'ಉತ್ತರ ಪ್ರದೇಶ ಕೇರಳಕ್ಕೆ ತಿರುಗಿದರೆ': ಆದಿತ್ಯನಾಥ್‌ಗೆ ಪಿಣರಾಯಿ ವಿಜಯನ್ ತಿರುಗೇಟು
ನವದೆಹಲಿ, ಫೆಬ್ರವರಿ 10: ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಿದ್ದರೆ ಉತ್ತರ ಪ್ರದೇಶ ಕೇರಳವಾಗಿ ಬದಲಾಗಬಹುದು ಎಂಬ ಯೋಗಿ ಆದಿತ್ಯನಾಥ್ ಅವರ ಗೇಲಿ ಮಾತಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ತಿರುಗೇಟು ನೀಡಿದ್ದಾರೆ.
"ಯೋಗಿ ಆದಿತ್ಯನಾಥ್ ಭಯಪಡುವಂತೆ ಉತ್ತರಪ್ರದೇಶವು ಕೇರಳಕ್ಕೆ ತಿರುಗಿದರೆ, ಅದು ಅತ್ಯುತ್ತಮ ಶಿಕ್ಷಣ, ಆರೋಗ್ಯ ಸೇವೆಗಳು, ಸಮಾಜ ಕಲ್ಯಾಣ, ಉತ್ತಮ ಜೀವನಮಟ್ಟವನ್ನು ಅನುಭವಿಸುತ್ತದೆ ಮತ್ತು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ಹತ್ಯೆ ಮಾಡದ ಸಾಮರಸ್ಯದ ಸಮಾಜವನ್ನು ಹೊಂದಿರುತ್ತದೆ. ಇದನ್ನು ಉತ್ತರ ಪ್ರದೇಶದ ಜನರು ಬಯಸುತ್ತಾರೆ'' ಎಂದು ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.
Recommended Video
ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಟ್ವೀಟ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಉತ್ತರ ಪ್ರದೇಶವು ಕಾಶ್ಮೀರ, ಬಂಗಾಳ ಅಥವಾ ಕೇರಳವಾಗಿ ಬದಲಾಗುತ್ತದೆ ಎಂದು ಮತದಾರರಿಗೆ ಯೋಗಿ ಆದಿತ್ಯನಾಥ್ ಹೇಳುತ್ತಾರೆ. ಕಾಶ್ಮೀರದ ಸೌಂದರ್ಯ, ಬಂಗಾಳದ ಸಂಸ್ಕೃತಿ ಮತ್ತು ಕೇರಳದ ಶಿಕ್ಷಣ ಪಡೆಯಲು ಯುಪಿ ಅದೃಷ್ಟ ಮಾಡಿರಬೇಕು" ಎಂದು ತರೂರ್ ಪೋಸ್ಟ್ ಮಾಡಿದ್ದಾರೆ.

ಜನರು ಮತದಾನದಲ್ಲಿ ತಪ್ಪು ಮಾಡಿದರೆ ರಾಜ್ಯವು ಪಶ್ಚಿಮ ಬಂಗಾಳ ಅಥವಾ ಕಾಶ್ಮೀರವಾಗಬಹುದು ಎಂದು ಯೋಗಿ ಆದಿತ್ಯನಾಥ್ ಮೊದಲ ಹಂತದ ಮತದಾನಕ್ಕೆ ಮುನ್ನ ಹೇಳಿದರು. ಉತ್ತರ ಪ್ರದೇಶ ಬಿಜೆಪಿ ಶೇರ್ ಮಾಡಿರುವ ವೀಡಿಯೋದಲ್ಲಿ ಬಿಜೆಪಿಗೆ ಮತ ಹಾಕಿದರೆ ಭಯಮುಕ್ತ ಜೀವನ ಗ್ಯಾರಂಟಿ ಎಂದು ಯೋಗಿ ಹೇಳಿದ್ದಾರೆ.
ಅಪರಾಧ ಮುಕ್ತ, ಭಯಮುಕ್ತ, ಗಲಭೆ ಮುಕ್ತ' ರಾಜ್ಯಕ್ಕಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ಹಾಕುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಮತದಾರರಲ್ಲಿ ಮನವಿ ಮಾಡಿದ್ದಾರೆ. "ಇಂದು ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದೆ. ನಿಮ್ಮ (ಮತದಾರರ) ಕೊಡುಗೆಯಿಲ್ಲದೆ ಈ ಮತದಾನದ ಆಚರಣೆಯು ಅಪೂರ್ಣವಾಗಲಿದೆ. ನಿಮ್ಮ ಒಂದು ಮತವು ಅಪರಾಧ ಮುಕ್ತ, ಭಯ-ಮುಕ್ತ, ಗಲಭೆ ಮುಕ್ತ ಉತ್ತರ ಪ್ರದೇಶ ನಿರ್ಮಾಣವನ್ನು ಬಲಪಡಿಸುತ್ತದೆ'' ಎಂದು ಆದಿತ್ಯನಾಥ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
मतदान करें, अवश्य करें !
