31 ಲಕ್ಷಕ್ಕೆ 'ಅಲ್ಲಾವುದ್ದೀನ್ ದೀಪ' ಖರೀದಿಸಿ ಪೆಚ್ಚಾದ ವೈದ್ಯ!
ಮೀರತ್, ನವೆಂಬರ್ 2: ಅಲ್ಲಾವುದ್ದೀನ್ ದೀಪವನ್ನು ಉಜ್ಜಿದಾಗ ಅದರಿಂದ ಹೊರಬರುವ ಜೀನಿ ನಿಮ್ಮ ಇಚ್ಛೆಗಳನ್ನೆಲ್ಲ ಈಡೇರಿಸುವಂತಹ ಮಧ್ಯಪ್ರಾಚ್ಯ ದೇಶಗಳಲ್ಲಿನ ಬಹುಜನಪ್ರಿಯ ಕಾಲ್ಪನಿಕ ಕಥೆಗಳು ನಿಮಗೆ ಗೊತ್ತಿರಬೇಕು. ಇಂತಹ ಮ್ಯಾಜಿಕ್ ದೀಪ ಎಲ್ಲಿದೆಯೋ ಗೊತ್ತಿಲ್ಲ. ಆದರೆ ಉತ್ತರ ಪ್ರದೇಶದ ವೈದ್ಯರೊಬ್ಬರು ಇದೇ ರೀತಿ ಜೀನಿಯನ್ನು ಕರೆಸಿ ಪವಾಡದ ಮೂಲಕ ತನ್ನ ಆಸೆಗಳನ್ನೆಲ್ಲಾ ಈಡೇರಿಸಿಕೊಳ್ಳುವ ಜಾಲದೊಳಗೆ ಬಿದ್ದು ಪೇಚಿಗೀಡಾಗಿದ್ದಾರೆ.
ಅಲ್ಲಾದೀನ್ ದೀಪವನ್ನು ಉಜ್ಜಿದರೆ ನಿಮ್ಮ ಬಯಕೆಗಳೆಲ್ಲ ಈಡೇರಲಿದೆ ಎಂಬ ವಂಚನೆಯ ಜಾಲವನ್ನು ನಂಬಿದ ಮೀರತ್‌ನ ವೈದ್ಯರೊಬ್ಬರು 31 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಈ ವಂಚಕರು ವೈದ್ಯರನ್ನು ನಂಬಿಸಲು ದೀಪದಿಂದ 'ಜೀನಿ'ಯನ್ನು ಹೊರಗೆ ಕರೆಯಿಸುವ ತಂತ್ರವನ್ನೂ ಮಾಡಿದ್ದರು. ಆದರೆ ಅದು ಯಾವ ರೀತಿ ತಂತ್ರ ಮಾಡಿದ್ದರು ಎನ್ನುವುದು ಗೊತ್ತಾಗಿಲ್ಲ. ಇಕ್ರಮುದ್ದೀನ್ ಮತ್ತು ಅನೀಸ್ ಎಂಬ ಕಿಡಿಗೇಡಿಗಳು ಬೀಸಿದ್ದ ವಂಚನೆಯ ಬಲೆಗೆ ಬಿದ್ದಿದ್ದ ಡಾ. ಎಲ್‌ಎ ಖಾನ್, ತಾವು ಮೋಸ ಹೋಗಿದ್ದು ಅರಿವಾದ ಬಳಿಕ ಅ. 25ರಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ಮುಂದೆ ಓದಿ.

'ತಾಯಿ'ಯ ಚಿಕಿತ್ಸೆಗೆ ತೆರಳಿದ್ದ ವೈದ್ಯ
'ಅನಾರೋಗ್ಯಪೀಡಿತಳಾದ ತಾಯಿ'ಗೆ ಚಿಕಿತ್ಸೆ ನೀಡುವ ನೆಪದಲ್ಲಿ ಮಹಿಳೆಯೊಬ್ಬರೊಂದಿಗೆ ಈ ವಂಚಕರು ಮೊದಲ ಬಾರಿ ವೈದ್ಯನನ್ನು ಭೇಟಿಯಾಗಿದ್ದರು. 'ತಮ್ಮ ತಾಯಿ ಎಂದು ಅವರು ಹೇಳಿಕೊಂಡಿದ್ದ ಮಹಿಳೆಗೆ ಚಿಕಿತ್ಸೆ ನೀಡಲು ನಾನು ಅವರ ಮನೆಗೆ ಭೇಟಿ ನೀಡಲು ಆರಂಭಿಸಿದ್ದೆ. ಒಂದು ತಿಂಗಳಿಗೂ ಹೆಚ್ಚು ಕಾಲ ಅವರ ಮನೆಗೆ ಹೋಗಿದ್ದೆ. ಬಳಿಕ ಅವರು 'ಬಾಬಾ' ಒಬ್ಬರು ತಮ್ಮ ಮನೆಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳತೊಡಗಿದರು. ಅವರು ನನಗೆ ಬ್ರೈನ್ ವಾಶ್ ಮಾಡಲು ಆರಂಭಿಸಿ ಈ ಬಾಬಾನನ್ನು ಭೇಟಿ ಮಾಡುವಂತೆ ಹೇಳಲು ಶುರುಮಾಡಿದರು' ಎಂದು ಖಾನ್ ದೂರಿನಲ್ಲಿ ತಿಳಿಸಿದ್ದಾರೆ.

1.5 ಕೋಟಿ ರೂ ಕೇಳಿದ್ದರು
'ಕೆಲವು ಸಾಂಪ್ರದಾಯಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಬಾಬಾನನ್ನು ಭೇಟಿ ಮಾಡಿಸಿದರು. ಬಳಿಕ ಈ ಗುಂಪು ನನಗೆ 'ಚಿರಾಗ್' (ದೀಪ) ಅನ್ನು 1.5 ಕೋಟಿ ರೂಪಾಯಿಗೆ ಮಾರಾಟ ಮಾಡುವುದಾಗಿ ತಿಳಿಸಿದರು. ಆದರೆ ನನಗೆ 31 ಲಕ್ಷ ರೂ ಮಾತ್ರ ನೀಡಲು ಸಾಧ್ಯ ಎಂದೆ. ಈ ದೀಪವು ಸಂಪತ್ತು, ಆರೋಗ್ಯ ಮತ್ತು ಎಲ್ಲ ಒಳಿತನ್ನೂ ನೀಡುತ್ತದೆ ಎಂದು ನನ್ನನ್ನು ನಂಬಿಸಿದರು. ಇದು 'ಅಲ್ಲಾವುದ್ದೀನ್‌ನ ದೀಪ' ಎಂದು ಹೇಳಿದ್ದರು' ಎಂಬುದಾಗಿ ಅವರು ವಿವರಿಸಿದ್ದಾರೆ.

ಅನೇಕರಿಗೆ ವಂಚನೆ
ವೈದ್ಯರು ನೀಡಿದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿ ಚಿನ್ನದ ಬಣ್ಣದ ಅನೇಕ ದೀಪಗಳನ್ನು ವಶಪಡಿಸಿಕೊಂಡಿದ್ದಾರೆ. ಇದೇ ವ್ಯಕ್ತಿಗಳು ನಗರದ ಇತರೆ ಮನೆಗಳಿಗೂ ಹೋಗಿ ತಂತ್ರವಿದ್ಯೆಯ ಹೆಸರಿನಲ್ಲಿ ಹಲವು ಕುಟುಂಬಗಳನ್ನು ವಂಚಿಸಿದ್ದರು ಎನ್ನುವುದು ಈಗ ಗೊತ್ತಾಗಿದೆ

ಮಹಿಳೆ ನಾಪತ್ತೆ
ಜನರನ್ನು ವಂಚಿಸುವ ಈ ಜಾಲದಲ್ಲಿ ಮೂವರು ಭಾಗಿಯಾಗಿರುವುದು ಗೊತ್ತಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಆರೋಪಿ ಮಹಿಳೆ ತಲೆಮರೆಸಿಕೊಂಡಿದ್ದಾಳೆ' ಎಂದು ಮೀರತ್‌ನ ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ರೈ ತಿಳಿಸಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications