• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
LIVE

ಬಾಬ್ರಿ ಮಸೀದಿ ಧ್ವಂಸ ಕೇಸ್ ತೀರ್ಪು ಸಂತಸ ಮೂಡಿಸಿದೆ: ಅಡ್ವಾಣಿ

|

ನವದೆಹಲಿ, ಸೆಪ್ಟೆಂಬರ್ 30: ದೇಶದ ಕಾನೂನು ಇತಿಹಾಸದಲ್ಲಿ ಬಹು ನಿರೀಕ್ಷಿತ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪನ್ನು ವಿಶೇಷ ನ್ಯಾಯಾಲಯ ಇಂದು ಪ್ರಕಟಿಸಲಿದೆ. ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ.ಆಡ್ವಾಣಿ, ಡಾ.ಮುರಳಿ ಮನೋಹರ್‌ ಜೋಷಿ ಮತ್ತು ಉಮಾ ಭಾರತಿ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು, 28 ವರ್ಷಗಳ ಕೇಸ್‌ಗೆ ಇಂದು ಮುಕ್ತಾಯ ಸಿಗಲಿದೆ.

1992ರ ಮಸೀದಿ ಧ್ವಂಸ ಪ್ರಕರಣದ ಎಲ್ಲಾ 32 ಆರೋಪಿಗಳು ತೀರ್ಪಿನ ದಿನ ಖುದ್ದು ಹಾಜರು ಇರುವಂತೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಕೆ.ಯಾದವ್‌ ಸೆಪ್ಟೆಂಬರ್‌ 16ರಂದೇ ನಿರ್ದೇಶನ ನೀಡಿದ್ದರು. ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌, ವಿನಯ್‌ ಕಟಿಯಾರ್‌ ಮತ್ತು ಸಾಧ್ವಿ ರಿತಾಂಬರಾ ಕೂಡ ಆರೋಪಿಗಳ ಪಟ್ಟಿಯಲ್ಲಿದ್ದಾರೆ.

ಅಯೋಧ್ಯಾ ನಗರದ ಬಾಬ್ರಿ ಮಸೀದಿ ಧ್ವಂಸ ವಿವಾದ, ಟೈಮ್ ಲೈನ್ಅಯೋಧ್ಯಾ ನಗರದ ಬಾಬ್ರಿ ಮಸೀದಿ ಧ್ವಂಸ ವಿವಾದ, ಟೈಮ್ ಲೈನ್

ರಾಮ ಮಂದಿರ ನಿರ್ಮಾಣ ಟ್ರಸ್ಟ್‌ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಚಂಪತ್‌ ರಾಯ್‌ ಕೂಡ ಆರೋಪ ಎದುರಿಸುತ್ತಿದ್ದಾರೆ. ಆಡ್ವಾಣಿ, ಜೋಶಿ, ಉಮಾ ಭಾರತಿ ಕೋರ್ಟ್‌ಗೆ ಗೈರಾಗುವ ಸಾಧ್ಯತೆ ಇದೆ.

Babri Masjid Demolition Verdict LIVE Updates in Kannada

Newest First Oldest First
3:02 PM, 30 Sep
ಬಾಬ್ರಿ ಮಸೀದಿ ತೀರ್ಪನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಖಂಡಿಸಿದೆ. ಪ್ರಕರಣದ ತೀರ್ಪಿನ ಕುರಿತು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.
2:55 PM, 30 Sep
ಬಾಬ್ರಿ ಮಸೀದಿ ಧ್ವಂಸದ ಹಿಂದೆ ಯಾವುದೇ ಪಿತೂರಿ ಇರಲಿಲ್ಲ ಎಂಬುದು ನಿರೀಕ್ಷಿತ ತೀರ್ಪು ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ. ಅಟಲ್ ಜೀ, ಮುರಳಿ ಮನೋಹರ್ ಜೋಶಿ ಮತ್ತು ಉಮಾ ಭಾರತಿ ಅವರಿಗೆ ಶುಭಾಷಯ ಕೋರಿದ್ದಾರೆ.
2:52 PM, 30 Sep
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಶಿಕ್ಷಎಯಾಗಬೇಕಾಗಿದ್ದು ನ್ಯಾಯ. ಆದರೆ ಅವರಿಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಮಾನವ ಸಂಪನ್ಮೂಲ ಸಚಿವಾಲಯವು ಬಹುಮಾನವನ್ನು ನೀಡಿದೆ. ಇದಕ್ಕಾಗಿಯೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಅಸಾದುದ್ದೀನ್ ಓವೈಸಿ ದೂಷಿಸಿದ್ದಾರೆ.
2:06 PM, 30 Sep
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಸಾಧುಗಳನ್ನು, ವಿಹೆಚ್ ಪಿ ನಾಯಕರು ಮತ್ತು ಬಿಜೆಪಿ ವಿರುದ್ಧ ಉದ್ದೇಶಪೂರ್ವಕವಾಗಿ ದೂರುಗಳನ್ನು ದಾಖಲಿಸಿರುವುದು ತೀರ್ಪಿನಿಂದ ಸಾಬೀತಾಗಿದೆ. ರಾಜಕಾರಣಕ್ಕಾಗಿ ಕಾಂಗ್ರೆಸ್ ನಡೆಸಿದ ಪಿತೂರಿಗೆ ಕ್ಷಮಾಪಣೆ ಕೇಳಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
1:25 PM, 30 Sep
ಇಂದು ಕೋರ್ಟ್ ನೀಡಿದ ಐತಿಹಾಸಿಕ ತೀರ್ಪು ಅತ್ಯಂತ ಮಹತ್ವಪೂರ್ಣವಾಗಿದ್ದು, ನಮ್ಮಲ್ಲರಿಗೂ ಸಂತಸವನ್ನು ಉಂಟು ಮಾಡಿದೆ: ಬಿಜೆಪಿ ಭೀಷ್ಮ ಎಲ್.ಕೆ. ಅಡ್ವಾಣಿ.
1:24 PM, 30 Sep
ಅಯೋಧ್ಯೆಯಲ್ಲಿ ಈಗಾಗಲೇ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಐತಿಹಾಸಿಕ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದ ಸಿಎಂ ಯಡಿಯೂರಪ್ಪ.
1:23 PM, 30 Sep
ಬಹಳ ಜನರು ತೀರ್ಪಿನ ಬಗ್ಗೆ ಕಾಯುತ್ತಿದ್ದರು. ಎಲ್ ಕೆ ಅಡ್ವಾಣಿಯವರ ಐತಿಹಾಸಿಕ ಭಾಷಣ ಮರೆಯುವುದಕ್ಕೆ ಸಾಧ್ಯವಿಲ್ಲ. ಅವರ ಹೋರಾಟದಿಂದ ಐತಿಹಾಸಿಕ ತೀರ್ಪು ಬಂದಿದೆ: ಸಿಎಂ ಬಿ ಎಸ್ ಯಡಿಯೂರಪ್ಪ.
1:19 PM, 30 Sep
"ಇದು ನ್ಯಾಯಾಲಯದ ಐತಿಹಾಸಿಕ ತೀರ್ಪು ಆಗಿದ್ದು, ಅಯೋಧ್ಯೆಯಲ್ಲಿ ಡಿಸೆಂಬರ್ 6ರಂದು ಘಟನೆ ಹಿಂದೆ ಯಾವುದೇ ಪಿತೂರಿ ನಡೆದಿರಲಿಲ್ಲ ಎಂದು ಸಾಬೀತಾಗಿದೆ. ನಮ್ಮ ಕಾರ್ಯಕ್ರಮ ಮತ್ತು ರ್ಯಾಲಿಗಳು ಯಾವುದೇ ಪಿತೂರಿಯ ಭಾಗವಾಗಿರಲಿಲ್ಲ ಎಂದು ಕೋರ್ಟ್ ಹೇಳಿದೆ. ಕೋರ್ಟಿನ ತೀರ್ಪಿನಿಂದ ಸಂತೋಷವಾಗಿದ್ದು, ನಾವೀಗ ರಾಮ್ ಮಂದಿರ ನಿರ್ಮಾಣದ ಬಗ್ಗೆ ಉತ್ಸುಕರಾಗಬೇಕು ಎಂದು ಮುರಳಿ ಮನೋಹರ್ ಜೋಶಿ ಹೇಳಿದ್ದಾರೆ.
