ಉತ್ತರಪ್ರದೇಶದಲ್ಲಿ ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ
ಲಕ್ನೋ, ಆ. 11: ಮುಂಜಾನೆ ವಾಕಿಂಗ್ ಮಾಡಲು ತೆರಳಿದ್ದ ಬಿಜೆಪಿ ಮುಖಂಡರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬಾಘ್ ಪತ್ ನಲ್ಲಿ ನಡೆದಿದೆ.
Recommended Video
ಮೃತರನ್ನು ಬಿಜೆಪಿಯ ಮಾಜಿ ಜಿಲ್ಲಾ ಮುಖ್ಯಸ್ಥ ಸಂಜಯ್ ಖೋಖರ್ ಎಂದು ಗುರುತಿಸಲಾಗಿದೆ. ಮಂಗಳವಾರ ಮುಂಜಾನೆ ತಮ್ಮ ಫಾರ್ಮ್ ಹೌಸ್ ನಲ್ಲಿ ಮುಂಜಾನೆ ವಿಹಾರಾರ್ಥವಾಗಿ ತೆರಳಿದ್ದಾಗ ಅಪರಿಚಿತರು ಗುಂಡಿಕ್ಕಿದ್ದಾರೆ.
ಮೂವರು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಜಯ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲು ಸಾಧ್ಯವಾಗಲಿಲ್ಲ. ಹೊಲದ ನಡುವೆ ಬಿದ್ದಿರುವ ಸಂಜಯ್ ಅವರ ಶವವನ್ನು ಸ್ಥಳೀಯ ಗ್ರಾಮಸ್ಥರು ನೋಡಿದ ಮೇಲೆ ಘಟನೆ ಬಗ್ಗೆ ತಿಳಿದು ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ಸಂಜಯ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಂತೆ ಚಪ್ರೋಲಿ ಪ್ರದೇಶದ ಪೊಲೀಸರಿಗೆ ಸಿಎಂ ಯೋಗಿ ಸೂಚಿಸಿದ್ದಾರೆ.












Click it and Unblock the Notifications