ರಾಮಲಲ್ಲಾ ಮುಂದೆ ಅಯೋಧ್ಯೆ ತೀರ್ಪಿನ ಪ್ರತಿ ಇಟ್ಟು ಪೂಜಿಸಲಿರುವ ವಕೀಲರು
ಅಯೋಧ್ಯೆ, ನವೆಂಬರ್ 21: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ಪ್ರತಿಯನ್ನು ಅರ್ಜಿದಾರರಲ್ಲೊಬ್ಬರಾದ ರಾಮಲಲ್ಲಾಗೆ ನೀಡಿ ವಿಶೇಷ ಪೂಜೆ ನಡೆಸಲು ವಕೀಲರ ತಂಡ ನಿರ್ಧರಿಸಿದೆ.
Recommended Video
ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದ ರಾಮಲಲ್ಲಾ ವಿರಾಜಮಾನನ ಪರವಾಗಿ ವಾದ ಮಂಡಿಸಿದ ವಕೀಲರು ನವೆಂಬರ್ 24 ರಂದು ವಿಶೇಷ ಪೂಜೆ ಸಲ್ಲಿಸಿ, ತೀರ್ಪಿನ ಪ್ರತಿಯನ್ನು ರಾಮಲಲ್ಲಾ ಮುಂದಿಡಲು ನಿರ್ಧರಿಸಿದ್ದಾರೆ. ವಕೀಲರ ತಂಡದೊಂದಿಗೆ ವಿಶ್ವ ಹಿಂದು ಪರಿಷತ್ತಿನ ಹಿರಿಯ ಮುಖಂಡರೂ ಜೊತೆಯಾಗಲಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆಯುತ್ತಿರುವ ಅತ್ಯಂತ ಸಂಭ್ರಮದ, ಅದ್ಧೂರಿ ಆಚರಣೆ ಇದಾಗಲಿದೆ.

ಹಲವು ದಶಕಗಳಿಂದ ವಿವಾದದಲ್ಲಿದ್ದ ಅಯೋಧ್ಯೆ ವಿವಾದದ ಅಂತಿಮ ತೀರ್ಪು ನವೆಂಬರ್ 09 ರಂದು ಹೊರಬಿದ್ದಿದ್ದು, ತೀರ್ಪಿನಲ್ಲಿ ರಾಮಜನ್ಮಭೂಮಿ ವಿವಾದಿತ ಜಾಗವನ್ನು ರಾಮಜನ್ಮಭೂಮಿ ನ್ಯಾಸ ಟ್ರಸ್ಟ್ ಗೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಸುನ್ನಿ ವಕ್ಫ್ ಬೋರ್ಡಿಗೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಪರ್ಯಾಯ ಜಮೀನು ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿತ್ತು.












Click it and Unblock the Notifications