ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಣಿ ಎಲಿಜಬೆತ್ ಅಂತ್ಯಕ್ರಿಯೆ, ಲಂಡನ್‌ಗೆ ಬಂದ ಮುರ್ಮು

|
Google Oneindia Kannada News

ಲಂಡನ್‌, ಸೆಪ್ಟೆಂಬರ್‌ 18: ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭಾರತದ ರಾಷ್ಷ್ರಪತಿ ದ್ರೌಪದಿ ಮುರ್ಮು ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಸೋಮವಾರ ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ರಾಷ್ಷ್ರಪತಿ ದ್ರೌಪದಿ ಮುರ್ಮು ಸೆಪ್ಟೆಂಬರ್ 17 ರಿಂದ 19 ರವರೆಗೆ ಯುನೈಟೆಡ್ ಕಿಂಗ್‌ಡಮ್‌ಗೆ ಅಧಿಕೃತ ಪ್ರವಾಸದಲ್ಲಿರುತ್ತಾರೆ.

ಬ್ರಿಟನ್‌ ರಾಣಿ ಎಲಿಜಬೆತ್- II ದೇಹ ಮುಂದಿನ 10 ದಿನ ಸಮಾಧಿ ಮಾಡಲ್ಲ: ಯಾಕೆ?ಬ್ರಿಟನ್‌ ರಾಣಿ ಎಲಿಜಬೆತ್- II ದೇಹ ಮುಂದಿನ 10 ದಿನ ಸಮಾಧಿ ಮಾಡಲ್ಲ: ಯಾಕೆ?

ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಸೇರಿದಂತೆ ದ್ರೌಪದಿ ಮುರ್ಮು ಮತ್ತು ಅವರ ತಂಡದ ಸದಸ್ಯರನ್ನು ಹೊತ್ತ ರಾಷ್ಷ್ರಪತಿಯವರ ವಿಮಾನವು ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ರಾತ್ರಿ 10:50 ಬಂದಿಳಿದಿದೆ. ಅಲ್ಲಿಂದ ಅವರು ಹೋಟೆಲ್‌ಗೆ ತೆರಳಿದರು.

Draupadi Murmu came to London to attend Queen Elizabeths funeral

ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಧ್ಯಕ್ಷರನ್ನು ಯುನೈಟೆಡ್ ಕಿಂಗ್‌ಡಮ್‌ನ ಭಾರತದ ಹೈ ಕಮಿಷನರ್ ಸ್ವಾಗತಿಸಿದರು. ಅಧಿಕೃತ ವರದಿಗಳ ಪ್ರಕಾರ, ಭಾನುವಾರ, ಅವರು ವೆಸ್ಟ್‌ಮಿನಿಸ್ಟರ್ ಅರಮನೆಯಲ್ಲಿ ಲೈಯಿಂಗ್-ಇನ್-ಸ್ಟೇಟ್ ಆಫ್ ಕ್ವೀನ್ಸ್ ಅಂತ್ಯಸಂಸ್ಕಾರಕ್ಕೆ ಹಾಜರಾಗುತ್ತಾರೆ. ಬಕಿಂಗ್‌ಹ್ಯಾಮ್ ಅರಮನೆ ಬಳಿಯ ಲ್ಯಾಂಕಾಸ್ಟರ್ ಹೌಸ್‌ನಲ್ಲಿ ಭಾರತ ಸರ್ಕಾರದ ಪರವಾಗಿ ಸಂತಾಪ ಪುಸ್ತಕಕ್ಕೆ ಸಹಿ ಹಾಕುತ್ತಾರೆ ಎಂದು ಮೂಲಗಳು ತಿಳಿಸಿವೆ.

ನಂತರದ ದಿನದಲ್ಲಿ, ಸೋಮವಾರ ಸ್ಥಳೀಯ ಕಾಲಮಾನ ಬೆಳಗ್ಗೆ 11 ಗಂಟೆಗೆ ಅಂತ್ಯಕ್ರಿಯೆಯ ಸೇವೆಯ ಮೊದಲು ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಸಾಗರೋತ್ತರ ನಾಯಕರಿಗಾಗಿ ಕಿಂಗ್ ಚಾರ್ಲ್ಸ್ III ಆಯೋಜಿಸಿದ ಸ್ವಾಗತ ಕೂಟದಲ್ಲಿ ಅವರು ಭಾಗವಹಿಸುತ್ತಾರೆ.

ನಂತರ ಅವರು ವೆಸ್ಟ್‌ಮಿನಿಸ್ಟರ್ ಅಬ್ಬೆಯ ವೆಸ್ಟ್ ಗೇಟ್‌ನಲ್ಲಿ ರಾಜ್ಯ ಅಂತ್ಯಕ್ರಿಯೆಯ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಧ್ಯಾಹ್ನ ಬ್ರಿಟನ್‌ ವಿದೇಶಾಂಗ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಅವರು ಆಯೋಜಿಸಿರುವ ಸ್ವಾಗತ ಕೂಟದಲ್ಲಿ ಭಾಗವಹಿಸಲಿದ್ದಾರೆ.

Draupadi Murmu came to London to attend Queen Elizabeths funeral

ಯುಕೆ ಮಾಜಿ ರಾಷ್ಟ್ರದ ಮುಖ್ಯಸ್ಥೆ ಮತ್ತು ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥೆ ರಾಣಿ ಎಲಿಜಬೆತ್ II, (96) ಸೆಪ್ಟೆಂಬರ್ 8 ರಂದು ನಿಧನರಾಗಿದ್ದರು. ಅವರಿಗೆ ಸೆಪ್ಟೆಂಬರ್ 19 ರಂದು ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯುತ್ತದೆ. ಸೆಪ್ಟೆಂಬರ್ 8 ರಂದು ನಿಧನರಾದ ಬ್ರಿಟನ್‌ ರಾಣಿ ಎಲಿಜಬೆತ್ II ರ ಗೌರವಾರ್ಥವಾಗಿ ಸೆಪ್ಟೆಂಬರ್ 11 ರಂದು ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಯಿತು.

English summary
President of India Draupadi Murmu landed at London's Gatwick Airport to attend Queen Elizabeth II's funeral at London's Westminster Abbey on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X