• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಲಿತ ಯುವಕನನ್ನು ಮದುವೆಯಾದ ಬಿಜೆಪಿ ಶಾಸಕನ ಪುತ್ರಿ: ಭದ್ರತೆಗೆ ಮನವಿ

|

ಲಖನೌ, ಜುಲೈ 11: ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ನಮ್ಮ ತಂದೆಯಿಂದ ನಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಬಿಜೆಪಿ ಶಾಸಕನ ಮಗಳೊಬ್ಬಳು ಪೊಲೀಸರ ರಕ್ಷಣೆ ಕೋರಿದ್ದಾಳೆ.

ಬರೇಲಿ ಜಿಲ್ಲೆಯ ಬಿಥಾರಿ ಚೈನ್​ಪುರ್​ ಕ್ಷೇತ್ರದ ಬಿಜೆಪಿ ಶಾಸಕನ ಮಗಳಾಗಿರುವ ಸಾಕ್ಷಿ ಮಿಶ್ರಾ (23) ಸಾಮಾಜಿಕ ಜಾಲತಾಣದಲ್ಲಿ ಬುಧವಾರ ವಿಡಿಯೋವೊಂದನ್ನು ಅಪ್​ಲೋಡ್​ ಮಾಡಿ ಕಳೆದ ಗುರುವಾರ ಅಜಿತ್​ ಕುಮಾರ್ ​(29) ಎಂಬ ದಲಿತ ಯುವಕನನ್ನು ಮದುವೆಯಾಗಿರುವುದಾಗಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ದಲಿತ ಯುವಕನ ಬಟ್ಟೆ ಬಿಚ್ಚಿ ಹಲ್ಲೆ, ವಿಡಿಯೋ ಮಾಡಿದ್ದ ಇಬ್ಬರ ಬಂಧನ

ಮತ್ತೊಂದು ವಿಡಿಯೋವನ್ನು ಅಪ್​ಲೋಡ್​ ಮಾಡಿರುವ ಯುವತಿ ಅದರಲ್ಲಿ ನಮ್ಮನ್ನು ಬಂಧಿಸುವುದಾಗಿ ಹಾಗೂ ಕೊಲ್ಲುವುದಾಗಿ ತಂದೆ, ಸಹೋದರ ಹಾಗೂ ಅವರ ಸಹವರ್ತಿಗಳು ಬೆದರಿಕೆ ಹಾಕುತ್ತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ಬರೇಲಿಯ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾಳೆ. ಅಲ್ಲದೆ, ತಮಗೆ ನೆರವಾಗುವಂತೆ ಬರೇಲಿಯ ಸಂಸದರು ಹಾಗೂ ಶಾಸಕರಲ್ಲಿ ಸಾಕ್ಷಿ ಮನವಿ ಮಾಡಿಕೊಂಡಿದ್ದಾಳೆ.

ಈ ಬಗ್ಗೆ ಮಾತನಾಡಿರುವ ಡಿಐಜಿ ಆರ್​.ಕೆ. ಪಾಂಡೆ, ಯುವತಿಯು ರಕ್ಷಣೆ ಕೋರಿರುವ ವಿಡಿಯೋ ನೋಡಿದ್ದೇನೆ. ದಂಪತಿಗೆ ರಕ್ಷಣೆ ನೀಡುವಂತೆ ಎಸ್​ಎಸ್​ಪಿಗೆ ಸೂಚಿಸಿದ್ದೇನೆ. ಆದರೆ, ಯುವತಿ ತಾನಿರುವ ಸ್ಥಳದ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಹಾಗಾಗಿ, ಅವರಿಗೆ ಪೊಲೀಸರು ಹೇಗೆ ರಕ್ಷಣೆ ನೀಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ ಎಂದು ವಿಡಿಯೋ ಮೂಲಕ ತಂದೆಯ ಬಳಿ ಕೇಳಿಕೊಂಡಿರುವ ಯುವತಿ, ಒಂದು ವೇಳೆ ನನಗಾಗಲಿ ಅಥವಾ ನನ್ನ ಗಂಡನಿಗಾಗಲಿ ಏನಾದರೂ ಆದರೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದ್ದಾಳೆ.

ಮಗಳ ವಿಡಿಯೋ ಮತ್ತು ಮದುವೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಜಿ ಶಾಸಕ ರಾಜೇಶ್ ಮಿಶ್ರಾ, ನನ್ನ ಮಗಳು ಅಪ್ರಾಪ್ತಳಲ್ಲ, ಆಕೆಗೆ ಸರಿ ಎನಿಸಿರುವ ನಿರ್ಧಾರವನ್ನು ಆಕೆ ತೆಗೆದುಕೊಂಡಿದ್ದಾಳೆ. ಆಕೆಗೆ ನಾನಾಗಲಿ, ನನ್ನ ಕುಟುಂಬದವರಾಗಲಿ ಯಾವುದೇ ಬೆದರಿಕೆ ಒಡ್ಡಿಲ್ಲ ಎಂದು ಹೇಳಿದ್ದಾರೆ.

English summary
Bareily MLA Pappu Bhartaul's daughter released a video appealing to her father to stop opposing her love marriage and call back his goons. The daughter had married a man against her families wishes and fears honor killing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X