— BJP Uttar Pradesh (@BJP4UP) February 9, 2022
आपका एक वोट उत्तर प्रदेश का भविष्य तय करेगा। नहीं तो उत्तर प्रदेश को कश्मीर, केरल और बंगाल बनते देर नहीं लगेगी: मुख्यमंत्री श्री @myogiadityanath pic.twitter.com/03VUlXOY35
ತಮ್ಮ ವೈಯಕ್ತಿಕ ಟ್ವಿಟ್ಟರ್ ಹ್ಯಾಂಡಲ್‌ನಿಂದ ಹಂಚಿಕೊಂಡ ಸುಮಾರು ಆರು ನಿಮಿಷಗಳ ಸುದೀರ್ಘ ವಿಡಿಯೋದಲ್ಲಿ, ಯೋಗಿ ಆದಿತ್ಯನಾಥ್ ಅವರು ಬಿಜೆಪಿಗೆ ಮತ ನೀಡಿದರೆ ಭಯ ಮುಕ್ತ ಜೀವನವನ್ನು ಖಾತರಿಪಡಿಸುತ್ತದೆ ಎಂದು ಹೇಳಿದ್ದಾರೆ. ನನ್ನ ಹೃದಯದಲ್ಲಿ ಬಹಳಷ್ಟು ಹೇಳುವುದು ಇದೆ. ನಾನು ನಿಮಗೆ ಅದನ್ನು ಹೇಳಲು ಬಯಸುತ್ತೇನೆ. ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಮಹತ್ತರವಾದ ಘಟನೆಗಳು ನಡೆದಿವೆ. ಹೀಗಾಗಿ ನೀವು ಜಾಗರೂಕರಾಗಿರಿ. ಈ ಐದು ವರ್ಷಗಳ ದುಡಿಮೆ ತಪ್ಪಿದರೆ ಎಲ್ಲವೂ ಹಾಳಾಗುತ್ತದೆ. ಯುಪಿ ಕಾಶ್ಮೀರ, ಕೇರಳ ಮತ್ತು ಬಂಗಾಳ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
ಕಳೆದ ಐದು ವರ್ಷಗಳ ನನ್ನ ಶ್ರಮಕ್ಕೆ ನಿಮ್ಮ ಮತವು ಆಶೀರ್ವಾದವಾಗಲಿದೆ. ದೊಡ್ಡ ನಿರ್ಧಾರದ ಸಮಯ ಬಂದಿದೆ. ಕಳೆದ ಐದು ವರ್ಷಗಳಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು ಸಮರ್ಪಣಾ ಮತ್ತು ಬದ್ಧತೆಯಿಂದ ಎಲ್ಲವನ್ನೂ ಮಾಡಿದೆ. ನೀವು ಎಲ್ಲವನ್ನೂ ವಿವರವಾಗಿ ನೋಡಿದ್ದೀರಿ ಮತ್ತು ಕೇಳಿದ್ದೀರಿ ಎಂದು ಯೋಗಿ ಹೇಳಿದರು.
ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಪೂರ್ಣಗೊಂಡಿದೆ. ಉತ್ತರ ಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳಿಗೆ ಗುರುವಾರ ಸಂಜೆ 6.00 ಗಂಟೆಗೆ ಮತದಾನ ಪೂರ್ಣಗೊಂಡಿದೆ. ರೈತ ಸಂಘಟನೆಗಳು ಲಖಿಂಪುರಖೇರಿ ಪ್ರಕರಣದಲ್ಲಿ ಸಚಿವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಸಚಿವರ ಮೇಲೆ ಕ್ರಮ ಕೈಗೊಳ್ಳುವುದಿರಲಿ ಪ್ರಮುಖ ಆರೋಪಿಗೆ ಜಾಮೀನು ಸಿಕ್ಕಿರುವುದು ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ರೈತ ಮತಗಳು ದೊಡ್ಡ ಸವಾಲಾಗಿ ಪರಿಣಮಿಸಿವೆ. ಈ ವೇಳೆ ಲಖಿಂಪುರ ಪ್ರಮುಖ ಆರೋಪಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿರುವುದು ಬಿಜೆಪಿಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications