ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ: ಪಾರ್ಟಿ ಮಾಡಿದ ಗಾಯಕಿ ಕನಿಕಾ ವಿರುದ್ಧ ಎಫ್ಐಆರ್

|
Google Oneindia Kannada News

ಲಕ್ನೋ, ಮಾರ್ಚ್ 20: ದೇಶದೆಲ್ಲೆಡೆ ಕೊರೊನಾವೈರಸ್ ಸೋಂಕಿನ ಭೀತಿ ಎದುರಾಗಿದೆ, ಸಭೆ, ಸಮಾರಂಭ, ಪಾರ್ಟಿ, ಪಬ್ ಬಂದ್ ಮಾಡುವಂತೆ ಬಹುತೇಕ ಎಲ್ಲಾ ರಾಜ್ಯಗಳು ಆದೇಶಿಸಿವೆ. ಆದರೆ, ಸರ್ಕಾರದ ಆದೇಶದ ವಿರುದ್ಧ ಪಾರ್ಟಿ ಆಯೋಜಿಸಿದ್ದ ''ಬೇಬಿ ಡಾಲ್'' ಖ್ಯಾತಿಯ ಗಾಯಕಿ ಕನಿಕಾ ಕಪೂರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಿದ್ದಾರೆ.

ಉತ್ತರಪ್ರದೇಶದ ಲಕ್ನೋದ ಸರೋಜಿನಿ ನಗರ ಠಾಣೆ ಪೊಲೀಸರು, ಐಪಿಸಿ ಸೆಕ್ಷನ್ 188, 269, 270 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಕನಿಕಾ ಕಪೂರ್ ಜತೆಗಿದ್ದ ವಸುಂಧರಾ ರಾಜೇ, ಮಗ ದುಶ್ಯಂತ್‌ಗೆ ಹೆಚ್ಚಿದ ಆತಂಕಕನಿಕಾ ಕಪೂರ್ ಜತೆಗಿದ್ದ ವಸುಂಧರಾ ರಾಜೇ, ಮಗ ದುಶ್ಯಂತ್‌ಗೆ ಹೆಚ್ಚಿದ ಆತಂಕ

ಲಂಡನ್‌ಗೆ ತೆರಳಿದ್ದ 41 ವರ್ಷದ ಕನಿಕಾ ಕಪೂರ್, ಮಾರ್ಚ್ 15ರಂದು ಸ್ವದೇಶಕ್ಕೆ ಮರಳಿದ್ದರು. ತಾವು ಲಂಡನ್‌ಗೆ ಹೋಗಿ ಬಂದಿದ್ದನ್ನು ಅಧಿಕಾರಿಗಳಿಂದ ಮುಚ್ಚಿಟ್ಟಿದ್ದ ಅವರು ಈ ಐದು ದಿನಗಳಲ್ಲಿ ಎಲ್ಲೆಡೆ ಸುತ್ತಾಡಿದ್ದಾರೆ. ಲಕ್ನೋದ ನಿವಾಸಕ್ಕೆ ಮರಳಿದ ನಂತರ ತಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಪಂಚತಾರಾ ಹೋಟೆಲ್ ಒಂದರಲ್ಲಿ ಭರ್ಜರಿ ಪಾರ್ಟಿ ಕೊಡಿಸಿದ್ದರು. ಈ ಮೂಲಕ ಸರ್ಕಾರಿ ಆದೇಶ ಮೀರಿದ್ದಲ್ಲದೆ, ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗುವಂತೆ ನಡೆದುಕೊಂಡಿದ್ದರಿಂದ ಕನಿಕಾ ವಿರುದ್ಧ ದೂರು ದಾಖಲಾಗಿದೆ.

Coronavirus outbreak: FIR registered against singer Kanika Kapoor for partying

ವಿದೇಶದಿಂದ ಭಾರತಕ್ಕೆ ಮರಳುವ ಎಲ್ಲಾ ಪ್ರಯಾಣಿಕರು, ಕಡ್ಡಾಯವಾಗಿ ಕೊರೊನಾವೈರಸ್ ಸೋಂಕು ಇರುವ ಬಗ್ಗೆ ಪರೀಕ್ಷೆಗೊಳಪಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದೇಶ ನೀಡಿವೆ. ಕನಿಕಾ ಅವರನ್ನು ಕೊನೆಗೂ ಪರೀಕ್ಷಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾ ಪಾಸಿಟಿವ್ ಇದ್ದರೂ ಪಾರ್ಟಿ ಮಾಡಿದ ಕನಿಕಾ ವಿರುದ್ಧ ದೂರು ದಾಖಲಾಗಿದೆ.ಸದ್ಯ ಲಕ್ನೋದ ಕಿಂಗ್ ಜಾರ್ಜ್ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಗಾಯಕಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

English summary
FIR registered against singer Kanika Kapoor for throwing a party amid of Coronavirus outbreak.Sarojini Nagar Police Station, Lucknow booked her under various sections of IPC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X