ಮೊದಲ ಬಾರಿಗೆ ಯುಪಿ 18-29 ವಯೋಮಾನದ ಮತದಾರರಲ್ಲಿ ತೀವ್ರ ಕುಸಿತ

ಲಕ್ನೋ ಮಾರ್ಚ್ 9: ಉತ್ತರಪ್ರದೇಶದಲ್ಲಿ ಏಳು ಹಂತದಲ್ಲಿ ವಿಧಾನಸಭಾ ಚುನಾವಣೆ ಪೂರ್ಣಗೊಂಡಿದ್ದು ಫಲಿತಾಂಶದತ್ತ (ಮಾರ್ಚ್ 10) ಎಲ್ಲರ ಚಿತ್ತ ನೆಟ್ಟಿದೆ. ಈ ನಡುವೆ ಆಶ್ಚರ್ಯಕರ ಸಂಗತಿಯೊಂದು ಹೊರಬಂದಿದೆ. ಮೊದಲ ಬಾರಿಗೆ ಯುಪಿ 18-29 ವಯೋಮಾನದ ಮತದಾರರಲ್ಲಿ ತೀವ್ರ ಇಳಿಕೆಯಾಗಿದೆ. ಉತ್ತರ ಪ್ರದೇಶದಲ್ಲಿ ಯುವ ಮತದಾರರ ಸಂಖ್ಯೆ (18-29) ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ 61.28 ಲಕ್ಷ ಕಡಿಮೆಯಾಗಿದೆ. 2017 ರಲ್ಲಿ 4.06 ಕೋಟಿಯಿಂದ 2022 ರಲ್ಲಿ 3.44 ಕೋಟಿಗೆ ಇಳಿದಿದೆ.

ಕಳೆದ ಬಾರಿ ಹೋಲಿಸಿದರೆ ಒಟ್ಟು ಮತದಾರರ ಸಂಖ್ಯೆ ಈ ಬಾರಿ 2017 ರಲ್ಲಿ 14.12 ಕೋಟಿಯಿಂದ 2022 ರಲ್ಲಿ 15.03 ಕೋಟಿವರೆಗೆ ಅಂದರೆ 90.30 ಲಕ್ಷ ಹೆಚ್ಚಾಗಿದೆ. ಈ ಬಾರಿ ಒಟ್ಟು ಯುವ ಮತದಾರರು ಶೇಕಡಾ 22.93 ರಷ್ಟು ಮತ ಚಲಾಯಿಸಿದೆ, ಇದು ಐದು ವರ್ಷಗಳ ಹಿಂದೆ ಶೇಕಡಾ 28.73ರಷ್ಟಿತ್ತು. ಶೇಕಡಾ5ರಷ್ಟು ಯುವ ಮತದಾರರ ಸಂಖ್ಯೆ ಕುಸಿತವಾಗಿದೆ. ಮೊದಲ ಬಾರಿಗೆ ಯುಪಿಯಲ್ಲಿ ಯುವ ಮತದಾರರ ಸಂಖ್ಯೆ (2017 ರಲ್ಲಿ 24.25 ಲಕ್ಷದಿಂದ 2022 ರಲ್ಲಿ 19.89 ಲಕ್ಷಕ್ಕೆ) ಇಳಿಕೆಯಾಗಿದೆ.

ಚುನಾವಣಾ ಆಯೋಗದ ವಿಶ್ಲೇಷಣೆಯ ಪ್ರಕಾರ ಪ್ರತಿ ಕ್ಷೇತ್ರದಲ್ಲಿ 18-29 ವಯಸ್ಸಿನ ಮತದಾರರ ಸರಾಸರಿ ಸಂಖ್ಯೆ 15,205 ರಷ್ಟು ಕುಸಿದಿದೆ ಎಂದು ಸೂಚಿಸುತ್ತದೆ.

