ಉತ್ತರ ಪ್ರದೇಶದಲ್ಲಿ ಪ್ರಚಾರ ನಿರ್ಬಂಧಕ್ಕೂ ಮೊದಲೇ 250 ಕ್ಷೇತ್ರ ಸುತ್ತಿರುವ ಬಿಜೆಪಿ

ಲಕ್ನೋ, ಜನವರಿ 10: ಪಂಚರಾಜ್ಯಗಳಲ್ಲಿ ಚುನಾವಣಾ ಪ್ರಚಾರ, ರೋಡ್ ಶೋ, ರ್‍ಯಾಲಿಗಳಿಗೆ ನಿರ್ಬಂಧ ವಿಧಿಸುವುದಕ್ಕೂ ಮೊದಲೇ ಭಾರತೀಯ ಜನತಾ ಪಕ್ಷವು ಉತ್ತರ ಪ್ರದೇಶದ 250 ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿದೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ನಡುವೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟಿಸಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ ಮತ್ತು ಮಾರ್ಚ್ ವೇಳೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈ ಮಧ್ಯೆ ಕೊರೊನಾವೈರಸ್ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜನವರಿ 15ರವರೆಗೆ ರೋಡ್ ಶೋ, ಚುನಾವಣಾ ರ್‍ಯಾಲಿಗಳಿಗೆ ಆಯೋಗ ನಿರ್ಬಂಧ ವಿಧಿಸಿದೆ.

ಕೇಂದ್ರ ಚುನಾವಣಾ ಆಯೋಗವು ಸಾರ್ವಜನಿಕ ಪ್ರಚಾರ ಮತ್ತು ಮೆರವಣಿಗೆಗಳಿಗೆ ನಿರ್ಬಂಧ ವಿಧಿಸುವುದಕ್ಕೂ ಮೊದಲೇ ರಾಜ್ಯದ ಅರ್ಧಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಪ್ರಚಾರ ಕಾರ್ಯವನ್ನು ಮುಗಿಸಿದೆ ಎಂಬು ಪಕ್ಷದ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕ ಎನಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಳೆದ ಕೆಲವೇ ತಿಂಗಳಿನಲ್ಲಿ 250ಕ್ಕೂ ಹೆಚ್ಚು ಕ್ಷೇತ್ರಗಳಿಗೆ ತೆರಳಿ ಪ್ರಚಾರ ನಡೆಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಹೊರತಾಗಿ ಡಿಸೆಂಬರ್ 19ರಂದು ಆರಂಭಿಸಲಾದ ಜನವಿಶ್ವಾಸ್ ಯಾತ್ರಾ ಕಳೆದ ವಾರವಷ್ಟೇ ಮುಕ್ತಾಯವಾಯಿತು. ರಾಜ್ಯದ ಆರು ದಿಕ್ಕುಗಳಲ್ಲಿ ನಡೆದ ಯಾತ್ರೆಯಲ್ಲಿ ಸಾರ್ವಜನಿಕ ಸಭೆ, ಸಮಾರಂಭ ಮತ್ತು ಪ್ರಚಾರ ಮೆರವಣಿಗೆಗಳಲ್ಲಿ ಬಿಜೆಪಿಯ 399 ಹಿರಿಯ ನಾಯಕರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಸೋತ 78 ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣು

ರಾಜ್ಯದಲ್ಲಿ ಸೋತ 78 ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣು

ಕಳೆದ 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಸೋತ 78 ಕ್ಷೇತ್ರಗಳ ಮೇಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಚ್ಚು ಕಣ್ಣಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಯೋಜನೆ ಮತ್ತು ಕಾಮಗಾರಿಗಳಿಗೆ ಶಂಕುಸ್ಥಾಪನೆಗಳನ್ನು ನೆರವೇರಿಸಲಾಗಿದೆ. ರಾಜ್ಯದಲ್ಲಿ ವಿವಿಧ ಜಾತಿ ಮತ್ತು ಸಮುದಾಯಗಳನ್ನು ಸೆಳೆಯುವ ಉದ್ದೇಶದಿಂದ ಹಲವು ಕಡೆಗಳಲ್ಲಿ ಬಿಜೆಪಿಯು ಸಾಮಾಜಿಕ ಪ್ರತಿನಿಧಿ ಸಮ್ಮೇಳನಗಳನ್ನು ನಡೆಸಿದೆ.

