ಸೆಕೆ ಎಂದು ರೈಲಿನಿಂದ ಇಳಿದಿದ್ದ ನಾಲ್ವರ ಮೇಲೆ ಹರಿದ ರಾಜಧಾನಿ ಎಕ್ಸ್‌ಪ್ರೆಸ್
ಇಠಾವಾ, ಜೂನ್ 10: ಉತ್ತರ ಪ್ರದೇಶದ ಇಠಾವಾದಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಡಿ ಸಿಲುಕಿ ನಾಲ್ವರು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
ಇಠಾವಾ-ದೆಹಲಿಗೆ ತೆರಳುತ್ತಿದ್ದ ರೈಲ್ವೆ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಅವಧ್ ಎಕ್ಸ್‌ಪ್ರೆಸ್ ಮುಜಾಫರ್‌ಪುರದಿಂದ ಬಾಂದ್ರಾ ಟರ್ಮಿನಲ್‌ಗೆ ತೆರಳುತ್ತಿತ್ತು. ಆದರೆ ಮಧ್ಯೆ ಅವಧ್ ರೈಲು ಲೂಪ್‌ಲೈನ್‌ನಲ್ಲಿ ತೆರಳಬೇಕಾದ ಕಾರಣ ಕೆಲಕಾಲ ರೈಲನ್ನು ನಿಲ್ಲಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಕೆಲವು ಪ್ರಯಾಣಿಕರು ರೈಲಿನಿಂದ ಕೆಳಗೆ ಇಳಿದಿದ್ದರು. ಅದೇ ಸಮಯದಕ್ಕೆ ರಾಜಧಾನಿ ಎಕ್ಸ್‌ಪ್ರೆಸ್ ಕೂಡ ಹೋಗಬೇಕಿದ್ದ ಕಾರಣದಿಂದಲೇ ರೈಲನ್ನು ನಿಲ್ಲಿಸಲಾಗಿತ್ತು. ರೈಲಿನಿಂದ ಇಳಿದು ಹಳಿಯ ಮೇಲೆ ನಿಂತಿದ್ದ ಪ್ರಯಾಣಿಕರ ಮೇಲೆ ರೈಲು ಹರಿದಿದೆ.

ನಾಲ್ಕು ಮಂದಿ ಮೃತಪಟ್ಟಿದ್ದು 6ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಚ್ಚು ಸೆಕೆ ಎಂದು ರೈಲಿನಿಂದ ಪ್ರಯಾಣಿಕರು ಇಳಿದಿದ್ದರು. ಹಾಗೆಯೇ ಅಲ್ಲಿಂದ ಇಳಿದು ರೈಲ್ವೆ ಹಳಿಯ ಮೇಲೆ ನಿಂತಿದ್ದರು. ಅದೇ ಸಮಯದಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ನಿಲ್ದಾಣದಿಂದ ಹೊರಟಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications