ಮುಸ್ಲಿಂ ಮಾರಾಟಗಾರರಿಂದ ತರಕಾರಿ ಖರೀದಿಸಬೇಡಿ ಎಂದ ಬಿಜೆಪಿ ಶಾಸಕ

ಲಕ್ನೋ, ಏಪ್ರಿಲ್ 28: ಮುಸ್ಲಿಂ ಮಾರಾಟಗಾರರಿಂದ ತರಕಾರಿ ಕೊಳ್ಳಬೇಡಿ ಎಂದು ಉತ್ತರ ಪ್ರದೇಶ ಬಿಜೆಪಿ ಶಾಸಕ ಸುರೇಶ್ ತಿವಾರಿ ಹೇಳಿದ್ದಾರೆ.

ಬರ್ಹಾಜ್ ಜಿಲ್ಲೆಯ ಕಾರ್ಯಕ್ರಮವೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ತಿವಾರಿ ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಯಾವುದೇ ಕಾರಣಕ್ಕೂ ಮುಸ್ಲಿಂ ಮಾರಾಟಗಾರರಿಂದ ತರಕಾರಿಯನ್ನು ಕೊಳ್ಳಲೇಬೇಡಿ ಇದನ್ನು ಸಾರ್ವಜನಿಕವಾಗಿಯೇ ಹೇಳುತ್ತಿದ್ದೇನೆ. ಎಂದು ಬಹ್ರಾಜ್ ನಗರ ಪಾಲಿಕೆಯ ಸಭೆಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಹೇಳಿದರು.

BJP MLA Says No One Should Buy Vegetables From Muslims

ಮುಸ್ಲಿಂ ಮಾರಾಟಗಾರರು ತರಕಾರಿಗಳ ಮೇಲೆ ಎಂಜಲು ತುಪ್ಪುತ್ತಿದ್ದಾರೆ ಎನ್ನುವ ಕುರಿತು ಸುದ್ದಿ ಹರಿದಾಡಿರುವ ಕುರಿತಾಗಿ ಪ್ರಸ್ತಾಪಿಸಿದರು.ಪರಿಸ್ಥಿತಿ ಒಂದು ಹಂತಕ್ಕೆ ಬರುವವರೆಗೂ ಮುಸ್ಲಿಮರ ಬಳಿ ತರಕಾರಿ ಖರೀದಿಸಬೇಡಿ ಎಂದರು.

ನಿಮಗೆಲ್ಲಾ ತಿಳಿದೇ ಇದೆ ಇಡೀ ದೇಶದಲ್ಲಿ ಕೊರೊನಾ ಹರಡಿಸಿದ್ದು ಜಮಾತ್‌ಗೆ ಹೋಗಿ ಬಂದಿರುವ ಮುಸ್ಲಿಮರು ಎಂದು ಹೇಳಿದರು. ಆದರೆ ಕಳೆದ ವಾರವಷ್ಟೇ ಕೇಂದ್ರ ಸರ್ಕಾರವು ಮಾಹಿತಿ ನೀಡಿದ್ದು, ತರಕಾರಿ ಮೇಲೆ ಉಗುಳುತ್ತಿದ್ದಾರೆ ಎನ್ನುವುದು ಸುಳ್ಳು ಸುದ್ದಿ, ಯಾವುದೇ ಆತಂಕವಿಲ್ಲದೆ ತರಕಾರಿ ಕೊಳ್ಳಿ ಎಂದು ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+