• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಕ್ನೋದಲ್ಲಿ ಶೀತ ಮತ್ತು ಜ್ವರದಿಂದ 400 ಮಂದಿ ಆಸ್ಪತ್ರೆಗೆ ದಾಖಲು

|
Google Oneindia Kannada News

ಲಕ್ನೋ, ಸಪ್ಟೆಂಬರ್ 3: ಉತ್ತರ ಪ್ರದೇಶದಲ್ಲಿ ಹವಾಮಾನ ಬದಲಾಗುತ್ತಿದ್ದಂತೆ ರೋಗಿಗಳ ಸಂಖ್ಯೆ ಮಿತಿ ಮೀರುತ್ತಿದೆ. ರಾಜಧಾನಿ ಲಕ್ನೋದ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ 40 ಮಕ್ಕಳು ಸೇರಿದಂತೆ 400ಕ್ಕೂ ಹೆಚ್ಚು ಮಂದಿ ದಾಖಲಾಗಿದ್ದಾರೆ. ಓಪಿಡಿಗಳಲ್ಲಿ ಶೇ.20ರಷ್ಟು ಜನ ರೋಗಿಗಳು ಜ್ವರ ಮತ್ತು ಶೀತದಿಂದ ಬಳಲುತ್ತಿದ್ದಾರೆ.

ಇದು ಹವಾಮಾನ ಬದಲಾವಣೆಯಿಂದಾಗಿ ಕಾಣಿಸಿಕೊಳ್ಳುವು ಕಾಲೋಚಿತ ಜ್ವರ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ವೈರಲ್ ಜ್ವರ ಹೊಂದಿರುವ ರೋಗಿಗಳ ಸಂಖ್ಯೆಯಲ್ಲಿನ ಹಠಾತ್ ಏರಿಕೆ ಆಸ್ಪತ್ರೆಗಳಲ್ಲಿ ಆತಂಕಕಾರಿ ಸ್ಥಿತಿಯನ್ನು ಸೃಷ್ಟಿಸಿದೆ. ಈ ಮಧ್ಯೆ ಕೊವಿಡ್-19 ಆಂಟಿಜೆನಿಕ್ ಪರೀಕ್ಷೆ ನಡೆಸದೇ ಯಾವುದೇ ರೋಗಿಗಳನ್ನು ಓಪಿಡಿಗೆ ರವಾನಿಸದಂತೆ ಸೂಚನೆ ನೀಡಲಾಗಿದೆ.

50 ಸಾವು: 50 ಸಾವು: "ಉತ್ತರ ಪ್ರದೇಶದಲ್ಲಿ ಇದೇನಾ ನಂ.1 ಆಸ್ಪತ್ರೆಗಳ ಹಣೆಬರಹ!?"

ಕಳೆದ ವಾರಕ್ಕೆ ಹೋಲಿಸಿದರೆ ಆಸ್ಪತ್ರೆಗಳಲ್ಲಿ ವೈರಲ್ ಜ್ವರದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಶೇ.15ರಷ್ಟು ಏರಿಕೆಯಾಗಿದೆ. ಆಗಸ್ಟ್ ಮೂರನೇ ವಾರದಲ್ಲಿ ವೈರಲ್ ಜ್ವರದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಶೇ.5ರಷ್ಟು ಏರಿಕೆ ಕಂಡು ಬಂದಿದೆ.

ಜ್ವರದ ಸಮಸ್ಯೆಯಿಂದ 300 ರೋಗಿಗಳು ದಾಖಲು:

ಉತ್ತರ ಪ್ರದೇಶದ ಬಲರಾಮ್ ಪುರ ಆಸ್ಪತ್ರೆ, ಸಿವಿಲ್ ಆಸ್ಪತ್ರೆ ಮತ್ತು ಲೋಹಿಯಾ ಇನ್ಸ್ ಟಿಟ್ಯೂಟ್ ಗಳಲ್ಲಿ ಅತಿಹೆಚ್ಚು ವೈರಲ್ ಜ್ವರದ ಪ್ರಕರಣಗಳು ವರದಿಯಾಗಿವೆ. 300ಕ್ಕೂ ಹೆಚ್ಚು ರೋಗಿಗಳು ಜ್ವರದ ಸಮಸ್ಯೆಯಿಂದ ಓಪಿಡಿಗೆ ದಾಖಲಾಗಿದ್ದಾರೆ. ಮಹಾನಗರ್ ಭೌರಾವ್ ದೇವರಾಸ್, ರಾಣಿ ಲಕ್ಷ್ಮಿಬಾಯಿ, ಲೋಕಬಂಧು, ರಾಮ್ ಸಾಗರ್ ಮಿಶ್ರಾ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಕೂಡಾ ಜ್ವರದಿಂದ ಬಳಲುತ್ತಿರುವ ರೋಗಿಗಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ.

ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಜ್ವರದ ಆತಂಕ:

ಸರ್ಕಾರಿ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ 12 ಮಕ್ಕಳು ಜ್ವರದಿಂದ ದಾಖಲಾಗಿದ್ದು, ಈ ಪೈಕಿ 7 ಮಂದಿ ಲಕ್ನೋ ಮೂಲದವರು ಎಂದು ಗೊತ್ತಾಗಿದೆ. ಲೋಹಿಯಾ ಆಸ್ಪತ್ರೆಯ ಮಕ್ಕಳ ವಿಭಾಗ ಮತ್ತು ಔಷಧೀಯ ಕೇಂದ್ರದ ಎದುರಿನಲ್ಲಿ ಜನರು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬರುತ್ತಿದೆ. ರೋಗಶಾಸ್ತ್ರದಲ್ಲಿ ಡೆಂಗ್ಯೂ, ಮಲೇರಿಯಾ, ಟೈಫಾಯಿಡ್ ಪರೀಕ್ಷೆಗೆ ಒಳಗಾಗುವವರ ಸಂಖ್ಯೆ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಜ್ವರದಿಂದ ಬಳಲುತ್ತಿರುವ 15 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 70ಕ್ಕೂ ಹೆಚ್ಚು ಜ್ವರ ಪೀಡಿತರು ವಿವಿಧ ಇಲಾಖೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭೌರಾವ್ ದೇವರಾಸ್ ಆಸ್ಪತ್ರೆಯಲ್ಲಿ ಹೆಚ್ಚಿನ ರೋಗಿಗಳು ಮಕ್ಕಳ ಮತ್ತು ವೈದ್ಯಕೀಯ ವಿಭಾಗಗಳಿಗೆ ಬರುತ್ತಿದ್ದಾರೆ. ಮಕ್ಕಳ ವಿಭಾಗದ 10 ಬೆಡ್ ಭರ್ತಿಯಾಗಿವೆ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮನೀಶ್ ಪ್ರಕಾರ, 10 ರಿಂದ 15 ಮಕ್ಕಳು ಪ್ರತಿದಿನ ಜ್ವರದ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳಲು ಆಗಮಿಸುತ್ತಿದ್ದಾರೆ.

ಹವಾಮಾನ ಬದಲಾವಣೆಯಿಂದ ವೈರಲ್ ಜ್ವರ:

"ಹವಾಮಾನವು ವೇಗವಾಗಿ ಬದಲಾಗುತ್ತಿದ್ದು, ತೇವಾಂಶ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಾತಾವರಣದ ಕೆಳಗಿನ ಮೇಲ್ಮೈಯಲ್ಲಿ ರೋಗಾಣುಗಳು ಇರುತ್ತವೆ. ಈ ಹಿನ್ನೆಲೆ ವೈರಲ್ ಜ್ವರ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮೂರು ಡೆಂಗ್ಯೂ ರೋಗಿಗಳನ್ನು ದಾಖಲಿಸಲಾಗಿದೆ. ವೈರಲ್ ಜ್ವರ ಮತ್ತು ಇತರ ಸಂಬಂಧಿತ ರೋಗಗಳ ಪ್ರಕರಣಗಳ ಸಂಖ್ಯೆಯಲ್ಲೂ ಶೇಕಡಾ 20ರಷ್ಟು ಹೆಚ್ಚಳವಾಗಿದೆ.

English summary
Lucknow: 400 People including 40 Childs Admitted In Hospital Due To Viral Diseases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X