ಕೊರೊನಾದಿಂದ ಸತ್ತವನ ಪಾರ್ಥಿವ ಶರೀರ ತರಲು ದುಡ್ಡಿಲ್ಲ, 'ಡಮ್ಮಿ' ಅಂತ್ಯಕ್ರಿಯೆ ನಡೆಸಿದ ಕುಟುಂಬ
ಲಕ್ನೌ, ಏಪ್ರಿಲ್ 21: ಕೊರೊನಾ ಸೋಂಕಿನಿಂದ ವ್ಯಕ್ತಿ ಮೃತಪಟ್ಟರೆ ಆ ಪಾರ್ಥಿವ ಶರೀರದ ಅಂತ್ಯಕ್ರಿಯೆ ಆಯಾ ಜಿಲ್ಲಾಡಳಿತದ ನಿರ್ಧಾರಕ್ಕೆ ಬಿಡಲಾಗುತ್ತೆ. ಕೆಲವು ಕಡೆ ಕುಟುಂಬದವರಿಗೂ ಅವಕಾಶ ನೀಡದೆ ಅಂತ್ಯಕ್ರಿಯೆ ಮಾಡಲಾಗಿದೆ. ಇನ್ನು ಕೆಲವು ಕಡೆ ಸಂಬಂಧಿಕರು ದೂರದಿಂದ ಮೃತ ವ್ಯಕ್ತಿಯ ಮುಖ ನೋಡಿರುವುದಷ್ಟೆ ಸಮಾಧಾನ.
ಅದೇಷ್ಟೋ ಕಡೆ ಕೊರೊನಾ ಸೋಂಕಿತ ಮೃತ ವ್ಯಕ್ತಿಯ ಪಾರ್ಥಿವ ಶರೀರವನ್ನು ಊರಿಗೆ ತರದೆ ಅಂತ್ಯಕ್ರಿಯೆ ಮಾಡಿರುವ ಘಟನೆಯೂ ನಡೆದಿದೆ. ಬಹುಶಃ ಈ ಘಟನೆಗಳನ್ನು ನೋಡಿದ್ಮೇಲೆ, ಯಾರಿಗೂ ಇಂತಹ ಸಾವು ಬರಬಾರದು ಎಂದು ನೊಂದುಕೊಂಡವರೇ ಹೆಚ್ಚು.
ಇದೀಗ, ಕೊರೊನಾದಿಂದ ಸಾವನ್ನಪ್ಪಿದ್ದ ವ್ಯಕ್ತಿಯ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲಾಗದೆ, ಬಳಿಕ, ನಕಲಿ ಅಂತ್ಯಕ್ರಿಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ಮುಂದೆ ಓದಿ...

ದೆಹಲಿಯಿಂದ ತರಲು ಸಾಧ್ಯವಾಗಲ್ಲಿ
ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ 38 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ನಂತರ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಐಸೋಲೇಟ್ ಮಾಡಲಾಗಿದೆ. ಈ ಮಧ್ಯದಲ್ಲಿ ಮನೆಯವರು ಫೋನ್ ಮಾಡಿದ್ದರೂ, ರಿಸೀವ್ ಮಾಡಿರಲಿಲ್ಲ. ಆದರೆ, ಕೊರೊನಾದಿಂದ ಚೇತರಿಸಿಕೊಳ್ಳದ ವ್ಯಕ್ತಿ ಮೃತಪಟ್ಟಿದ್ದ. ಈ ವಿಚಾರವನ್ನು ಪೊಲೀಸ್ ಪೇದೆ ಫೋನ್ ಮಾಡಿ ಕುಟುಂಬಕ್ಕೆ ತಿಳಿಸಿದ್ದರು.

ಪಾರ್ಥಿವ ಶರೀರ ತರಲಾಗಲಿಲ್ಲ
ದೆಹಲಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ರವಾನಿಸಲು ಸಾಧ್ಯವಾಗದ ಕುಟುಂಬ ಪೊಲೀಸರಿಗೆ ನೀವೆ ಅಂತ್ಯ ಸಂಸ್ಕಾರ ಮಾಡಿ ಎಂದು ಮನವಿ ಮಾಡಿಕೊಂಡಿತ್ತು. ಕಾರಣ, ದೆಹಲಿಯಿಂದ ಪಾರ್ಥಿವ ಶರೀರ ರವಾನಿಸಲು 25 ಸಾವಿರ ದುಡ್ಡು ಬೇಕಾಗಿತ್ತು. ಬಡತನದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಆ ಕುಟುಂಬದ ಬಳಿ ಅಷ್ಟು ದೊಡ್ಡ ಮೊತ್ತ ಇರಲಿಲ್ಲ.

ನಕಲಿ ಅಂತ್ಯಕ್ರಿಯೆ ಮಾಡಿದ ಕುಟುಂಬ
ಮನೆಯ ಮಗನನ್ನು ಕಳೆದುಕೊಂಡ ಕುಟುಂಬ ನಕಲಿ ಅಂತ್ಯಕ್ರಿಯೆ ಮಾಡುವ ಮೂಲಕ ಗಮನ ಸೆಳೆದಿದೆ. ಮೃತ ವ್ಯಕ್ತಿಯ ಮಗನಿಂದ ಅಂತ್ಯಸಂಸ್ಕಾರದ ಕಾರ್ಯ ನಡೆಸಲಾಗಿದೆ. ಈ ಘಟನೆ ಕಂಡು ಇಡೀ ಗ್ರಾಮ ಅಚ್ಚರಿಗೊಂಡಿದೆ. ಈ ಕುರಿತು ದೆಹಲಿ ಪೊಲೀಸ್ ಅರ್ಪಿತ್ ಗುಪ್ತ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆ ಕುಟುಂಬಕ್ಕೆ ನೆರವಾಗಿದ್ದಾರೆ.

ನೆರೆವಿಗೆ ಧಾವಿಸಿದ ಸ್ಥಳಿಯ ಆಡಳಿತ ಮಂಡಳಿ
ಈ ಘಟನೆ ನಡೆದ ಬಳಿಕ ಸ್ಥಳೀಯ ಆಡಳಿತ ಮಂಡಳಿ ಆ ಕುಟುಂಬದ ನೆರವಿಗೆ ಧಾವಿಸಿದೆ. ಸುಮಾರು 75 ಸಾವಿರ ಹಣವನ್ನು ಸಂಗ್ರಹಿಸಿ ಮೃತ ವ್ಯಕ್ತಿಯ ಪತ್ನಿ ಹೆಸರಿಗೆ ಬ್ಯಾಂಕ್‌ನಲ್ಲಿ ಜಮಾ ಮಾಡಲಾಗಿದೆ. ಜೊತೆಗೆ ದಿನಸಿ ಕೂಡ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ದೆಹಲಿ ಪೊಲೀಸ್ ಅರ್ಪಿತ್ ಗುಪ್ತಾ ಅವರು, ಅವರ ಐದು ಮಕ್ಕಳಿಗೆ ಶಿಕ್ಷಣ ಕೊಡಿಸುವುದಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.












Click it and Unblock the Notifications