ಆಗ್ರಾ ಸೇರಿದಂತೆ ಉತ್ತರಪ್ರದೇಶ ನಗರಗಳ ಹೆಸರು ಬದಲಾಯಿಸಿ

ಲಕ್ನೋ, ನವೆಂಬರ್ 11: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಅವರು ಫೈಜಾಬಾದ್ ಹಾಗೂ ಅಲಹಾಬಾದ್ ಹೆಸರನ್ನು ಬದಲಾಯಿಸಿದ ಬೆನ್ನಲ್ಲೇ ಇನ್ನಷ್ಟು ಹೊಸ ನಾಮಕರಣಕ್ಕೆ ಬೇಡಿಕೆ ಬಂದಿದೆ.

ಇತಿಹಾಸ ಪ್ರಸಿದ್ಧ ಆಗ್ರಾ ನಗರದ ಹೆಸರನ್ನು ಬದಲಿಸುವಂತೆ ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ಅವರು ಮನವಿ ಮಾಡಿದ್ದಾರೆ.

ಆಗ್ರಾ ಉತ್ತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಜಗನ್ ಪ್ರಸಾದ್​ ಗರ್ಗ್ ಅವರು ಆಗ್ರಾ ಹೆಸರಿಗೆ ಯಾವುದೇ ಅರ್ಥವಿಲ್ಲ. ಈ ಪ್ರದೇಶದಲ್ಲಿ ಹೆಚ್ಚಾಗಿ ವನ್​ (ಅರಣ್ಯ) ಇದೆ ಮತ್ತು ಇಲ್ಲಿ ಅಗರ್ವಾಲ್​ಗಳು (ಮಹಾರಾಜ ಅಗ್ರಸೇನಾ ಅವರ ಬೆಂಬಲಿಗರು) ಇದ್ದಾರೆ. ಹಾಗಾಗಿ ಆಗ್ರಾ ನಗರದ ಹೆಸರನ್ನು 'ಅಗ್ರವನ್​' ಅಥವಾ ಅಗ್ರವಾಲ್ ಎಂದು ಬದಲಿಸುವಂತೆ ಮನವಿ ಮಾಡಿದ್ದಾರೆ.

BJP Leaders Want To Rename Agra to Agrawal

ಮಹಾಭಾರತ ಕಾಲದಲ್ಲಿ ಈ ಪ್ರದೇಶವನ್ನು ಅಗ್ರವನ ಎಂದು ಉಲ್ಲೇಖಿಸಲಾಗಿದೆ. ಈ ಹೆಸರು ಅಕ್ಬರಾಬಾದ್ ಎಂದು ಬದಲಾಯಿತು ನನಂತರ ಆಗ್ರಾ ಎಂದು ಬದಲಿಸಲಾಗಿದೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಕೂಡಲೇ ಆಗ್ರಾ ನಗರದ ಹೆಸರನ್ನು ಬದಲಿಸುವಂತೆ ಮನವಿ ಮಾಡುತ್ತೇನೆ ಎಂದು ಶಾಸಕ ಗರ್ಗ್ ಹೇಳಿದ್ದಾರೆ.

ಯೋಗಿ ಆದಿತ್ಯನಾಥ್​ಅವರು ಇತ್ತೀಚೆಗೆ, ಫೈಜಾಬಾದ್​ ನಗರದ ಹೆಸರನ್ನು ಅಯೋಧ್ಯಾ ಎಂದು ಹಾಗೂ ಅಲಹಾಬಾದ್​ ನಗರದ ಹೆಸರನ್ನು ಪ್ರಯಾಗ್​ರಾಜ್​ ಎಂದು ಬದಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಜೆಪಿ‌ ಆಡಳಿತದಲ್ಲಿರುವ ಮಹಾರಾಷ್ಟ್ರದ ಎರಡು‌ ನಗರಗಳ ಹೆಸರನ್ನು ಬದಲಿಸುವಂತೆ, ಶಿವಸೇನೆ ಆಗ್ರಹಿಸುತ್ತಿದೆ. ಬಿಜೆಪಿ‌ ಆಡಳಿತದಲ್ಲಿರುವ ಮಹಾರಾಷ್ಟ್ರದ ಎರಡು‌ ನಗರಗಳ ಹೆಸರನ್ನು ಬದಲಿಸುವಂತೆ, ಶಿವಸೇನೆ ಆಗ್ರಹಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+