ಈಗಾಗಲೇ ರಾಜ್ಯದ 12 ಜಿಲ್ಲೆಗಳಿಗೆ ಭೇಟಿ ನೀಡಿದ ಮೋದಿ

ಈಗಾಗಲೇ ರಾಜ್ಯದ 12 ಜಿಲ್ಲೆಗಳಿಗೆ ಭೇಟಿ ನೀಡಿದ ಮೋದಿ

ಬಿಜೆಪಿ ಪಾಲಿನ ಸ್ಟಾರ್ ಪ್ರಚಾರಕರು ಎನಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಈಗಾಗಲೇ ಉತ್ತರ ಪ್ರದೇಶದ 12ಕ್ಕೂ ಹೆಚ್ಚು ಜಿಲ್ಲೆಗಳಿಗೆ ಭೇಟಿ ನೀಡಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಕಳೆದ ಎರಡು ತಿಂಗಳಿನಲ್ಲಿ ಎರಡು ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ, ಸಾರ್ವಜನಿಕ ಸಭೆ ಸಮಾರಂಭಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅಕ್ಟೋಬರ್ 20ರಂದು ಕುಷಿನಗರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದರು. ತದನಂತರದಲ್ಲಿ ಸುಲ್ತಾನ್ ಪುರ, ಪ್ರಯಾಗ್ ರಾಜ್, ವಾರಣಸಿ, ಗೋರಖ್ ಪುರ್, ಮಹೋಬಾ, ಛಾನ್ಸಿ, ಬಲರಾಮ್ ಪುರ್, ಶಹಜಹಾನ್‌ಪುರ, ನೋಯ್ಡಾ, ಕಾನ್ಪುರ್ ಮತ್ತು ಲಕ್ನೋದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾರ್ವಜನಿಕ ಸಭೆ ನಡೆಸಿದರು.

ಜನವರಿ 2ರಂದು ಮೀರತ್‌ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯದ ಅಡಿಪಾಯವನ್ನು ಹಾಕಲಾಗಿತ್ತು. ಜನವರಿ 9ರಂದು ಲಕ್ನೋದ ರಮಾಬಾಯಿ ಅಂಬೇಡ್ಕರ್ ಮೈದಾನದಲ್ಲಿ ಬಿಜೆಪಿ ತನ್ನ ಜನ ವಿಶ್ವಾಸ ಯಾತ್ರೆಯ ಮುಕ್ತಾಯವನ್ನು ಗುರುತಿಸಲು ಬೃಹತ್ ಜನ ವಿಶ್ವಾಸ ರ್‍ಯಾಲಿಯನ್ನು ಯೋಜಿಸಿದ್ದು, ಪ್ರಧಾನಿ ಮೋದಿ ಉದ್ದೇಶಿಸಿ ಮಾತನಾಡಿದ್ದರು.

ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಚಾರ

ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಚಾರ

ಕೇಂದ್ರ ಚುನಾವಣಾ ಆಯೋಗವು ಜನವರಿ 15ರವರೆಗೂ ಚುನಾವಣಾ ಪ್ರಚಾರ, ರೋಡ್ ಶೋ, ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿರ್ಬಂಧ ವಿಧಿಸಿದೆ. ಆದರೆ ಅಷ್ಟರೊಳಗೆ ಉತ್ತರ ಪ್ರದೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಬಹುತೇಕ ಕಡೆಗಳಲ್ಲಿ ಪ್ರಚಾರಗಳನ್ನು ನಡೆಸಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಸಾರ್ವಜನಿಕ ಸಭೆಗಳು ಮತ್ತು ಬೂತ್ ಅಧ್ಯಕ್ಷ ಸಮ್ಮೇಳನಗಳನ್ನು ಮುಗಿಸಿದ್ದಾರೆ.

