ಈರುಳ್ಳಿ ವಿಚಾರಕ್ಕೆ ಐವರು ಮಹಿಳೆಯರ ಮಧ್ಯೆ ಹೊಡೆದಾಟ, ಆಸ್ಪತ್ರೆಗೆ ದಾಖಲು

ಲಕ್ನೋ, ಅಕ್ಟೋಬರ್ 11: ಈರುಳ್ಳಿ ವಿಚಾರವಾಗಿ ಐವರು ಮಹಿಳೆಯರ ಮಧ್ಯೆ ಪರಸ್ಪರ ಹೊಡೆದಾಟ ನಡೆದು ಆಸ್ಪತ್ರೆಗೆ ಸೇರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈರುಳ್ಳಿ ಬೆಲೆ ವಿಚಾರಕ್ಕೆ ದೀಪ್ತಿ ಹಾಗೂ ನೇಹಾ ನಡುವೆ ವಾಗ್ವಾದ ಆರಂಭವಾಗಿತ್ತು. ಅಲ್ಲದೆ ಈ ಮಧ್ಯೆ ಇಬ್ಬರ ಕಡೆಯಿಂದಲೂ ಮಹಿಳೆಯರು ಜಗಳಕ್ಕಿಳಿದಿದ್ದಾರೆ. ಪರಿಣಾಮ ಐವರು ಮಹಿಳೆಯರು ಆಸ್ಪತ್ರೆ ಪಾಲಾಗಿದ್ದಾರೆ.

ಈರುಳ್ಳಿ ಕೊಳ್ಳಲು ವ್ಯಾಪಾರಿಯ ಬಳಿ ನೇಹಾ ಬಂದಿದ್ದಳು. ಅಲ್ಲದೆ ಕಡಿಮೆ ಬೆಲೆಗೆ ಈರುಳ್ಳಿ ಕೊಡುವಂತೆ ಚೌಕಾಸಿ ಮಾಡಿದ್ದಳು. ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ದೀಪ್ತಿ, ಈರುಳ್ಳಿ ಬೆಲೆ ಗಗನಕ್ಕೇರಿದ್ದರಿಂದ ನಿನ್ನ ಬಳಿ ಖರೀದಿಸುವಷ್ಟು ಹಣವಿಲ್ಲ. ಹೀಗಾಗಿ ನೀನು ಯಾಕೆ ಚೌಕಾಸಿ ಮಾಡಿ ಸಮಯ ವ್ಯರ್ಥ ಮಾಡುತ್ತೀಯಾ ಮುಂದಕ್ಕೆ ಹೋಗು ಎಂದು ನೇಹಾಳಿಗೆ ಹೇಳಿದ್ದಾಳೆ.

ಇದರಿಂದ ಸಿಟ್ಟಿಗೆದ್ದ ನೇಹಾ ಹಾಗೂ ದೀಪ್ತಿ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಮಹಿಳೆಯರಿಬ್ಬರ ಜಗಳ ತಾರಕ್ಕೇರುತ್ತಿದ್ದಂತೆಯೇ ಉಳಿದ ಮಹಿಳೆಯರು ಕೂಡ ಸೇರಿಕೊಂಡು ಜಗಳ ಮತ್ತಷ್ಟು ಜೋರಾಗಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ.

5 Women Admitted To Hospital Orgument over Buy Onions

ಅಲ್ಲದೆ ಎರಡೂ ಕಡೆಯ ಮಹಿಳೆಯರು ಸೇರಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೋರ್ಟಿಗೆ ಹಾಜರುಪಡಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಗಾಯಗೊಂಡ ಮಹಿಳೆಯರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+