1:07 PM, 30 Sep
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋ ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಿದ್ದಾರೆ.
12:52 PM, 30 Sep
ಬಾಬ್ರಿ ಮಸೀದಿ ಪ್ರಕರಣದಲ್ಲಿ 32 ಆರೋಪಿಗಳು ನಿರ್ದೋಷಿ ಎಂಬ ತೀರ್ಪಿನ ಬೆನ್ನಲ್ಲೇ ಬಿಜೆಪಿಯ ಹಿರಿಯ ಮುಖಂಡ ಲಾಲ್ ಕೃಷ್ಮ ಅಡ್ವಾಣಿ ನಿವಾಸಕ್ಕೆ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಭೇಟಿ ನೀಡಿದ್ದಾರೆ.
12:36 PM, 30 Sep
ಬಾಬ್ರಿ ಮಸೀದಿ ಒಡೆಯಲು ಮುಂದಾದವರನ್ನು ತಡೆಯುವುದಕ್ಕೆ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಯತ್ನಿಸಿದ್ದರು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
12:28 PM, 30 Sep
ಎಲ್‌.ಕೆ.ಆಡ್ವಾಣಿ, ಡಾ.ಮುರಳಿ ಮನೋಹರ್‌ ಜೋಶಿ ಮತ್ತು ಉಮಾ ಭಾರತಿ ಸೇರಿದಂತೆ ಎಲ್ಲಾ 32 ಆರೋಪಿಗಳು ನಿರ್ದೋಷಿ
12:28 PM, 30 Sep
28 ವರ್ಷಗಳ ನಂತರ ಬಿಜೆಪಿಯ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ನಿರಾಳರಾಗಿದ್ದಾರೆ. ಮಸೀದಿ ಧ್ವಂಸಗೊಳಿಸಲು ಸಂಚು ರೂಪಿಸಿರಲಿಲ್ಲ. ಬಾಬ್ರಿ ಮಸೀದಿ ಧ್ವಂಸ ಪೂರ್ವ ನಿಯೋಜಿತ ಕೃತ್ಯವಲ್ಲ ಎಂದು ನ್ಯಾ. ಎಸ್. ಕೆ ಯಾದವ್ ತೀರ್ಪು ನೀಡಿದ್ದಾರೆ.
12:28 PM, 30 Sep
28 ವರ್ಷಗಳ ನಂತರ ಬಿಜೆಪಿಯ ಭೀಷ್ಮ ಅಡ್ವಾಣಿಗೆ ನಿರಾಳ ಮಸೀದಿ ಧ್ವಂಸಗೊಳಿಸಲು ಸಂಚು ರೂಪಿಸಿರಲಿಲ್ಲ: ನ್ಯಾ. ಎಸ್. ಕೆ ಯಾದವ್. ಬಾಬ್ರಿ ಮಸೀದಿ ಧ್ವಂಸ -ಪೂರ್ವ ನಿಯೋಜಿತ ಕೃತ್ಯವಲ್ಲ ಎಂದ ಕೋರ್ಟ್.
12:13 PM, 30 Sep
ಸಿಬಿಐ ಕೋರ್ಟ್ ನಲ್ಲಿ ತೀರ್ಪು ಓದುತ್ತಿರುವ ನ್ಯಾಯಾಧೀಶ ಎಸ್ ಕೆ ಯಾದವ್. ವಿಡಿಯೋ ಕಾನ್ಫರೆನ್ಸ್ ಪ್ರಮುಖ ಆರೋಪಿಗಳು ಹಾಜರು.
12:04 PM, 30 Sep
ಬೇಲ್ ಬಾಂಡ್ ಸಿದ್ಧಪಡಿಸುತ್ತಿರುವ ಆರೋಪಿಗಳ ಪರ ವಕೀಲರು. ಮೂರ ವರ್ಷಕ್ಕಿಂತ ಕಡಿಮೆ ಶಿಕ್ಷೆಯಾದಲ್ಲಿ ತಕ್ಷಣವೇ ಬೇಲ್ ಬಾಂಡ್ ಸಲ್ಲಿಕೆ. ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿ ಶಿಕ್ಷೆಯಾದಲ್ಲಿ ಹೈಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ.
11:49 AM, 30 Sep
ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ಸತೀಶ್ ಪ್ರಧಾನ್ ಸೇರಿದಂತೆ 32 ಆರೋಪಿಗಳ ಭವಿಷ್ಯ ತೀರ್ಮಾನ.
11:48 AM, 30 Sep
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಓದುತ್ತಿರುವ ನ್ಯಾಯಾಧೀಶ ಎಸ್ ಕೆ ಯಾದವ್.
11:47 AM, 30 Sep
