ಪ್ರಜಾಪ್ರಭುತ್ವದ ಕರಾಳ ಅಧ್ಯಾಯ: ಮೈತ್ರಿ ಪತನಕ್ಕೆ ಮಾಯಾವತಿ ಪ್ರತಿಕ್ರಿಯೆ

ಲಖನೌ, ಜುಲೈ 24: ಕರ್ನಾಟಕ ರಾಜ್ಯದ ನಿನ್ನೆಯ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು, 'ಕಪ್ಪು ಅಧ್ಯಾಯ' ಎಂದಿದ್ದಾರೆ.

ಮೈತ್ರಿ ಸರ್ಕಾರವನ್ನು ಹಣದ ಬಲದಿಂದ ಪತನಗೊಳಿಸಿದ ಘಟನೆ ಇತಿಹಾಸದಲ್ಲಿ ಕಪ್ಪು ಅಧ್ಯಾಯವಾಗಿ ಸೇರ್ಪಡೆ ಆಗಲಿದೆ ಎಂಬರ್ಥದಲ್ಲಿ ಮಾಯಾವತಿ ಅವರು ಹೇಳಿದ್ದಾರೆ.

ಬಿಜೆಪಿಯು ಸಂವಿಧಾನದ ಎಲ್ಲ ನಿಯಮಗಳನ್ನು ಬದಿಗೆ ಸರಿಸಿ, ಹಣ ಮತ್ತು ಅಧಿಕಾರವನ್ನು ಬಳಸಿ ಮೈತ್ರಿ ಸರ್ಕಾರವನ್ನು ಕೆಳಗೆ ಉರುಳಿಸಿದೆ, ಇದು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಕಪ್ಪು ಅಧ್ಯಾಯವಾಗಿ ಉಳಿದುಕೊಳ್ಳಲಿದೆ ಎಂದು ಅವರು ಹೇಳಿದರು.

BJP pulled down coalition government by money and power: Mayawathi

ಬಿಜೆಪಿಯ ಈ ವರ್ತನೆಯನ್ನು ಎಷ್ಟು ಖಂಡಿಸಿದರೂ ಸಾಲದು ಎಂದು ಮಾಯಾವತಿ ಅವರು ಹೇಳಿದ್ದಾರೆ.

ಬಿಎಎಸ್‌ಪಿ ಪಕ್ಷದಿಂದ ಆಯ್ಕೆ ಆಗಿದ್ದ ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಅವರು ಸರ್ಕಾರದ ಪರ ಮತ ಚಲಾಯಿಸಲಿಲ್ಲವೆಂದು ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ. ಮಾಯಾವತಿ ಅವರು ಆದೇಶ ನೀಡಿದ್ದರೂ ಸಹ ಮಹೇಶ್ ಅವರು ಕಲಾಪಕ್ಕೆ ಬರದೇ ಹೊರಗೆ ಉಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+