ಗೋರಖ್‌ಪುರ: ಕಸದ ಗಾಡಿಯಲ್ಲಿ ಇವಿಎಂ ಯಂತ್ರ ಹುಡುಕಿದ ಎಸ್‌ಪಿ ಕಾರ್ಯಕರ್ತರು
ಗೋರಖ್‌ಪುರದಲ್ಲಿ ಕಸದ ಗಾಡಿಯಲ್ಲಿ ಎಸ್‌ಪಿ ಕಾರ್ಯಕರ್ತರು ಇವಿಎಂ ಯಂತ್ರಗಳನ್ನು ಹುಡುಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಬಳಿಕ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಗಂಭೀರ ಮಾಡಿದ್ದು ಸದ್ಯ ಈ ಆರೋಪ ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲವನ್ನು ಸೃಷ್ಟಿ ಮಾಡಿದೆ. ನಿನ್ನೆಯಷ್ಟೇ ಅಖಿಲೇಶ್ ಯಾದವ್ ವಾರಣಾಸಿಯಲ್ಲಿ ಇವಿಎಂಗಳನ್ನು ಸಾಗಿಸಲಾಗುತ್ತಿರುವ ದೃಶ್ಯಗಳು ಕಂಡು ಬಂದಿವೆ ಎಂದು ಗಂಭೀರ ಆರೋಪವನ್ನು ಮಾಡಿದ್ದರು.
ಸಮಾಜವಾದಿ ಪಕ್ಷದ ಕಾರ್ಯಕರ್ತರು ಇವಿಎಂ ರವಾನಿಸುವುದನ್ನು ಕಂಡಿದ್ದಾರೆ. ಅದರ ವಿಡಿಯೋ ಕೂಡ ವೈರಲ್ ಆಗಿದೆ ಎಂದು ಅಖಿಲೇಶ್ ವಿಡಿಯೊಂದನ್ನು ಹಂಚಿಕೊಂಡಿದ್ದರು. ವಾರಣಾಸಿಯ ಆಡಳಿತ ಅಧಿಕಾರಿಗಳು ಇವಿಎಂ ಯಂತ್ರಗಳನ್ನು ಸ್ಥಳಾಂತರಿಸುತ್ತಿದ್ದಾರೆ ಎಂದು ಅಖಿಲೇಶ್ ಯಾದವ್ ಮಂಗಳವಾರ ಆರೋಪಿಸಿದ್ದಾರೆ.
गोरखपुर : कूड़ा गाड़ी में EVM मशीन खोजते सपा कार्यकर्ता #UPElection2022 pic.twitter.com/u4tgbKHtHO
— News24 (@news24tvchannel) March 9, 2022
ವಾರಣಾಸಿಯಲ್ಲಿ ಎಸ್ಪಿ ಕಾರ್ಯಕರ್ತರು ಇವಿಎಂ ತುಂಬಿದ ಟ್ರಕ್ ಅನ್ನು ಹಿಡಿದಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಈ ಹೇಳಿಕೆಯ ನಂತರ ಯುಪಿ ರಾಜಕೀಯದಲ್ಲಿ ಹೊಸ ಸಂಚಲನ ಶುರುವಾಗಿದೆ.

ಬಿಜೆಪಿ ಮತ್ತು ಚುನಾವಣಾ ಆಯೋಗ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಈ ವೇಳೆ ವಾರಣಾಸಿಯ ಡಿಎಂ ಇಡೀ ವಿಷಯದ ಬಗ್ಗೆ ಹೇಳಿಕೆ ನೀಡಿದ್ದಾರೆ. ಮತದಾನದ ವೇಳೆ ಬಳಸಲಾದ ಎಲ್ಲಾ ಇವಿಎಂಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications