• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಲಿಸುತ್ತಿದ್ದ ಬಸ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಇಬ್ಬರು ಬಂಧನ

|

ಲಕ್ನೌ, ಜೂನ್ 19: ಚಲಿಸುತ್ತಿರುವ ಬಸ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉತ್ತಮ ಪ್ರದೇಶದ ನೋಯ್ಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬುಧವಾರ ಈ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ವ್ಯಕ್ತಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

   ಭಾರತೀಯ ಯೋಧರ ಸಾವಿಗೆ ಕಂಬನಿ ಮಿಡಿದ ಅಮೆರಿಕ | Donald Trump | Narendra Modi | Oneindia Kannada

   ಬಸ್‌ನಲ್ಲಿ ಇಬ್ಬರು ಚಾಲಕರು ಇದ್ದರು. ಈ ಪೈಕಿ ಒಬ್ಬ ಚಾಲಕನನ್ನು ಅನುಮಾನದ ಮೇಲೆ ಘಟನೆ ನಡೆದ ದಿನವೇ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ಮತ್ತೊಬ್ಬ ವ್ಯಕ್ತಿಯನ್ನು ಗುರುವಾರ ಅರೆಸ್ಟ್ ಮಾಡಿದ್ದಾರೆ.

   ಕೆಂಗೇರಿಯಲ್ಲಿ ಗ್ಯಾಂಗ್‌ರೇಪ್: ಕೆಲಸ ಹುಡುಕಿ ಹೋದ ಮಹಿಳೆ ಮೇಲೆ ದೌರ್ಜನ್ಯ

   ಇನ್ನು ಇಬ್ಬರು ವ್ಯಕ್ತಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಹುಡುಕುತ್ತಿದ್ದಾರೆ ಎನ್ನಲಾಗಿದೆ. ಮುಂದೆ ಓದಿ...

   ಎಸಿ ಬಸ್‌ನಲ್ಲಿ ಮಹಿಳೆ ಪ್ರಯಾಣ

   ಎಸಿ ಬಸ್‌ನಲ್ಲಿ ಮಹಿಳೆ ಪ್ರಯಾಣ

   ಬುಧವಾರ ರಾತ್ರಿ ಪ್ರತಾಪ್‌ಘಡ್‌ದಿಂದ ನೋಯ್ಡಾಗೆ ತೆರಳುತ್ತಿದ್ದ ಎಸಿ ಬಸ್‌ನಲ್ಲಿ (ಸ್ಲೀಪರ್ ಕೋಚ್) 25 ವರ್ಷದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಯಾಣ ಮಾಡಿದ್ದಾಳೆ. ಮಧ್ಯರಾತ್ರಿ 2 ಗಂಟೆಯ ಸಮಯದಲ್ಲಿ ಓರ್ವ ಚಾಲಕ ಸೇರಿ ಮೂವರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಬಸ್‌ನ ಕೊನೆಯ ಕೋಚ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

   ಸಹಾಯಕ್ಕೆ ಬಾರದ ಸಹ ಪ್ರಯಾಣಿಕರು

   ಸಹಾಯಕ್ಕೆ ಬಾರದ ಸಹ ಪ್ರಯಾಣಿಕರು

   ಈ ಘಟನೆ ಲಖ್ನೌ ಮತ್ತು ಮಥುರಾ ನಡುವೆ ನಡೆದಿದೆ ಎಂದು ಪೊಲೀಸರು ವರದಿ ಮಾಡಿದ್ದಾರೆ. ದುರ್ದೈವ ಅಂದ್ರೆ ಈ ಬಸ್‌ನಲ್ಲಿ ಹತ್ತಕ್ಕೂ ಹೆಚ್ಚು ಸಹ ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದೆ. ಆದರೆ, ಯಾರೊಬ್ಬರು ಆ ಮಹಿಳೆಯ ಸಹಾಯಕ್ಕೆ ಬಂದಿಲ್ಲ.

   ಲಾಕ್‌ಡೌನ್: ಮನೆಗೆ ಬಂದಿದ್ದ ಮಗಳ ಮೇಲೆ ತಂದೆಯಿಂದ ಅತ್ಯಾಚಾರ

   ನೋಯ್ಡಾ ಪೊಲೀಸ್ ಠಾಣೆಯಲ್ಲಿ ದೂರು

   ನೋಯ್ಡಾ ಪೊಲೀಸ್ ಠಾಣೆಯಲ್ಲಿ ದೂರು

   ನೋಯ್ಡಾ ತಲುಪಿದ ಮೇಲೆ ಆ ಮಹಿಳೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಸಂತ್ರಸ್ತೆಯ ಬಳಿ ದೂರು ಸ್ವೀಕರಿಸಿದ ಪೊಲೀಸರು ಐಪಿಸಿ ಸೆಕ್ಷನ್ 376, 506, 212, 201 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರು ಬಸ್ ಚಾಲಕರು ಹಾಗೂ ಓರ್ವ ಸಿಬ್ಬಂದಿಯನ್ನು ಬಸ್ ಹೊಂದಿತ್ತು ಎಂದು ಮಹಿಳೆ ಮಾಹಿತಿ ನೀಡಿದ್ದಾಳೆ.

   ಪ್ರಮುಖ ಆರೋಪಿಗಾಗಿ ಶೋಧ

   ಪ್ರಮುಖ ಆರೋಪಿಗಾಗಿ ಶೋಧ

   ಮಹಿಳೆಯ ಪತಿ ತರಕಾರಿ ವ್ಯಾಪಾರಿಯಾಗಿದ್ದು, ಇದೇ ಮೊದಲ ಬಾರಿಗೆ ಮಹಿಳೆ ಪ್ರತಾಪ್ ಘಡ್‌ದಿಂದ ನೋಯ್ಡಾಗೆ ಪ್ರಯಾಣ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಮತ್ತು ಓರ್ವ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪ್ರಮುಖ ಆರೋಪಿ ಮತ್ತೊಬ್ಬ ಬಸ್ ಚಾಲಕನಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

   English summary
   25 Year old Woman was Raped in Moving Bus At Uttar Pradesh, two person already arrested in this case include Bus driver.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X