ಮೋದಿ ಸರ್ಕಾರ 'ಮುಳುಗುತ್ತಿರುವ ಹಡಗು' ಎಂದು ಮಾಯಾವತಿ ಟೀಕೆ

ಲಕ್ನೋ, ಮೇ 14: ಮೋದಿ ಸರ್ಕಾರ 'ಮುಳುಗುತ್ತಿರುವ ಹಡಗು' ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಟೀಕಿಸಿದ್ದಾರೆ.

ಬಿಜೆಪಿ ಹೆಗಲಿಗೆ ಹೆಗಲು ನೀಡುತ್ತಿದ್ದ ಆರ್‌ಎಸ್‌ಎಸ್ ಕೂಡ ಬೆಂಬಲ ನೀಡದಿರುವ ಕಾರಣ ಮೋದಿ ಸರ್ಕಾರ ಈ ಬಾರಿ ಚುನಾವಣೆಯಲ್ಲಿ ಗೆದ್ದು, ಮತ್ತೆ ಸರ್ಕಾರ ರಚಿಸುವ ಯಾವ ಸಾಧ್ಯತೆಯೂ ಇಲ್ಲ ಎಂದು ಮಾಯಾವತಿ ಹೇಳಿದ್ದಾರೆ.

ಈಗ ಮೋದಿ ಸರ್ಕಾರವು ಮುಳುಗುತ್ತಿರುವ ಹಡಗಿದ್ದಂತೆ, ಬಿಜೆಪಿಯ ಯಾವ ಪ್ರಚಾರ ಸಭೆಯಲ್ಲೂ ಆರ್‌ಎಸ್‌ಎಸ್‌ ಮುಖಂಡರೂ ಭಾಗವಹಿಸಿದ್ದನ್ನು ನೋಡಿಲ್ಲ, ಹಾಗಾಗಿ ಮೋದಿ ಸೋಲಿನ ಭೀತಿಯಲ್ಲಿದ್ದಾರೆ.

ಈಗ ರಾಜಕಾರಣಿಗಳು ದೇವಸ್ಥಾನಗಳಿಗೆ ಹೋಗುವುದು 'ಫ್ಯಾಷನ್' ಆಗಿದೆ. ಮಾಧ್ಯಮಗಳು ಮಾಡುವ ಅಂತಹ ವರದಿಗಳಿಗೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

Mayawati says Modis government is sinking ship

ನರೇಂದ್ರ ಮೋದಿಯವರು 2014ರಲ್ಲಿ ನೀಡಿದ್ದ ಭರವಸೆಗಳನ್ನ್ಯಾವುದನ್ನೂ ಈಡೇರಿಸದ ಕಾರಣ ಆರ್‌ಎಸ್‌ಎಸ್‌ ಮುಖಂಡರು, ಬಿಜೆಪಿಯಿಂದ ದೂರ ಉಳಿದಿದ್ದಾರೆ ಎಂದು ಹೇಳಿದರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಅಲ್ವಾರ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಕುರಿತು ಮಾಯಾವತಿ ಹಾಗೂ ಮಾಯಾವತಿ ನಡುವೆ ಟ್ವಿಟ್ಟರ್ ವಾರ್ ನಡೆದಿದೆ. ಮಾಯಾವತಿ ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಒಂದೊಮ್ಮೆ ದಲಿತರ ಬಗ್ಗೆ ನಿಮಗೆ ಕಾಳಜಿ ಇದ್ದಿದ್ದೇ ಆಗಿದ್ದರೆ ರಾಜಸ್ಥಾನದಲ್ಲಿ ನೀವು ಕಾಂಗ್ರೆಸ್‌ಗೆ ನೀಡಿರುವ ಬೆಂಬಲವನ್ನು ಹಿಂಪಡೆಯಿರಿ ಎಂದು ಸವಾಲು ಹಾಕಿದ್ದರು.

ಅದಕ್ಕೆ ಪ್ರತಿಯಾಗಿ ಸಾಮೂಹಿಕ ಅತ್ಯಾಚಾರದಂತಹ ಪ್ರಕರಣವನ್ನು ಇಟ್ಟುಕೊಂಡು ನೀವು 'ಡರ್ಟಿ ಪಾಲಿಟಿಕ್ಸ್' ಮಾಡುತ್ತಿದ್ದೀರಾ, ಜನರ ಭಾವನೆಗಳಿಗೆ ಬೆಲೆಯೇ ಇಲ್ಲವೇ ಮೊದಲು ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಮಾಯಾವತಿ ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+