• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟೆಂಟಿನಲ್ಲಿದ್ದ ರಾಮ ಭವ್ಯ ಮಂದಿರಕ್ಕೆ ಬಂದ: ಪ್ರಧಾನಿ ಮೋದಿ

|
Google Oneindia Kannada News

ಲಕ್ನೋ, ಆಗಸ್ಟ್ 05: ದಶಕಗಳ ಕಾಲ ಟೆಂಟಿನಲ್ಲಿದ್ದ ಮರ್ಯಾದಾ ಪುರುಷೋತ್ತಮ ರಾಮ ಲಲ್ಲಾ ವಿಗ್ರಹ ಈಗ ಭವ್ಯಮಂದಿರದಲ್ಲಿ ವಿರಾಜಮಾನವಾಗುತ್ತಿದೆ. ರಾಮ ಭಕ್ತರ ಶತಮಾನಗಳ ಹೋರಾಟಗಾರರ ಕನಸು ನನಸಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

   ಅಯೋಧ್ಯೆಯಲ್ಲಿ ಚೀನಾ ಹೆಸರು ಹೇಳಿದ ಮೋದಿ | Oneindia Kannada

   ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿ, ಪ್ರಧಾನ ನರೇಂದ್ರ ಮೋದಿ ಬುಧವಾರ ಮಾತನಾಡಿದರು.

   Live :ಐತಿಹಾಸಿಕ ಭವ್ಯ ರಾಮಮಂದಿರಕ್ಕೆ ಮೋದಿಯಿಂದ ಭೂಮಿಪೂಜೆLive :ಐತಿಹಾಸಿಕ ಭವ್ಯ ರಾಮಮಂದಿರಕ್ಕೆ ಮೋದಿಯಿಂದ ಭೂಮಿಪೂಜೆ

   ಮಂದಿರ ಹೋರಾಟಕ್ಕಾಗಿ ತ್ಯಾಗ ಮಾಡಿದ ಪ್ರತಿ ವ್ಯಕ್ತಿಗೂ ದೇಶದ 130 ಕೋಟಿ ಜನರ ಪರವಾಗಿ ಕೈ ಮುಗಿದು ನಾನು ನಮಸ್ಕರಿಸುತ್ತೇನೆ. ಅವರ ತ್ಯಾಗವನ್ನು ಮರೆಯಲಾಗದು ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟಕ್ಕೆ ಲಕ್ಷಾಂತರ ಜನ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ್ದರು.ಅದೇ ರೀತಿ ರಾಮಮಂದಿರ ನಿರ್ಮಾಣಕ್ಕಾಗಿ ಶತಮಾನಗಳ ಕಾಲ ಸಾಕಷ್ಟು ಪೀಳಿಗೆಯ ಜನ ನಿರಂತರ ಹೋರಾಟ ನಡೆಸಿದ್ದರು. ಇಂದು ಆ ತ್ಯಾಗ-ಸಂಕಲ್ಪದ ಪ್ರತೀಕದ ದಿನವಾಗಿದೆ, ಮಂದಿರ ಹೋರಾಟದಲ್ಲಿ ಅರ್ಪಣೆ, ಸಂಘರ್ಷ, ಸಂಕಲ್ಪ ಎಲ್ಲವೂ ಇತ್ತು. ಅವರೆಲ್ಲದರ ಪರಿಣಾಮವಾಗಿ ಇಂದು ಕನಸು ನನಸಾಗುತ್ತಿದೆ ಎಂದರು.

   ಕನ್ನಡದಲ್ಲಿ ಕುಮುದೇಂದು ರಾಮಾಯಣ, ಗುರುಗೋವಿಂದರ ಗೋವಿಂದ ರಾಮಾಯಣ ಸೇರಿ ಪ್ರತಿ ಭಾಷೆಯಲ್ಲೂ ಭಿನ್ನ ರೂಪದಲ್ಲಿ ಸಿಗುತ್ತಾರೆ. ಆದರೆ ರಾಮ ಎಲ್ಲಾ ಜಾಗದಲ್ಲೂ ಇದ್ದಾರೆ, ಎಲ್ಲರ ರಾಮನಾಗಿದ್ದಾರೆ. ಹೀಗಾಗಿ ರಾಮ ಏಕತೆಯಲ್ಲಿ ಅನೇಕತೆಯ ಪ್ರತೀಕವಾಗಿದ್ದಾರೆ.

   ಕಲ್ಲಿನ ಮೇಲೆ ಶ್ರೀರಾಮ ಎಂದು ಬರೆದು ರಾಮ ಸೇತುವೆ ನಿರ್ಮಿಸಲಾಗಿತ್ತು ಅದೇ ರೀತಿ ದೇಶಾದ್ಯಂತ ಲಕ್ಷಾಂತರ ಭಕ್ತರು ದಿವ್ಯತೆಯಿಂದ ನೀಡಿರುವ ಶಿಲೆಗಳು ಹಾಗೂ ಪುಣ್ಯ ಭೂಮಿಯ ಮಣ್ಣಿನ ಮೂಲಕ ಇಂದು ರಾಮ ಮಂದಿರ ನಿರ್ಮಾಣದ ಮುಂದಡಿ ಇಡಲಾಗಿದೆ .

   ಕೊರೊನಾ ಕಾರಣದಿಂದ ಇಂದಿನ ಭೂಮಿಪೂಜೆ ಕಾರ್ಯಕ್ರಮವು ಸಾಕಷ್ಟು ಕಟ್ಟುನಿಟ್ಟುಗಳ ಮಧ್ಯೆ ನಡೆಯುತ್ತಿದೆ. ಸುಪ್ರೀಂಕೋರ್ಟ್ ಆದೇಶ ಬಂದಾಗಲೂ ನಾವು ಇದೇ ರೀತಿಯ ಕಟ್ಟುನಿಟ್ಟಿನ ವರ್ತನೆ ತೋರಿದ್ದೆವು. ಶಾಂತಿಯುತವಾಗಿ ಮರ್ಯಾದೆಯಿಂದ ನಡೆದುಕೊಂಡಿದ್ದೆವು, ಇಂದು ರಾಷ್ಟ್ರ ಅದೇ ರೀತಿಯಾಗಿ ನಡೆದುಕೊಂಡಿದೆ, ಇದು ಮರ್ಯಾದಾ ಪುರುಷೋತ್ತಮ ರಾಮನಿಗೆ ಸಲ್ಲಿಸಿದ ಗೌರವ ಎಂದು ಹೇಳಿದರು.

   ರಾಮನ ಸೂತ್ರಗಳೊಂದಿಗೆ ಆತ್ಮ ವಿಶ್ವಾಸ ಹಾಗೂ ಆತ್ಮ ನಿರ್ಭರ ಭಾರತವನ್ನು ನಿರ್ಮಾಣ ಮಾಡುವುದು ನಮ್ಮ ಕನಸಾಗಿದೆ. ಹೀಗಾಗಿ ಇಂದು ಭಾರತ ಕಾಯುವ ಹಂತದಲ್ಲಿಲ್ಲ, ಬೆಳವಣಿಗೆಗಾಗಿ ಮುಂದಡಿ ಇಡಬೇಕಾಗಿದೆ, ರಾಮ ಚರಿತ್ರೆಯೇ ಗಾಂಧೀಜಿಯ ರಾಮರಾಜ್ಯ ನಿರ್ಮಾಣದ ಮೂಲವಾಗಿದೆ, ರಾಮನು ನಮಗೆ ಸಮಯದ ಜೊತೆಗೆ ನಡೆಯುವ ಹಾಗೂ ಬೆಳೆಯುವುದನ್ನು ಕಲಿಸಿದ್ದಾರೆ.ರಾಮ ಜನ್ಮಭೂಮಿಯಲ್ಲಿ, ರಾಮಮಂದಿರ ನಿರ್ಮಾಣವಾಗುತ್ತಿರುವುದು ವಿಶ್ವದೆಲ್ಲೆಡೆ ರಾಮ ಭಕ್ತರಿಗೆ ಖುಷಿ ತಂದಿದೆ ಎನ್ನುವ ವಿಶ್ವಾಸವಿದ. ಭವಿಷ್ಯದಲ್ಲಿ ಇವರೆಲ್ಲರೂ ಅಯೋಧ್ಯೆಯೆಡೆಗೆ ಬರಲಿದ್ದಾರೆ.ಈ ಮಂದಿರವು ಎಲ್ಲಾ ಮಾನವೀಯತೆ ನಿರ್ಮಾಣಕ್ಕೂ ಪ್ರೇರಣೆ ನೀಡಲಿದೆ

