ಉತ್ತರ ಪ್ರದೇಶ ಪೊಲೀಸರಿಗೆ ಬೆದರಿಕೆ ಹಾಕಿದ ಅಸಾದುದ್ದೀನ್ ಓವೈಸಿ

ಲಕ್ನೋ, ಡಿಸೆಂಬರ್ 24: ''ಯೋಗಿ ಆದಿತ್ಯನಾಥ್ ಮಠಕ್ಕೆ ಹಿಂದಿರುಗಿದರೆ ನಿಮ್ಮನ್ನು ರಕ್ಷಣೆ ಮಾಡುವವರು ಯಾರು?'' ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶ ಪೊಲೀಸರಿಗೆ ನೇರ ಬೆದರಿಕೆ ಹಾಕಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ನಿಮ್ಮೊಂದಿಗಿರಲು ಸಾಧ್ಯವಿಲ್ಲ. ನಾವು ಎಂದಿಗೂ ನಿಮ್ಮ ದೌರ್ಜನ್ಯವನ್ನು ಎಂದಿಗೂ ನಾವು ಮರೆಯುವುದಿಲ್ಲ, ಅಲ್ಲಾ ತನ್ನ ಶಕ್ತಿಯಿಂದ ನಿಮ್ಮನ್ನು ಖಂಡಿತವಾಗಿಯೂ ನಾಶಮಾಡುತ್ತಾನೆ ಎಂದಿದ್ದಾರೆ.

ಪರಿಸ್ಥಿತಿ ಬದಲಾಗುತ್ತದೆ, ಆಗ ನಿಮ್ಮನ್ನು ರಕ್ಷಿಸಲು ಯಾರು ಬರುತ್ತಾರೆ, ಯೋಗಿ ಅವರು ಮಠಕ್ಕೆ, ಮೋದಿಯವರು ಪರ್ವತಗಳತ್ತ ಹೋಗುತ್ತಾರೆ ನಿಮ್ಮನ್ನು ರಕ್ಷಿಸಲು ಯಾರು ಬರುತ್ತಾರೆ ಎಂದು ಬೆದರಿಕೆ ಹಾಕಿದರು. ಓವೈಸಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರರು, ಓವೈಸಿಯನ್ನು ತರಾಟೆಗೆ ತೆಗೆದುಕೊಂಡರು, ದೇಶದಲ್ಲಿ ಯಾವಾಗ ಔರಂಗಜೇಬ್ ಮತ್ತು ಬಾಬರ್‌ನಂತವರು ದುಷ್ಕೃತ್ಯವೆಸಗಲು ಬರುತ್ತಾರೆ, ಮಹಾರಾಣಾ ಪ್ರತಾಪ್, ಶಿವಾಜಿ, ಯೋಗಿ ಮತ್ತು ಮೋದಿಯಂಥವರು ಹುಟ್ಟಿಕೊಳ್ಳುತ್ತಾರೆ ಎಂದರು.

ದೇಶದಲ್ಲಿ ಕೊರೊನಾ ವೈರಸ್‌ ರೂಪಾಂತರಿ ಓಮಿಕ್ರಾನ್‌ ಹಾವಳಿ ಹೆಚ್ಚುತ್ತಿದೆ. ಈ ನಡುವೆ ಉತ್ತರ ಪ್ರದೇಶ ಚುನಾವಣೆಯೂ ಸಮೀಪಿಸುತ್ತಿದೆ. ಇದರಿಂದ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು. ಚುನಾವಣೆಯನ್ನು ಮುಂದೂಡಿ, ಪ್ರಚಾರಕ್ಕಾಗಿ ನಡೆಸುವ ಸಭೆ-ಸಮಾರಂಭ, ರ‍್ಯಾಲಿಗಳನ್ನು ರದ್ದುಗೊಳಿಸುವಂತೆ ಚುನಾವಣಾ ಆಯೋಗ ಹಾಗೂ ಪ್ರಧಾನಿ ಮೋದಿ ಅವರಿಗೆ ಅಲಹಾಬಾದ್‌ ಹೈಕೋರ್ಟ್‌ ಸಲಹೆ ನೀಡಿದೆ.

Asaduddin Owaisi Threatens Uttar Pradesh Police

ಒಂದು ವೇಳೆ ರ‍್ಯಾಲಿಗಳನ್ನು ನಿಲ್ಲಿಸದಿದ್ದರೆ, ಕೊರೊನಾ ಎರಡನೇ ಅಲೆಗಿಂತ ಭೀಕರವಾಗಿ ಮೂರನೇ ಅಲೆಯು ವ್ಯಾಪಕವಾಗಿ ಹರಡಿ ಆತಂಕ ಸೃಷ್ಟಿಸಬಹುದು ಎಂದು ಕೋರ್ಟ್‌ ಎಚ್ಚರಿಸಿದೆ.

