• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಮೃತಿ ಇರಾನಿ ನಾಮಪತ್ರ ತಿರಸ್ಕರಿಸಿ: ಆಯೋಗಕ್ಕೆ ಕಾಂಗ್ರೆಸ್ ದೂರು

|

ಅಮೇಥಿ, ಏಪ್ರಿಲ್ 12: ತಮ್ಮ ಶಿಕ್ಷಣದ ಬಗ್ಗೆ ಭಿನ್ನ ಮಾಹಿತಿಗಳನ್ನು ನೀಡಿರುವ ಬಿಜೆಪಿ ಸಚಿವೆ ಸ್ಮೃತಿ ಇರಾನಿ ಅವರ ನಾಮಪತ್ರವನ್ನು ತಿರಸ್ಕರಿಸಿ ಎಂದು ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾಗ ತಮ್ಮದು ಪದವಿ ಆಗಿದೆಯೆಂದು ಸ್ಮೃತಿ ಇರಾನಿ ಅವರು ನಾಮಪತ್ರದಲ್ಲಿ ನಮೂದಿಸಿದ್ದರು, ಆದರೆ ಈ ಬಾರಿ ಸಲ್ಲಿಸಿರುವ ನಾಮಪತ್ರದಲ್ಲಿ ದ್ವಿತೀಯ ಪಿಯುಸಿ ಮಾತ್ರವೇ ಪೂರ್ತಿ ಆಗಿದೆ ಎಂದು ನಮೂದಿಸಿದ್ದಾರೆ.

ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಇದು ಗಂಭೀರ ವಿಷಯವಾಗಿದ್ದು, ಇದೊಂದು ಭ್ರಷ್ಟ ಅಭ್ಯಾಸ. ಸ್ಮೃತಿ ಅವರು ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅವರಿಗೆ ಎದುರಾಳಿಯಾಗಿ ಅಮೇಥಿಯಿಂದ ಚುನಾವಣಾ ಕಣಕ್ಕೆ ಇಳಿದಿದ್ದು, ನಿನ್ನೆಯಷ್ಟೆ ನಾಮಪತ್ರ ಸಲ್ಲಿಸಿದ್ದಾರೆ.

ಅವಮಾನಿಸಿದಷ್ಟೂ ಕಾಂಗ್ರೆಸ್ ವಿರುದ್ಧ ಹೆಚ್ಚು ಕೆಲಸ ಮಾಡುತ್ತೇನೆ: ಸ್ಮೃತಿ ಇರಾನಿ

2014 ರಿಂದ ಅಮೇಥಿಯಿಂದಲೇ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಅವರು, ತಾವು ಬಿ.ಕಾಂ ಪದವಿ ಮುಗಿಸಿರುವುದಾಗಿ ನಾಮಪತ್ರದಲ್ಲಿ ನಮೂದಿಸಿದ್ದರು, 2016 ರಲ್ಲಿ ದೆಹಲಿಯಲ್ಲಿ ಕಪಿಲ್ ಸಿಬಲ್ ವಿರುದ್ಧ ಚುನಾವಣೆಗೆ ನಿಂತಿದ್ದಾಗ ತಮ್ಮದು ಬಿಎ ಆಗಿದೆಯೆಂದು ನಮೂದಿಸಿದ್ದರು, ಈಗ ಮತ್ತೆ ತಮ್ಮ ಶೈಕ್ಷಣಿಕ ವಿದ್ಯಾರ್ಹತೆಯನ್ನು ಬದಲಾಯಿಸಿರುವ ಸ್ಮೃತಿ ಅವರು ತಮ್ಮದು ಪದವಿ ಆಗಿಲ್ಲವೆಂದು ಹೇಳಿದ್ದಾರೆ.

ಕ್ಯೂಂಕಿ ಮಂತ್ರಿ ಭಿ ಕಭಿ ಗ್ರಾಜ್ಯುವೇಟ್ ಥಿ : ಸ್ಮೃತಿ ವಿದ್ಯಾರ್ಹತೆ ವಿಡಂಬನೆ

ಸ್ಮೃತಿ ಇರಾನಿ ಅವರ ಪದವಿ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸ್ಮೃತಿ ಇರಾನಿ ಅವರನ್ನು ಟ್ವಿಟ್ಟರ್‌ನಲ್ಲಿ ಟ್ರಾಲ್ ಮಾಡಲಾಗುತ್ತಿದೆ.

English summary
Congress wrote letter to EC and request to cancel nomination of Smriti Irani. congress said 'union minister had a habit of giving false information to Election commission so cancel her nomination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X