ಬಿಜೆಪಿಯಿಂದ ವರ್ಚುವಲ್ ಸಭೆಗಳಿಗೂ ಸಿದ್ಧತೆ

ಬಿಜೆಪಿಯಿಂದ ವರ್ಚುವಲ್ ಸಭೆಗಳಿಗೂ ಸಿದ್ಧತೆ

ಕೊವಿಡ್ ಪ್ರಕರಣಗಳಿಂದಾಗಿ ದೈಹಿಕ ರ್‍ಯಾಲಿಗಳಿಗೆ ಇಂತಹ ನಿರ್ಬಂಧಗಳನ್ನು ನಿರೀಕ್ಷಿಸಿದ ಹಿನ್ನೆಲೆ ಬಿಜೆಪಿ ಈಗಾಗಲೇ ವರ್ಚುವಲ್ ರ್ಯಾಲಿಗಳಿಗೆ ಸಿದ್ಧತೆಗಳನ್ನು ಮಾಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. "ಬಿಜೆಪಿ ಒಂದು ನಿರ್ದಿಷ್ಟ ಸಮಯದಲ್ಲಿ ಗರಿಷ್ಠ 50,000 ಜನರೊಂದಿಗೆ ವರ್ಚುವಲ್ ರ್‍ಯಾಲಿಗಳನ್ನು ನಡೆಸಲು ತನ್ನದೇ ಆದ ನೆಟ್‌ವರ್ಕ್ ವ್ಯವಸ್ಥೆ ಅಭಿವೃದ್ಧಿಪಡಿಸಿದೆ. ದೆಹಲಿ, ಲಕ್ನೋ ಮತ್ತು ಇತರ ಸ್ಥಳಗಳಿಂದ ಈ ರ್ಯಾಲಿಗಳನ್ನು ಉದ್ದೇಶಿಸಿ ಪಕ್ಷದ ಹಿರಿಯ ನಾಯಕರು ಮಾತನಾಡಲಿದ್ದಾರೆ. ದೈತ್ಯ ಪರದೆಯ ವ್ಯಾನ್‌ಗಳ ಮೂಲಕ ರ್‍ಯಾಲಿಗಳ ನೇರ ಪ್ರಸಾರ ಮಾಡಲಾಗುತ್ತದೆ. ಪ್ರತಿ ಅಸೆಂಬ್ಲಿ ಕ್ಷೇತ್ರದ ಮೂಲಕ ಕನಿಷ್ಠ ಒಂದು ವ್ಯಾನ್ ಚಲಿಸುತ್ತದೆ. ಬಿಜೆಪಿಯು ತನ್ನ ಸದಸ್ಯರ ಡೇಟಾ ಬೇಸ್ ಅನ್ನು ಹೊಂದಿದೆ, ಅದು ವರ್ಚುವಲ್ ರ್ಯಾಲಿಗಳ ಸಮಯದಲ್ಲಿ ಜನರನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ," ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ರಾಜ್ಯದ ಹಲವು ಕಡೆಗಳಲ್ಲಿ ಪ್ರಚಾರ ಸಭೆ ಮುಗಿಸಿದ ಅಖಿಲೇಶ್

ರಾಜ್ಯದ ಹಲವು ಕಡೆಗಳಲ್ಲಿ ಪ್ರಚಾರ ಸಭೆ ಮುಗಿಸಿದ ಅಖಿಲೇಶ್

ಉತ್ತರ ಪ್ರದೇಶದಲ್ಲಿ ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿಯ ಅಧ್ಯಕ್ಷ ಅಖಿಲೇಶ್ ಯಾದವ್, ವಿವಿಧ ಜಿಲ್ಲೆಗಳಲ್ಲಿ ತಮ್ಮ ಪಕ್ಷದ ವಿಜಯ ಯಾತ್ರೆಯ ಮೇಲೆ ಕೇಂದ್ರೀಕೃತವಾಗಿದ್ದಾರೆ. ಎಸ್‌ಪಿಯ ಮಿತ್ರಪಕ್ಷಗಳು ಮತ್ತು ವಿವಿಧ ಜಾತಿ ಗುಂಪುಗಳ ಮುಖಂಡರು ಕಳೆದ ಮೂರು ತಿಂಗಳಿನಿಂದ ವಿವಿಧ ಜಿಲ್ಲೆಗಳಲ್ಲಿ ಏಳು ವಿಭಿನ್ನ ಯಾತ್ರೆಗಳನ್ನು ಕೈಗೊಂಡಿದ್ದು ಸಭೆಗಳನ್ನು ನಡೆಸಿದ್ದಾರೆ. ಅಕ್ಟೋಬರ್ 12 ರಂದು ಕಾನ್ಪುರದಿಂದ ಪ್ರಾರಂಭವಾದ ಅಖಿಲೇಶ್ ಯಾದವ್ ನೇತೃತ್ವದಲ್ಲಿ ನಡೆದ ಎಸ್‌ಪಿಯ ವಿಜಯ್ ಯಾತ್ರೆಯು ಪ್ರಮುಖ ಜನಸಮೂಹವನ್ನು ಸೆಳೆಯಿತು. ಪೂರ್ವ ಯುಪಿ, ಬುಂದೇಲ್ಖಂಡ್ ಮತ್ತು ಪಶ್ಚಿಮ ಯುಪಿಯ ಎರಡು ಡಜನ್ ಜಿಲ್ಲೆಗಳ ಮೂಲಕ ಹಾದುಹೋಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+