   ಅಯೋಧ್ಯೆ ಪೂಜೆ: 'ಹಗಿಯಾ ಸೋಫಿಯಾ' ನೆನಪಿಸಿದ ಮುಸ್ಲಿಂ ಸಂಘಟನೆಅಯೋಧ್ಯೆ ಪೂಜೆ: 'ಹಗಿಯಾ ಸೋಫಿಯಾ' ನೆನಪಿಸಿದ ಮುಸ್ಲಿಂ ಸಂಘಟನೆ

   ಎರಡು ಗಜ ದೂರ ಪ್ರತಿಯೊಬ್ಬರೂ ಮಾಸ್ಕ್ ಧಾರಣೆ ಇದು ನಮ್ಮೆಲ್ಲರ ಮರ್ಯಾದೆಯ ಸೂತ್ರವಾಗಿದೆ-ಕೊರೊನಾ ಸಂದರ್ಭದಲ್ಲಿ ಇದೇ ರಾಮ ಸೂತ್ರವಾಗಿರಲಿ. ಇಂಡೋನೇಷ್ಯಾ, ಮಲೇಷ್ಯಾ, ಕಾಂಬೋಡಿಯಾ, ಥೈಲೆಂಡ್, ಇರಾನ್, ಚೀನಾ, ಶ್ರೀಲಂಕಾ ನೇಪಾಳ ಸೇರಿ ಸಾಕಷ್ಟು ದೇಶಗಳ್ಲಲಿ ರಾಮನ ವಿಭಿನ್ನ ಕಥನಗಳು ಪ್ರತೀತಿಯಲ್ಲಿದೆ.

   ರಾಮ ಮಂದಿರವು ಆಧುನಿಕತೆ, ರಾಷ್ಟ್ರೀಯತೆ, ಕೋಟ್ಯಂತರ ಜನರ ಸಂಕಲ್ಪದ ಪ್ರತೀಕವಾಗಿರಲಿದೆ. ಭವಿಷ್ಯದ ಪೀಳಿಗೆಗೆ ನಿಷ್ಠೆ, ಶ್ರದ್ಧೆ, ಸಂಕಲ್ಪದ ಪ್ರತೀಕವಾಗಿರಲಿದೆ.ಮಂದಿರದ ನಿರ್ಮಾಣ ಬಳಿಕ ಅಯೋಧ್ಯೆಯ ಚಿತ್ರಣವೇ ಬದಲಾಗಲಿದೆ. ಇಡೀ ವಿಶ್ವದ ಜನರೇ ಇತ್ತ ನೋಡಲಿದ್ದಾರೆ.

   ಸರಯೂ ನದಿಯ ತಟದಲ್ಲಿ ಇಂದು ಭಾರತ ಇತಿಹಾಸದಲ್ಲಿ ಸ್ವರ್ಣ ಅಧ್ಯಾಯ ತೆರೆದಿದೆ. ಕೋಟ್ಯಂತರ ರಾಮ ಭಕ್ತರ ನಿರೀಕ್ಷೆ ನಿಜವಾಗುತ್ತಿದೆ. ಇಂದು ಇಡೀ ಭಾರತವೇ ರಾಮಮಯವಾಗಿದೆ. ಪ್ರತಿ ಭಾರತೀಯನ ಮನಸ್ಸಿನಲ್ಲಿ ದೀಪ ಬೆಳಗುತ್ತಿದ. ಇಡೀ ದೇಶ ಭಾವುಕವಾಗಿದೆ, ಶತಮಾನದ ನಿರೀಕ್ಷೆ ಇಂದು ಅಂತ್ಯಗೊಂಡಿದೆ ಎಂದು ಹೇಳಿದರು.

   English summary
   Prime Minister Narendra Modi Offered Bhoomi Poojan For Ram Mandir later he said that Lord Ram Lived Under Tent For Years Now A Grand Temple For Him.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X