In Uttar Pradesh, sharp fall in first-time voters, 18-29 age group

ಯುಪಿಯಲ್ಲಿ ಯುವ ಮತದಾರರಲ್ಲಿ ಇಳಿಮುಖವು ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳದಂತಹ ಚುನಾವಣಾ ರಾಜ್ಯಗಳಲ್ಲಿ ಈ ಹಿಂದೆ ಕಂಡುಬಂದ ಪ್ರವೃತ್ತಿಯನ್ನು ಅನುಸರಿಸುತ್ತದೆ. ಜಾರ್ಖಂಡ್‌ನಲ್ಲಿ 2014 ಮತ್ತು 2019 ರ ನಡುವೆ ಯುವ ಮತದಾರರ ಸಂಖ್ಯೆ ಶೇಕಡಾ 14.03 ರಷ್ಟು ಕಡಿಮೆಯಾಗಿತ್ತು. ಬಿಹಾರದಲ್ಲಿ 2015 ಮತ್ತು 2020 ರ ನಡುವೆ ಶೇಕಡಾ 12.48 ಮತ್ತು ಪಶ್ಚಿಮ ಬಂಗಾಳದಲ್ಲಿ 2016 ಮತ್ತು 2021 ರ ನಡುವೆ ಶೇಕಡಾ 1.3 ರಷ್ಟು ಮತದಾನ ಕಡಿಮೆಯಾಗಿತ್ತು.

ಯುಪಿಯಲ್ಲಿ 30-39 ವಯಸ್ಸಿನ ಮತದಾರರಲ್ಲಿ ಗರಿಷ್ಠ ಹೆಚ್ಚಳವಾಗಿದೆ. 2017 ರಲ್ಲಿ 3.48 ಕೋಟಿಯಿಂದ 2022 ರಲ್ಲಿ 4.06 ಕೋಟಿವರೆಗೆ ಅಂದರೆ 57.15 ಲಕ್ಷ ಅಥವಾ ಶೇಕಡಾ16.39ರಷ್ಟು ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಇದು ಅತಿದೊಡ್ಡ ಹೆಚ್ಚಳವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ 20-29 ವಯೋಮಾನದವರ ಸಂಖ್ಯೆ ಕಡಿಮೆಯಾಗಿದೆ.

In Uttar Pradesh, sharp fall in first-time voters, 18-29 age group

ಮತದಾರರ ಸಂಖ್ಯೆಯಲ್ಲಿ ದೊಡ್ಡ ಜಿಗಿತವನ್ನು ಕಂಡ ಮತ್ತೊಂದು ವಯೋಮಾನದವರೆಂದರೆ 50-59. ಈ ವಯೋಮಾನದ ಮತದಾರರು 2017 ರಲ್ಲಿ 1.89 ಕೋಟಿಯಿಂದ 2022 ರಲ್ಲಿ 2.27 ಕೋಟಿಗೆ ವಿಸ್ತಾರಗೊಂಡಿದ್ದಾರೆ. ಅಂದರೆ 37.41 ಲಕ್ಷ ಅಥವಾ ಶೇಕಡ19.71ರಷ್ಟು ಮತದಾರರು ಹೆಚ್ಚಾಗಿದ್ದಾರೆ. ಇತರ ವಯೋಮಾನದ (40-49; 60-69; 70-79; ಮತ್ತು 80+) ಮತದಾರರ ಸಂಖ್ಯೆಯು ಕಳೆದ ಐದು ವರ್ಷಗಳಲ್ಲಿ 6.29 ಮತ್ತು 25.23 ಪ್ರತಿಶತದ ನಡುವೆ ಹೆಚ್ಚಾಗಿದೆ.

ಅದಾಗ್ಯ 29 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತದಾರರ ಸಂಖ್ಯೆಯಲ್ಲಿ ತೀವ್ರ ಕುಸಿತ ಗಮನಾರ್ಹವಾಗಿದೆ. ಏಕೆಂದರೆ ಯುಪಿಯಲ್ಲಿ ಯುವಕರಲ್ಲಿ ನಿರುದ್ಯೋಗ ದರವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ ಹೊರತಂದ ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ ಪ್ರಕಾರ, 15-29 ವಯಸ್ಸಿನ ನಿರುದ್ಯೋಗ ದರವು (ಪ್ರಸ್ತುತ ಸಾಪ್ತಾಹಿಕ ಸ್ಥಿತಿಯನ್ನು ಆಧರಿಸಿ) ಯುಪಿಯ ನಗರ ಪ್ರದೇಶಗಳಲ್ಲಿ 2021 ರ ಹಣಕಾಸು ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 2020 ರ ತ್ರೈಮಾಸಿಕದಲ್ಲಿ ಶೇಕಡಾ 21.8 ರಷ್ಟಿತ್ತು. ಇದು 2021 ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡಾ10.6ಕ್ಕಿಂತ ಹೆಚ್ಚಿನದಾಗಿದೆ.

Recommended Video

      ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಏನ್ ಹೇಳುತ್ತೆ?? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+