ಹಿಂದೂ ಮಹಾಸಭಾ ಅಧ್ಯಕ್ಷ ಕಮಲೇಶ್ ತಿವಾರಿ ಹತ್ಯೆ
ಲಕ್ನೋ, ಅಕ್ಟೋಬರ್ 18: ಹಿಂದೂ ಮಹಾಸಭಾ ಅಧ್ಯಕ್ಷ ಕಮಲೇಶ್ ತಿವಾರಿಯವನ್ನು ಹತ್ಯೆ ಮಾಡಲಾಗಿದೆ.
ಕಮಲೇಶ್ ತಿವಾರಿ ಅವರ ಕಚೇರಿಯಲ್ಲೇ ಅವರ ಹತ್ಯೆ ನಡೆದಿದೆ. ಇಬ್ಬರು ದುಷ್ಕರ್ಮಿಗಳು ಸಿಹಿ ಹಂಚುವ ನೆಪದಲ್ಲಿ ಕಚೇರಿಗೆ ಬಂದಿದ್ದು, ಸ್ವೀಟ್ ಬಾಕ್ಸ್‌ನಲ್ಲಿ ಪಿಸ್ತೂಲ್‌ನ್ನು ಇಟ್ಟುಕೊಂಡು ಬಂದಿದ್ದರು.

ತಕ್ಷಣ ಅವರನ್ನು ಕೊಲೆ ಮಾಡಿ ಇಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ಪ್ರೊಫೆಟ್ ಮೊಹಮ್ಮದ್ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದು ಎಲ್ಲೆಡೆ ಸುದ್ದಿಯಾಗಿತ್ತು.
ಆದರೆ ಹತ್ಯೆಗೆ ಕಾರಣ ಏನು ಎನ್ನುವುದು ಇದುವರೆಗೂ ತಿಳಿದುಬಂದಿಲ್ಲ. ವೈದ್ಯರ ಪ್ರಕಾರ ಅವರನ್ನು ಆಸ್ಪತ್ರೆಗೆ ಕರೆತರುವಾಗಲೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ಪೊಲೀಸರು ಮೊಬೈಲ್ ನ ಕಾಲ್ ಡೀಟೇಲ್ಸ್ ಕಲೆ ಹಾಕುತ್ತಿದ್ದಾರೆ. ಮೊದಲು ರೂಮಿನಲ್ಲಿ ಚಹಾವನ್ನು ಕುಡಿದಿದ್ದಾರೆ. ಬಳಿಕ ಮಿಠಾಯಿ ಡಬ್ಬದಲ್ಲಿದ್ದ ಗನ್ ತೆಗೆದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.












Click it and Unblock the Notifications