ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರದ ದೇವಾಲಯದೊಳಗೆ ಕ್ರಿಶ್ಚಿಯನ್ ಪ್ರಾರ್ಥನೆ: ವಿವಾದ ಸೃಷ್ಟಿದ ವಿಡಿಯೋ- ಪೊಲೀಸ್ ಸ್ಪಷ್ಟನೆ

|
Google Oneindia Kannada News

ನವದೆಹಲಿ ಏಪ್ರಿಲ್ 1: ಆಂಧ್ರಪ್ರದೇಶದ ದೇವಾಲಯದೊಳಗೆ ಕ್ರಿಶ್ಚಿಯನ್ ಪ್ರಾರ್ಥನೆಯ ವಿಡಿಯೋ ವಿವಾದವನ್ನು ಹುಟ್ಟುಹಾಕಿದೆ. ಗಂಗವರಂ ಗ್ರಾಮದ ದೇವಸ್ಥಾನವೊಂದರಲ್ಲಿ ಕ್ರೈಸ್ತ ಮಿಷನರಿ ಗುಂಪುಗಳು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ವೈರಲ್ ಆದ ಬಳಿಕ ವಿವಾದಕ್ಕೆ ಎಡೆ ಮಾಡಿತ್ತು. ಆದರೆ ಇದರ ಬಗ್ಗೆ ಶುಕ್ರವಾರ ಆಂಧ್ರಪ್ರದೇಶ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ನಿವಾಸಿಯೊಬ್ಬರು ಕ್ರೈಸ್ತ ಪ್ರಾರ್ಥನೆ ಸಲ್ಲಿಸುತ್ತಿದ್ದು, ದೇವಸ್ಥಾನದ ಆವರಣದಲ್ಲಿ ಪೂಜೆ ನಡೆಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೂರ್ವ ಗೋದಾವರಿ ಎಸ್ಪಿ ಎಂ ರವೀಂದ್ರನಾಥ್ ಮಾತನಾಡಿ, "ದೇವಾಲಯದ ಪಕ್ಕದಲ್ಲಿರುವ ತನ್ನ ಮನೆಯ ಮುಂಭಾಗದ ರಸ್ತೆಯಲ್ಲಿ ನಿವಾಸಿ ಕ್ರಿಶ್ಚಿಯನ್ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ. ದೇವಸ್ಥಾನದಲ್ಲಿ ಯಾವುದೇ ಪ್ರಾರ್ಥನೆ ಮಾಡಲಾಗಿಲ್ಲ'' ಎಂದು ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ರಾಮ ಮಂದಿರದಲ್ಲಿ ಪ್ರತಿದಿನ ಪ್ರಾರ್ಥನೆಗಳು ನಡೆಯುತ್ತಿವೆ. ಜೊತೆಗೆ ಇವರ ನಡುವೆ ಯಾವುದೇ ವಿವಾದವಿಲ್ಲ. ಎರಡು ಸಮುದಾಯಗಳ ನಡುವೆ ಯಾವುದೇ ವಿವಾದಗಳಿಲ್ಲ. ಎರಡೂ ಸಮುದಾಯಗಳು ಪರಸ್ಪರ ಸೌಹಾರ್ದ ಸಂಬಂಧವನ್ನು ಹೊಂದಿವೆ.

Christian prayer within the temple of Andhra: Controversy Video - Police clarify

ಪೊಲೀಸರ ಪ್ರಕಾರ, ಮಾರ್ಚ್ 30 ರಂದು ಪ್ರಾರ್ಥನೆ ನಡೆಯುತ್ತಿದ್ದಾಗ, ಮಂಗಾಯಮ್ಮ ಅವರ ಹಿರಿಯ ಮಗ ಶ್ರೀನಿವಾಸ್ ಪ್ರಾರ್ಥನೆಗಾಗಿ ಅಪಾರ ಪ್ರಮಾಣದ ಹಣವನ್ನು ಖರ್ಚು ಮಾಡುವ ಬಗ್ಗೆ ಅವಳೊಂದಿಗೆ ಜಗಳವಾಡಿದ್ದನು. ಶ್ರೀನಿವಾಸ ತನ್ನ ತಾಯಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದಾಗ, ಮಂಗಾಯಮ್ಮ ಮತ್ತು ಇತರರು ಪಾಮರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ವಿವಾದವನ್ನು ಬಗೆಹರಿಸಿದ್ದರು. ಆದರೆ ಶ್ರೀನಿವಾಸ್ ಅವರ ಸೋದರ ಸಂಬಂಧಿ ವೆಂಕಟ ರಾಮನ್ ಎಂದು ಗುರುತಿಸಲಾಗಿದ್ದ ವ್ಯಕ್ತಿ ಧಾರ್ಮಿಕ ದ್ವೇಷವನ್ನು ಪ್ರಚೋದಿಸಲು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ.

ಶ್ರೀಲಂಕಾ ಬಿಕ್ಕಟ್ಟು: ಹಿಂಸಾಚಾರಕ್ಕೆ ಉಗ್ರಗಾಮಿಗಳ ಗುಂಪೇ ಕಾರಣ ಎಂದ ಅಧ್ಯಕ್ಷರ ಕಚೇರಿಶ್ರೀಲಂಕಾ ಬಿಕ್ಕಟ್ಟು: ಹಿಂಸಾಚಾರಕ್ಕೆ ಉಗ್ರಗಾಮಿಗಳ ಗುಂಪೇ ಕಾರಣ ಎಂದ ಅಧ್ಯಕ್ಷರ ಕಚೇರಿ

Recommended Video

ತಾವು ಗೆದ್ರೂ ಪಂಜಾಬ್ ಟೀಂನ್ನು ಹಾಡಿಹೊಗಳಿದ ಶ್ರೇಯಸ್ | Oneindia Kannada

ಯೇಸುಕ್ರಿಸ್ತನ ಪ್ರಾರ್ಥನೆಯನ್ನು ರಾಮಮಂದಿರದಲ್ಲಿ ನಡೆಸಲಾಯಿತು ಮತ್ತು ಅದನ್ನು ವಿರೋಧಿಸಿದ್ದಕ್ಕಾಗಿ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಹರಿಬಿಟ್ಟಿದ್ದಾರೆ. ಮಾತ್ರವಲ್ಲದೆ ಗಂಗಾವರಂನ ದೇವಸ್ಥಾನವನ್ನು ಅರ್ಚಕರೊಬ್ಬರು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ವಿಷ್ಣು ವರ್ಧನ್ ರೆಡ್ಡಿ ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಪೊಲೀಸರು ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ಶ್ರೀನಿವಾಸ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂತಹ ಆರೋಪಗಳಿಗೆ ಬಲಿಯಾಗಬಾರದು ಎಂದು ಪೊಲೀಸರು ನಿವಾಸಿಗಳನ್ನು ಒತ್ತಾಯಿಸಿದರು.

English summary
Video of Christian prayer sparked controversy inside temple in Andhra Pradesh. A video of a group of Christian missionaries praying at a temple in the Gangavaram village has gone viral after it went viral. But the Andhra Pradesh police on Friday clarified this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X