ಟಿಕೆಟ್ ಗಾಗಿ ನೋಟು, ಇದು ಮಾಯಾವತಿ ಸಿದ್ಧಾಂತ: ಮನೇಕಾ ಗಾಂಧಿ
ಲಕ್ನೋ, ಏಪ್ರಿಲ್ 04: ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರು ಹಣ ತೆಗೆದುಕೊಳ್ಳದೆ ಯಾರಿಗೂ ಪಕ್ಷದ ಟಿಕೆಟ್ ನೀಡುವುದಿಲ್ಲ ಎಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ಕಿಡಿಕಾರಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಉತ್ತರ ಪ್ರದೇಶದ ಸುಲ್ತಾನ್ ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮನೇಕಾ ಗಾಂಧಿ, ತಮ್ಮ ಕ್ಷೇತ್ರದಲ್ಲಿ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದರು. ಲೋಕಸಭಾ ಚುನಾವನೆಯ ಹಿನ್ನೆಲೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಬಿಎಸ್ಪಿ ನಾಯಕಿ ಮಾಯಾವತಿ ಅವರನ್ನು ತರಾಟೆಗೆ ತೆಗೆದುಕೊಂಡರು.
"ಮಾಯಾವತಿ ತಮ್ಮ ಆಪ್ತರನ್ನೂ ನಂಬುವುದಿಲ್ಲ. ಅವರೊಂದಿಗೂ ಅವರು ಪ್ರಾಮಾಣಿಕರಾಗಿ ಇರುವುದಿಲ್ಲ. ಅವರು ತಮ್ಮ ಪಕ್ಷದ, ಆಪ್ತರನ್ನೇ ಸರಿಯಾಗಿ ನಡೆಸಿಕೊಳ್ಳುವುದಿಲ್ಲ. ಇನ್ನು ದೇಶವನ್ನು ಹೇಗೆ ನೋಡಿಕೊಳ್ಳುತ್ತಾರೆ? ಕರೆನ್ಸಿ ನೋಟ್ ಇಲ್ಲದೆ ಅವರು ಏನನ್ನೂ ಮಾಡುವುದಿಲ್ಲ" ಎಂದು ಮನೇಕಾ ಗಾಂಢಿ ಹೇಳಿದರು.

2014 ರಲ್ಲಿ ಫಿಲಿಬಿಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮನೇಕಾ ಗಾಂಢಿ, ಈ ಬಾರಿ ತಮ್ಮ ಪುತ್ರ ವರುಣ್ ಗಾಂಧಿ ಅವರು ಸ್ಪರ್ಧಿಸುತ್ತಿದ್ದ ಸುಲ್ತಾನ್ ಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ವರುಣ್ ಗಾಂಧಿ ಅವರು ಫಿಲಿಬಿಟ್ ನಿಂದ ಸ್ಪರ್ಧೆಗಿಳಿದಿದ್ದಾರೆ.












Click it and Unblock the Notifications