26 ಮಂದಿ ಆರೋಪಿಗಳು ಮತ್ತು ಆರೋಪಿ ಪರ ವಕೀಲರಿಗೆ ಮಾತ್ರ ಕೋರ್ಟ್ ಹಾಲ್ ಗೆ ಪ್ರವೇಶಿಸಲು ಅನುಮತಿ.
11:46 AM, 30 Sep
ಸಿಬಿಐ ವಿಶೇಷ ಕೋರ್ಟ್ ಹಾಲ್ ನಲ್ಲಿ ಹಾಜರಿರುವ ಆರೋಪಿಗಳ ತಲೆ ಎಣಿಕೆ ನಡೆಸುತ್ತಿರುವ ಸಿಬ್ಬಂದಿ.
11:43 AM, 30 Sep
ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ.ಯಾದವ್ ಅವರಿಗೆ ಪ್ಯಾರಾ ಮಿಲಿಟರಿ ಫೋರ್ಸ್ ನಿಂದ ಬಿಗಿ ಭದ್ರತೆ.
11:37 AM, 30 Sep
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 2000 ಪುಟಗಳ ತೀರ್ಪು ಅಂತಿಮಗೊಳಿಸಿರುವ ನ್ಯಾಯಾಧೀಶ ಎಸ್.ಕೆ. ಯಾದವ್.
11:30 AM, 30 Sep
ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಎಲ್ ಕೆ ಅಡ್ವಾಣಿ, ಉಮಾ ಭಾರತಿ ಮತ್ತು ಮುರಳಿ ಮನೋಹರ್ ಜೋಶಿ ಸೇರಿದಂತೆ ಎಲ್ಲ ಆರೋಪಿಗಳ ಹಾಜರಾತಿ ಪರಿಶೀಲಿಸಿದ ನ್ಯಾಯಾಧೀಶರು.
11:26 AM, 30 Sep
ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಕಲಾಪ ಆರಂಭ.
11:25 AM, 30 Sep
ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳಾದ ಲಾಲ್ ಕೃಷ್ಣ ಅಡ್ವಾಣಿ ಮತ್ತು ಉಮಾಭಾರತಿ ಹಾಜರು.
11:24 AM, 30 Sep
ವಿನಯ್ ಕಟಿಯಾರ್, ಸಾಧ್ವಿ ರಿತಂಬರಾ, ಲಲ್ಲೂ ಸಿಂಗ್, ಧರ್ಮದಾಸ್, ಚಂಪತ್ ರಾಯ್, ಪವನ್ ಪಾಂಡೆ, ಸಾಕ್ಷಿ ಮಹಾರಾಜ್, ರಾಮ್ ವಿಲಾಸ್ ವೇದಾಂತಿ ಸೇರಿದಂತೆ 26 ಆರೋಪಿಗಳು ಕೋರ್ಟ್ ಗೆ ಹಾಜರು.
11:20 AM, 30 Sep
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ 32 ಆರೋಪಿಗಳ ಪೈಕಿ 6 ಆರೋಪಿಗಳಿಗೆ ಕೋರ್ಟ್ ಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ಉಳಿದಂತೆ 26 ಆರೋಪಿಗಳು ಕೋರ್ಟ್ ಗೆ ಹಾಜರಾಗಿದ್ದಾರೆ.
11:13 AM, 30 Sep
ಲಕ್ನೋದ ಸಿಬಿಐ ಕೋರ್ಟ್ ಹಾಲ್ ಗೆ ಆಗಮಿಸಿದ ನ್ಯಾಯಾಧೀಶ ಎಸ್.ಕೆ. ಯಾದವ್.
11:10 AM, 30 Sep
ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಹಾಗೂ ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಸೇರಿದಂತೆ ಆರು ಆರೋಪಿಗಳಿಗೆ ವಿನಾಯಿತಿ ನೀಡಿದ ಕೋರ್ಟ್.
11:07 AM, 30 Sep
ಆರು ಆರೋಪಿಗಳಿಗೆ ಕೋರ್ಟ್ ಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.
READ MORE

English summary
Babri Masjid Demolition Verdict LIVE Updates in Kannada: A special court will deliver the much-awaited judgment today in the 1992 Babri Masjid demolition case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X