆ, 1050 ಮಕ್ಕಳನ್ನು ಮಾಡಿಕೊಳ್ಳುತ್ತಾರೆ.. ಇದೊಂಥರ ಮೃಗೀಯ ಸ್ವಭಾವ" ಎನ್ನುವ ಮೂಲಕ ಉತ್ತರ ಪ್ರದೇಶ ಬಾಲ್ಲಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಸಮಾಜದಲ್ಲಿ ಇಬ್ಬರು ಅಥವಾ ನಾಲ್ವರು ಮಕ್ಕಳಿಗೆ ಜನ್ಮ ನೀಡುವುದು ಸಹಜ. ಆದರೆ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೆರುವುದು ಅಂದರೆ 50 ಪತ್ನಿಯರನ್ನು ಹೊಂದುವುದು, 1050 ಮಕ್ಕಳಿಗೆ ಜನ್ಮ ನೀದುವುದು ಎಂದರೆ ಅದು ಮೃಗೀಯ ವರ್ತನೆ, ಅದನ್ನು ಮನುಷ್ಯ ಸ್ವಭಾವ ಎನ್ನುವುದಕ್ಕೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.

2100 ಹೊತ್ತಿಗೆ ಜನಸಂಖ್ಯೆಯಲ್ಲಿ ಭಾರತವೇ ನಂ.1

ಕಳೆದ ಜುಲೈಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಇದೇ ಸಿಂಗ್, "ಹಿಂದುಗಳ ಸಂಖಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಪ್ರತಿ ಹಿಂದುವೂ ಕನಿಷ್ಠ 5 ಮಕ್ಕಳನ್ನಾದರೂ ಹೆರಬೇಕು" ಎಂಬ ಹೇಳಿಕೆ ನೀಡಿದ್ದರು.

ಭಾರತ 2100 ರ ಹೊತ್ತಿಗೆ ಚೀನಾವನ್ನೂ ಮೀರಿ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಲಿದೆ ಎಂದು ಪ್ಯೂ ರೀಸರ್ಚ್ ಸೆಂಟರ್ ಸಮೀಕ್ಷೆ ಇತ್ತೀಚೆಗಷ್ಟೇ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
In a controversial statement, BJP MLA from Ballia, Surendra Singh, has said that Muslims who have many wives and children in large numbers have an “animalistic tendency.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X