ಈಗಾಗಲೇ ಹಲವು ದೇಶಗಳಲ್ಲಿ ಕೊರೊನಾ ಮೂರನೇ ಅಲೆಯ ಪರಿಣಾಮ ಉಂಟಾಗಿದೆ. ಎರಡನೇ ಅಲೆಯ ಸಂದರ್ಭದಲ್ಲಿ ಭಾರತದ ಜನತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಸೋಂಕಿನಿಂದಾಗಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಚೀನಾ, ಜರ್ಮನಿ, ನೆದರ್ಲ್ಯಾಂಡ್‌ನಂಥ ದೇಶಗಳು ಭಾಗಶಃ ಲಾಕ್‌ಡೌನ್‌ ವಿಧಿಸಿವೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ರ‍್ಯಾಲಿ, ಸಮಾರಂಭಗಳನ್ನು ನಡೆಸಿ ಜನರನ್ನು ಸಜ್ಜುಗೊಳಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ ಸಾಮಾಜಿಕ ಅಂತರ, ಕೋವಿಡ್‌ ನಿಯಮಗಳು ಪಾಲನೆಯಾಗುವುದೇ ಇಲ್ಲ. ಇದನ್ನು ಸರಿಯಾದ ಸಮಯಕ್ಕೆ ತಡೆಯದಿದ್ದರೆ, ಕೊರೊನಾ ಸಾಂಕ್ರಾಮಿಕವು ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ಭೀಕರ ಪರಿಣಾಮ ಬೀರಬಹುದು ಎಂದು ಕಳವಳ ವ್ಯಕ್ತಪಡಿಸಿದೆ.

ರ‍್ಯಾಲಿ, ಸಮಾವೇಶಗಳನ್ನು ನಡೆಸದಂತೆ ಸೂಚಿಸಿ. ಚುನಾವಣೆ ಪ್ರಚಾರವನ್ನು ದೂರದರ್ಶನ ಮತ್ತು ಸುದ್ದಿಪತ್ರಿಕೆಗಳ ಮೂಲಕ ಮಾಡುವಂತೆ ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಿ. ಸಾಧ್ಯವಾದರೆ ಚುನಾವಣೆಯನ್ನು ಒಂದೆರಡು ತಿಂಗಳು ಮುಂದೂಡಿ ಎಂದು ಚುನಾವಣಾ ಆಯೋಗಕ್ಕೆ ನ್ಯಾಯಾಧೀಶ ಯಾದವ್‌ ತಿಳಿಸಿದ್ದಾರೆ.

ಅಖಿಲ ಭಾರತ ಮಜ್ಲಿಸ್-ಇ ಇಥೆಹಾದುಲ್ ಮುಸಲ್ಮಿನ್(ಎಐಎಂಐಎಂ)ಪಕ್ಷದ ನಾಯಕ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮನೆ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ದೆಹಲಿ ಕೋರ್ಟ್ ಒಪ್ಪಿಸಿತ್ತು.

ದೆಹಲಿಯ ಅಶೋಕ ರಸ್ತೆಯಲ್ಲಿರುವ ಓವೈಸಿ ಮನೆ ಮೇಲೆ ಈ ಹಿಂದೆ ದಾಳಿ ನಡೆದಿತ್ತು. ಘಟನೆಗೆ ಸಂಬಂಧಿಸದಂತೆ ತನಿಖೆ ನಡೆಸಿ ಐವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಗಳೆಲ್ಲರೂ ಕೂಡ ಮಂಡೋಲಿ ಪ್ರದೇಶದವರಾಗಿದ್ದು, ಹಿಂದೂ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದರು ಎಂದು ದೆಹಲಿ ಪೊಲೀಸರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದರು.

ಪೊಲೀಸರು ಐವರು ಆರೋಪಿಗಳನ್ನು ದೆಹಲಿ ಕೋರ್ಟ್‍ಗೆ ಹಾಜರುಪಡಿಸಿ, ಇನ್ನಷ್ಟು ವಿಚಾರಣೆಗಾಗಿ ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಕೋರಿದ್ದರು. ವಿಜಾರಣೆ ಬಳಿಕ ವಿಜಯ್, ಸಚಿನ್, ಶಿವಂ ಮತ್ತು ವಿಜಯ್ ಹೆಸರಿನ ನಾಲ್ವರು ಆರೋಪಿಗಳನ್ನು ನ್ಯಾಯಾಲಯ 14ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+