• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಚಪ್ಪಲಿ ಹಿಡಿದು ಹೊಡೆದಾಡಿಕೊಂಡಿ ಬಿಜೆಪಿ ಶಾಸಕ, ಸಂಸದ

|
   ಚಪ್ಪಲಿ ಹಿಡಿದು ಹೊಡೆದಾಡಿಕೊಂಡ ಬಿಜೆಪಿ ಶಾಸಕ, ಸಂಸದ..! | Oneindia Kannada

   ಲಖನೌ, ಮಾರ್ಚ್‌ 06: ಬಿಜೆಪಿಯ ಶಾಸಕ ಹಾಗೂ ಸಂಸದರು ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡು ಜಗಳವಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

   ಉತ್ತರ ಪ್ರದೇಶದ ಸಂತ ಕಬೀರ ನಗರದಲ್ಲಿ ಬಿಜೆಪಿಯ ಸಂಸದ ಶರದ್ ತ್ರಿಪಾಠಿ ಹಾಗೂ ಅದೇ ಪಕ್ಷದ ಶಾಸಕ ರಾಕೇಶ್ ಸಿಂಗ್ ಬಗೇಲ್ ಅವರು ಸಭೆ ಒಂದರಲ್ಲಿ ಭಾಗವಹಿಸಿದ್ದರು. ಸಭೆ ನಡೆಯುವ ವೇಳೆ ಇಬ್ಬರ ನಡುವೆ ಮಾತಿನಚಕಮಕಿ ಉಂಟಾಗಿ ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ.

   ಹತ್ತು ವರ್ಷದ ಫಾಸಲೆಯಲ್ಲಿ ನಾಲ್ಕು ಸಲ ಮನ ಬದಲಿಸಿದ ಉ.ಪ್ರ. ಮತದಾರರು!

   ಇಬ್ಬರು ಜನಪ್ರತಿನಿಧಿಗಳು ತುಂಬಿದ ಸಭೆಯಲ್ಲಿ ಅಧಿಕಾರಿಗಳು, ಮಾಧ್ಯಮದವರ ಎದುರೇ ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದು, ಇಬ್ಬರ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

   ತಮ್ಮ ಉಳಿತಾಯದ ಹಣದಿಂದ ಪೌರ ಕಾರ್ಮಿಕರ ನಿಧಿಗೆ 21 ಲಕ್ಷ ನೀಡಿದ ಮೋದಿ

   ಶಿಲಾನ್ಯಾಸಕ್ಕೆ ಹೆಸರು ಹಾಕಿಸುವ ವಿಚಾರದಲ್ಲಿ ಅವರಿಬ್ಬರ ನಡುವೆ ಮೊದಲಿಗೆ ವಾಗ್ವಾದ ಪ್ರಾರಂಭವಾಗಿದೆ. ಯಾರ ಹೆಸರು ಮೊದಲಿರಬೇಕು ಯಾರ ಹೆಸರು ನಂತರ ಇರಬೇಕು ಎಂದು ಅವರಿಬ್ಬರು ಜಗಳವಾಡಿದ್ದಾರೆ, ನಂತರ ಅದು ವಿಕೋಪಕ್ಕೆ ತಿರುಗಿದೆ.

   ಕಾಂಗ್ರೆಸ್ ಸೇರಿದ ಬಿಜೆಪಿ ರೆಬೆಲ್ ಸಂಸದೆ ಸಾವಿತ್ರಿಬಾಯಿ ಫುಲೆ

   ಇಬ್ಬರೂ ನಾಯಕರು ತಾವು ಧರಿಸಿದ ಚಪ್ಪಲಿಯನ್ನು ಕಳಚಿ ಪರಸ್ಪರರಿಗೆ ಹೊಡೆದಿದ್ದಾರೆ. ಜಗಳ ಬಿಡಿಸಲು ಅಲ್ಲಿದ್ದ ಪೊಲೀಸರು ಮತ್ತು ಅಧಿಕಾರಿಗಳು ಯತ್ನಿಸಿದ್ದಾರೆ ಆದರೆ ಇಬ್ಬರ ನಡುವಿನ ಜಗಳ ಬೇಗನೇ ಮುಗಿದಿಲ್ಲ.

   English summary
   Uttar Pradesh BJP MP Sharad Tripathi and BJP MLA Rakesh Singh exchange blow after an argument broke out over placement of names on a foundation stone of a project.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X