ರೌಡಿ ವಿಕಾಸ್ ದುಬೆಯ ಮತ್ತೊಬ್ಬ ಅತ್ಯಾಪ್ತ ಪೊಲೀಸ್ ಎನ್‌ಕೌಂಟರ್‌ಗೆ ಬಲಿ

ಲಕ್ನೋ, ಜುಲೈ 09: ಎಂಟು ಪೊಲೀಸರನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿರುವ ರೌಡಿ ಶೀಟರ್ ವಿಕಾಸ್ ದುಬೆ ಮತ್ತೊಬ್ಬ ಅತ್ಯಾಪ್ತ ಪ್ರಭಾತ್ ಮಿಶ್ರನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.

Recommended Video

      Facebook , Instagram , tinder ಸೇರಿದಂತೆ ಬಾರತೀಯ ಸೇನೆಯು 89 ಆ್ಯಪ್‌ಗಳನ್ನು ನಿಷೇಧಿಸಿದೆ.| Oneindia Kannada

      ಬುಧವಾರವಷ್ಟೇ ವಿಕಾಸ್ ಆಪ್ತ ಅಮರ್ ದುಬೆಯನ್ನು ಕೂಡ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಮಂಗಳವಾರ ವಿಕಾಸ್ ದುಬೆಯ ನಾಲ್ವರು ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದರು.

      ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದರು, ತಪ್ಪಿಸಿಕೊಳ್ಳಲು ಯತ್ನಿಸಿದ ಕಾರಣ ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

      Gangster Vikas Dubey’s Close Aide Prabhat Misra Shot Dead In Police Encounter

      ಪೊಲೀಸರ ದಾಳಿ ಕುರಿತು ಮೊದಲೇ ಮಾಹಿತಿ ನೀಡಿದ್ದ ಆಧಾರದ ಮೇಲೆ ಇಬ್ಬರು ಪೊಲೀಸರನ್ನು ಕೂಡ ಬಂಧಿಸಲಾಗಿದೆ.

      ವಿಕಾಸ್ ದುಬೆ ಹರ್ಯಾಣ ಸಮೀಪವಿರುವ ಫರೀದಾಬಾದ್‌ನ ಹೋಟೆಲ್‌ ಒಂದರಲ್ಲಿ ಕಾಣಿಸಿಕೊಂಡಿದ್ದು, ಪೊಲೀಸರು ಅಲ್ಲಿಗೆ ಹೋಗುವ ಮುನ್ನವೇ ಅಲ್ಲಿಂದ ಪರಾರಿಯಾಗಿದ್ದ. ಸಿಸಿಟಿವಿಯಲ್ಲಿ ಆತನ ಚಿತ್ರ ಸೆರೆಯಾಗಿದೆ. ಆತ ಬಗ್ಗೆ ಸುಳಿವು ಕೊಟ್ಟವರಿಗೆ ನೀಡುವ ಬಹುಮಾನದ ಮೊತ್ತವನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+