ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನ್ಪುರದಲ್ಲಿ ಮಗಳ ಎದುರಲ್ಲೇ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ

|
Google Oneindia Kannada News

ಲಕ್ನೋ, ಆ.12: ಉತ್ತರ ಪ್ರದೇಶದ ಕಾನ್ಪುರ್ ಪಟ್ಟಣದಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಬೀದಿಯಲ್ಲಿ ಮೆರವಣಿಗೆ ಮಾಡಿ, ಹಲ್ಲೆ ನಡೆಸಿ "ಜೈ ಶ್ರೀ ರಾಮ್" ಘೋಷಣೆಗಳನ್ನು ಕೂಗಲಾಗಿದೆ. ಕೊನೆಗೆ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ವರದಿ ತಿಳಿಸಿದೆ.

ಸ್ಥಳೀಯರು ಚಿತ್ರೀಕರಿಸಿದ ಘಟನೆಯ ದುಃಖಕರ ದೃಶ್ಯದ ವಿಡಿಯೋ ಸೆರೆ ಹಿಡಿದಿದ್ದಾರೆ. ದೃಶ್ಯದಲ್ಲಿ ವ್ಯಕ್ತಿಯ ಪುಟ್ಟ ಮಗಳು ಆತನಿಗೆ ಅಂಟಿಕೊಂಡಿರುವುದನ್ನು ಮತ್ತು ದಾಳಿಕೋರರನ್ನು ಆತನನ್ನು ಉಳಿಸುವಂತೆ ಬೇಡಿಕೊಳ್ಳುವುದನ್ನು ತೋರಿಸುತ್ತದೆ. ಪೊಲೀಸರ ವಶದಲ್ಲಿದ್ದಾಗ ಆ ವ್ಯಕ್ತಿಗೆ ಹೊಡೆದಿರುವ ದೃಶ್ಯಗಳು ಕೂಡ ಈ ವಿಡಿಯೋದಲ್ಲಿದೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.

ಯುಪಿ: ದಲಿತ ಯುವಕನ ಮೇಲೆ ಅಮಾನುಷ ಹಲ್ಲೆ, ಖಾಸಗಿ ಅಂಗಕ್ಕೆ ಥಳಿಸಿದ ಗುಂಪುಯುಪಿ: ದಲಿತ ಯುವಕನ ಮೇಲೆ ಅಮಾನುಷ ಹಲ್ಲೆ, ಖಾಸಗಿ ಅಂಗಕ್ಕೆ ಥಳಿಸಿದ ಗುಂಪು

ಬಲಪಂಥೀಯ ಗುಂಪು ಬಜರಂಗದಳವು ಸಭೆ ನಡೆಸಿದ ಛೇದಕದಿಂದ 500 ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, ಆ ಪ್ರದೇಶದಲ್ಲಿ ಮುಸ್ಲಿಮರು ತಮ್ಮ ಪ್ರದೇಶದಲ್ಲಿ ಹಿಂದೂ ಹುಡುಗಿಯನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ. ಸಭೆಯ ನಂತರ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ.

 Kanpur: Muslim Man Assaulted, Daughter Begs For Mercy

ಹೇಳಿಕೆಯೊಂದರಲ್ಲಿ, ಕಾನ್ಪುರ ಪೊಲೀಸರು, "ಹಲ್ಲೆಗೊಳಗಾದ ವ್ಯಕ್ತಿಯ ದೂರು ಆಧರಿಸಿ ಮದುವೆ ಬ್ಯಾಂಡ್ ನಡೆಸುತ್ತಿರುವ ಸ್ಥಳೀಯರು, ಆತನ ಮಗ ಮತ್ತು ಸುಮಾರು 10 ಅಪರಿಚಿತ ಜನರ ವಿರುದ್ಧ ಗಲಭೆ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದರು. ಪ್ರಕರಣದಲ್ಲಿ ಹೆಸರಿಸಲಾದ ವ್ಯಕ್ತಿಗಳು ಬಲಪಂಥೀಯ ಗುಂಪಿನೊಂದಿಗೆ ಸಂಬಂಧ ಹೊಂದಿದ್ದಾರೆಯೇ ಎಂದು ಪೊಲೀಸರು ಹೇಳಿಲ್ಲ.

"ನಾನು ಮಧ್ಯಾಹ್ನ 3 ಗಂಟೆ ಸುಮಾರಿಗೆ ನನ್ನ ಇ-ರಿಕ್ಷಾವನ್ನು ಓಡಿಸುತ್ತಿದ್ದೆ, ಆಗ ಆರೋಪಿಗಳು ನನ್ನ ಮೇಲೆ ಮತ್ತು ನನ್ನ ಕುಟುಂಬವನ್ನು ಕೊಲ್ಲುವ ಬೆದರಿಕೆಯೊಡ್ಡಲು ಮತ್ತು ನಿಂದಿಸಲು ಆರಂಭಿಸಿದರು. ಪೋಲಿಸರು ಸ್ಥಳಕ್ಕೆ ಬಂದ ಕಾರಣದಿಮದಾಗಿ ನಾನು ರಕ್ಷಿಸಲ್ಪಟ್ಟಿದ್ದೇನೆ," ಎಂದು ಇ-ರಿಕ್ಷಾ ಚಾಲಕನಾದ ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಾನೆ. ಆದರೆ ಆತ ಇಲ್ಲಿಯವರೆಗೆ ಮಾಧ್ಯಮಗಳೊಂದಿಗೆ ಮಾತನಾಡಿಲ್ಲ.

ಸೈನಿಕರಿಗಾಗಿ ಹಗುರ ಬುಲೆಟ್ ಪ್ರೂಫ್ ಜಾಕೆಟ್ ತಯಾರಿಸಿದ ಡಿಆರ್‌ಡಿಒಸೈನಿಕರಿಗಾಗಿ ಹಗುರ ಬುಲೆಟ್ ಪ್ರೂಫ್ ಜಾಕೆಟ್ ತಯಾರಿಸಿದ ಡಿಆರ್‌ಡಿಒ

ಈ ವ್ಯಕ್ತಿಯು ಹಿಂದೂ ನೆರೆಹೊರೆಯವರೊಂದಿಗೆ ಕಾನೂನು ವಿವಾದವನ್ನು ಹೊಂದಿರುವ ಮುಸ್ಲಿಂ ಕುಟುಂಬದ ಸಂಬಂಧಿಯಾಗಿದ್ದಾನೆ ಎನ್ನಲಾಗಿದೆ. ಕಾನ್ಪುರ್ ಪೊಲೀಸ್ ಹೇಳಿಕೆಯ ಪ್ರಕಾರ ಜುಲೈನಲ್ಲಿ, ಎರಡು ಕುಟುಂಬಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪರಸ್ಪರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿವೆ. ಮುಸ್ಲಿಂ ಕಡೆಯವರು ಮೊದಲು ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆಯ ಎಫ್‌ಐಆರ್ ದಾಖಲಿಸಿದ್ದರು. ನಂತರ ಹಿಂದೂ ಕಡೆಯವರು "ಮಹಿಳೆಯ ವಿನಯವನ್ನು ಕೆರಳಿಸುವ ಉದ್ದೇಶದಿಂದ ಹಲ್ಲೆ" ಎಂದು ಆರೋಪಿಸಿದರು.

ಮೂಲಗಳು ಹೇಳುವಂತೆ ಬಜರಂಗದಳವು ಇತ್ತೀಚೆಗೆ ಈ ವಿಷಯದಲ್ಲಿ ಭಾಗಿಯಾಗಿತ್ತು ಮತ್ತು ಮುಸ್ಲಿಂ ಕುಟುಂಬದ ವಿರುದ್ಧ ಬಲವಂತದ ಮತಾಂತರದ ಆರೋಪಗಳನ್ನು ಮಾಡಿದೆ. "ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ವಿಡಿಯೋವನ್ನು ನಾವು ನೋಡಿದ್ದೇವೆ. ಸಂತ್ರಸ್ತರ ದೂರಿನ ಆಧಾರದ ಮೇಲೆ ನಾವು ಎಫ್ಐಆರ್ ದಾಖಲಿಸಿದ್ದೇವೆ ಮತ್ತು ಕಾನೂನು ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ," ಎಂದು ಕಾನ್ಪುರದ ಹಿರಿಯ ಪೊಲೀಸ್ ಅಧಿಕಾರಿ ರವೀನಾ ತ್ಯಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಹಿಂದದೆ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ಗುಂಪೊಂದು 20 ವರ್ಷದ ದಲಿತ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಯುವಕನನ್ನು ಎಳದಾಡಿ, ಕೋಲುಗಳಿಂದ ಹೊಡೆಯುವ, ಕಾಲಿಂದ ಒದೆಯುವ, ಪ್ಯಾಂಟ್‌ ಜಾರಿಸಿ ಖಾಸಗಿ ಅಂಗಕ್ಕೆ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ. ಎರಡು ದಿನಗಳ ಹಿಂದೆ ನಡೆದು ತಡವಾಗಿ ಬೆಳಕಿಗೆ ಬಂದಿರುವ ಈ ಘಟನೆ ಕಾನ್ಪುರ್ ದೇಹತ್‌ನ ಅಕ್ಬರ್‌ಪುರ ಪ್ರದೇಶದಿಂದ ಬಂದಿತ್ತು. ಯುವಕನನ್ನು ಥಳಿಸಿದ ಈ ಗುಂಪು ಆತನ ಬಳಿ ಜಾತಿ ಯಾವುದೆಂದು ಕೇಳಿದ್ದು, ಯುವಕ ತನ್ನ ಜಾತಿ ಹೇಳುತ್ತಿದ್ದಂತೆ ಇನ್ನಷ್ಟು ಕ್ರೂರವಾಗಿ ಥಳಿಸಲು ಆರಂಭಿಸಿದ್ದಾರೆ ಎನ್ನಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
A 45-year-old Muslim man in Uttar Pradesh's Kanpur town was paraded through a street, assaulted and made to chant "Jai Shri Ram" slogans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X