ಅಯೋಧ್ಯೆಯಲ್ಲಿ 221 ಮೀಟರ್ ಎತ್ತರದ ರಾಮನ ಕಂಚಿನ ಪ್ರತಿಮೆ ಸ್ಥಾಪನೆ
ಲಖನೌ, ನವೆಂಬರ್ 25: ಉತ್ತರಪ್ರದೇಶ ಸರಕಾರವು ಅಯೋಧ್ಯೆಯಲ್ಲಿ 221 ಮೀಟರ್ ಎತ್ತರದ ರಾಮನ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಿದೆ ಎಂದು ಅಲ್ಲಿನ ಪ್ರಿನ್ಸಿಪಾಲ್ ಸೆಕ್ರೆಟರಿ (ಮಾಹಿತಿ) ಅವನೀಶ್ ಅವಸ್ಥಿ ಶನಿವಾರ ಹೇಳಿದ್ದಾರೆ. ರಾಮನ ಪ್ರತಿಮೆ ಎತ್ತರವು 151 ಮೀಟರ್ ಇರಲಿದ್ದು, ಮೂರ್ತಿಯ ಮೇಲ್ಭಾಗದ ಛತ್ತರಿ ಎತ್ತರ 20 ಮೀಟರ್ ಇರಲಿದೆ.
ಇನ್ನು ವಿಗ್ರಹದ ಪೀಠವು 50 ಮೀಟರ್ ಎತ್ತರ ಇರಲಿದೆ. ಪೀಠದ ಜಾಗದಲ್ಲಿ ಒಂದು ಸಂಗ್ರಹಾಲಯ ನಿರ್ಮಿಸಲಾಗುವುದು ಎಂದು ಅವಸ್ಥಿ ಮಾಹಿತಿ ನೀಡಿದ್ದಾರೆ. ಐದು ಸಂಸ್ಥೆಗಳ ಹೆಸರನ್ನು ಪ್ರತಿಮೆ ನಿರ್ಮಾಣಕ್ಕಾಗಿ ಆಖೈರು ಮಾಡಲಾಗಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎದುರು ಪ್ರಸಂಟೇಷನ್ ನೀಡಲಾಗುವುದು. ಪ್ರತಿಮೆ ಸ್ಥಾಪಿಸುವ ಸ್ಥಳದ ಮಣ್ಣಿನ ಪರೀಕ್ಷೆ ಮಾಡಲಾಗುವುದು ಎಂದಿದ್ದಾರೆ.

ದೇಶದ ಮೊದಲ ಕೇಂದ್ರ ಗೃಹ ಸಚಿವ ಸರ್ದಾರ್ ವಲ್ಲಭ ಭಾಯ್ ಪಟೇಲ್ ರ 182 ಮೀಟರ್ ಎತ್ತರದ ವಿಗ್ರಹವನ್ನು ಕಳೆದ ತಿಂಗಳು ಅಕ್ಟೋಬರ್ ಮೂವತ್ತೊಂದನೇ ತಾರೀಕು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಇದೀಗ ಆ ಪ್ರತಿಮೆಗಿಂತ ಎತ್ತರವಾದದ್ದನ್ನು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಸ್ಥಾಪಿಸಲಿದೆ.












Click it and Unblock the Notifications