• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಸ್ಟಾರ್ ಅಲ್ಲ, ರೋಗಿಯಂತೆ ವರ್ತಿಸಬೇಕು': ಕನಿಕಾಗೆ ವೈದ್ಯರು ಕ್ಲಾಸ್

|

ಬಾಲಿವುಡ್ ಗಾಯಕಿ ಕನಿಕಾ ಕಪೂರ್‌ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಲಕ್ನೌ ನಗರದ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

'ಆಸ್ಪತ್ರೆಯಲ್ಲಿ ಗುಣಮುಟ್ಟದ ಆಹಾರ ನೀಡುತ್ತಿಲ್ಲ, ವಿಐಪಿ ಚಿಕಿತ್ಸೆ ಕೊಡಿ' ಎಂದು ಕನಿಕಾ ಕಪೂತ್ ದೂರಿದ್ದಾರೆ ಎನ್ನಲಾಗಿದ್ದು, ಅದಕ್ಕೆ ವೈದ್ಯರು 'ಸ್ಟಾರ್ ರೀತಿ ಅಲ್ಲ, ಸಾಮಾನ್ಯ ರೋಗಿಯಂತೆ ವರ್ತಿಸಬೇಕು' ಎಂದು ಸೂಚಿಸಿದ್ದಾರಂತೆ

ಕನಿಕಾ ಕಪೂರ್ ವಿಚಾರದಲ್ಲಿ ತಪ್ಪು ಆಗಿದ್ದೆಲ್ಲಿ? ಕೊರೊನಾ ಸೋಂಕಿತೆ ಬಚ್ಚಿಟ್ಟ ಸತ್ಯ

ಕನಿಕಾ ಕಪೂರ್‌ಗೆ ನೀಡಲಾಗಿದ್ದ ಆಹಾರ ಗುಣಮಟ್ಟ ಸರಿ ಇರಲಿಲ್ಲ, ಸ್ವಚ್ಚತೆ ಕಾಪಾಡುತ್ತಿಲ್ಲ, ಇದೊಂದು ಜೈಲಿನ ರೀತಿ ಇದೆ, ಇಲ್ಲಿ ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ದೂರಿದ್ದರು ಎನ್ನಲಾಗಿದೆ.

'ಕನಿಕಾ ಕಪೂರ್‌ಗೆ ಉತ್ತಮವಾದ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ಒದಗಿಸಿರುವ ಪ್ರತ್ಯೇಕ ಕೊಠಡಿಯಲ್ಲಿ ಹವಾನಿಯಂತ್ರಣೆ ವ್ಯವಸ್ಥೆಯೂ ಒಳಗೊಂಡಿದೆ. ಗುಣಮಟ್ಟದ ಗ್ಲುಟೇನ್ ಆಹಾರವನ್ನು ನೀಡಲಾಗುತ್ತಿದೆ. ಆದರೂ ಆಸ್ಪತ್ರೆ ಸಿಬ್ಬಂದಿ ಜೊತೆ ಸಹಕರಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಅಂದ್ಹಾಗೆ, ಲಂಡನ್‌ನಿಂದ ಮುಂಬೈಗೆ ಬಂದಿದ್ದ ಕನಿಕಾ ಕಪೂರ್ ಒಂದು ದಿನ ಅಲ್ಲೇ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದರು. ನಂತರ ಲಕ್ನೌನಲ್ಲಿರುವ ನಿವಾಸಕ್ಕೆ ವಾಪಸ್ ಆಗಿದ್ದರು. ಬಳಿಕ, ಲಕ್ನೌನಲ್ಲಿ ನಡೆದ ಬರ್ತಡೇ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅದಾದ ನಂತರ ಕನಿಕಾಗೆ ಕೊರೊನಾ ರೋಗದ ಲಕ್ಷಣಗಳು ಕಾಣಿಸಿಕೊಂಡಿತ್ತು. ತಕ್ಷಣ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಸೇರಿದ್ದರು.

ಕೊರೊನಾ ಸೋಂಕಿತೆ ಕನಿಕಾ ಜೊತೆ ಪಾರ್ಟಿಯಲ್ಲಿದ್ದ ವಸುಂಧರಾ ರಾಜೇ ಸೇಫ್

ಕನಿಕಾ ಭಾಗವಹಿಸಿದ್ದ ಪಾರ್ಟಿಯಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಅವರ ಮಗ ಸಂಸದ ದುಶ್ಯಂತ್, ಉತ್ತರ ಪ್ರದೇಶದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಸೇರಿದಂತೆ ಹಲವು ಇದ್ದರು. ಆದರೆ ಅವರೆಲ್ಲರಿಗೂ ಕೊರೊನಾ ಪರೀಕ್ಷೆಯಲ್ಲಿ ನೆಗಿಟಿವ್ ಬಂದಿದೆ ಎಂದು ತಿಳಿದು ಬಂದಿದೆ.

English summary
Doctors taken class to kanika kapoor, 'Stop throwing tantrums like a star, behave like a patient’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X