ರೈಲಿನಲ್ಲಿ ಟಿಕೆಟ್ ಕೇಳಿದ್ದಕ್ಕೆ ಟಿಟಿಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು
ಲಕ್ನೊ, ಜನವರಿ 16: ರೈಲಿನಲ್ಲಿ ಪ್ರಯಾಣಿಸುವಾಗ ಟಿಕೆಟ್ ಚೆಕಿಂಗ್ ಬರುವುದು ಸಾಮಾನ್ಯ, ಟಿಕೆಟ್ ಕೇಳಿದ್ದಕ್ಕೆ ಕೋಪಗೊಂಡ ಇಬ್ಬರು ಪ್ರಯಾಣಿಕರು ಟಿಟಿಗೆ ಚಾಕುವಿನಿಂದ ತಿವಿದು ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ಮಂಗಳವಾರ ನಡೆದಿದೆ.
ಗೋರಖ್‌ಪುರ ಜಂಕ್ಷನ್‌ನಿಂದ ಸುಮಾರು 40 ಕಿ.ಮೀ ದೂರದಲ್ಲಿ ಕಪ್ತನ್‌ಗಂಜ್ ಸಮೀಪ ದೆಹಲಿಗೆ ತೆರಳುತ್ತಿದ್ದ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಅಂಜನಿ ಕುಮಾರ್ (53) ಹಲ್ಲೆಗೊಳಗಾದವರು. ಅವರನ್ನು ಗೋರಖ್‌ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹಲ್ಲೆ ನಡೆಸಿದವರ ಮೇಲೆ ಯಾವುದೇ ದೂರು ದಾಖಲಾಗಿಲ್ಲ, ಆದರೆ ಅಂಜನ್ ಕುಟುಂಬಸ್ಥರು ಶೀಘ್ರವೇ ದೂರು ದಾಖಲಿಸಲಿದ್ದಾರೆ. ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.












Click it and Unblock the Notifications