ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಕೆ ಕೆಂಪು ಪಟ್ಟಿಯಿಂದ ಭಾರತ ಔಟ್‌: ಪ್ರಯಾಣಿಕರಿಗೆ ಕೋವಿಡ್‌ ನಿರ್ಬಂಧ ಸಡಿಲಿಕೆ

|
Google Oneindia Kannada News

ಲಂಡನ್, ಆ.05: ಭಾರತದಿಂದ ಸಂಪೂರ್ಣ ಕೋವಿಡ್‌ ಲಸಿಕೆ ಪಡೆದ ಯುಕೆ ಪ್ರಯಾಣಿಕರನ್ನು ಇನ್ನು ಮುಂದೆ ಕಡ್ಡಾಯವಾಗಿ 10 ದಿನಗಳ ಹೋಟೆಲ್ ಕ್ವಾರಂಟೈನ್‌ಗೆ ಒಳಪಡಬೇಕಾಗಿಲ್ಲ. ಏಕೆಂದರೆ ಯುಕೆ ಭಾರತ ದೇಶವನ್ನು "ಕೆಂಪು" ಪಟ್ಟಿಯಿಂದ ತೆಗೆದು ಹಾಕಿ "ಅಂಬರ್" ಪಟ್ಟಿಗೆ ಸೇರ್ಪಡೆ ಮಾಡಿದೆ.

ಅಂತರಾಷ್ಟ್ರೀಯ ಪ್ರಯಾಣಕ್ಕಾಗಿ ಬ್ರಿಟನ್‌ನ ಟ್ರಾಫಿಕ್ ಲೈಟ್ ವ್ಯವಸ್ಥೆಯ ಅಡಿಯಲ್ಲಿ, ಅಂಬರ್ ಲಿಸ್ಟ್ ದೇಶಗಳಿಂದ ಹಿಂದಿರುಗುವುದು ಎಂದರೆ ಮನೆಯಲ್ಲಿ 10 ದಿನಗಳ ಕ್ವಾರಂಟೈನ್‌ಗೆ ಒಳಗಾಗುವುದು. ಸಾರಿಗೆ ಇಲಾಖೆಯು ಘೋಷಿಸಿದ ಬದಲಾವಣೆಯು ಭಾನುವಾರ ಆಗಸ್ಟ್‌ 8 ರಂದು ಸ್ಥಳೀಯ ಕಾಲಮಾನ 4 ಗಂಟೆಯಿಂದ ಜಾರಿಗೆ ಬರುತ್ತದೆ.

 ಮಾಸ್ಕ್‌ನ ಹಿಂದಿದೆ ಒಂದು ರಹಸ್ಯ: ಕೋವಿಡ್‌ ಲಸಿಕೆ ಪಡೆದವರು ಎಷ್ಟು ಬಾರಿ ವೈರಸ್‌ ಹರಡುತ್ತಾರೆ? ಮಾಸ್ಕ್‌ನ ಹಿಂದಿದೆ ಒಂದು ರಹಸ್ಯ: ಕೋವಿಡ್‌ ಲಸಿಕೆ ಪಡೆದವರು ಎಷ್ಟು ಬಾರಿ ವೈರಸ್‌ ಹರಡುತ್ತಾರೆ?

"ಯುಎಇ, ಕತಾರ್, ಭಾರತ ಮತ್ತು ಬಹ್ರೇನ್ ಅನ್ನು ಕೆಂಪು ಪಟ್ಟಿಯಿಂದ ಅಂಬರ್ ಪಟ್ಟಿಗೆ ವರ್ಗಾಯಿಸಲಾಗುವುದು. ಎಲ್ಲಾ ಬದಲಾವಣೆಗಳು ಆಗಸ್ಟ್ 8 ರಂದು ಬೆಳಿಗ್ಗೆ 4 ಗಂಟೆಗೆ ಜಾರಿಗೆ ಬರಲಿವೆ," ಎಂದು ಯುಕೆ ಸಾರಿಗೆ ಕಾರ್ಯದರ್ಶಿ ಟ್ವೀಟ್ ಮಾಡಿದ್ದಾರೆ. "ನಾವು ನಮ್ಮ ಎಚ್ಚರಿಕೆಯ ವಿಧಾನವನ್ನು ಮುಂದುವರಿಸಿದ್ದು ಸರಿಯಾಗಿದ್ದರೂ, ಪ್ರಪಂಚದಾದ್ಯಂತ ಕುಟುಂಬಗಳು, ಸ್ನೇಹಿತರು ಮತ್ತು ವ್ಯವಹಾರಗಳೊಂದಿಗೆ ಸಂಪರ್ಕ ಹೊಂದಲು ಬಯಸುವ ಜನರಿಗೆ ಹೆಚ್ಚಿನ ತಾಣಗಳನ್ನು ತೆರೆಯುವುದು ಉತ್ತಮ ಸುದ್ದಿಯಾಗಿದೆ, ನಮ್ಮ ಯಶಸ್ವಿ ದೇಶೀಯ ಕೋವಿಡ್‌ ಲಸಿಕಾ ಕಾರ್ಯಕ್ರಮಕ್ಕೆ ಧನ್ಯವಾದಗಳು," ಎಂದು ಹೇಳಿದ್ದಾರೆ.

ಭಾರತ ಮತ್ತು ಬ್ರಿಟನ್ ನಡುವಿನ ಪ್ರಯಾಣದ ನಿಯಮಗಳನ್ನು ಸರಾಗಗೊಳಿಸುವಂತೆ ಒತ್ತಾಯಿಸುತ್ತಿದ್ದ ಯುಕೆಯಲ್ಲಿರುವ ಭಾರತೀಯ ವಲಸಿಗರಿಗೆ ಈ ನಿರ್ಧಾರವು ಈಗ ಸಮಾಧಾನ ತಂದಿದೆ.

 ಡೆಲ್ಟಾ ಉಲ್ಬಣ: ಕೋವಿಡ್‌ನಿಂದ ತತ್ತರಿಸಿದ ದೇಶಗಳ ರಿಯಾಲಿಟಿ ಚೆಕ್‌ ಡೆಲ್ಟಾ ಉಲ್ಬಣ: ಕೋವಿಡ್‌ನಿಂದ ತತ್ತರಿಸಿದ ದೇಶಗಳ ರಿಯಾಲಿಟಿ ಚೆಕ್‌

 ಅಂಬರ್‌ ಪಟ್ಟಿಯಲ್ಲಿದ್ದರೆ ಏನು ವಿನಾಯಿತಿ

ಅಂಬರ್‌ ಪಟ್ಟಿಯಲ್ಲಿದ್ದರೆ ಏನು ವಿನಾಯಿತಿ

ಅಂಬರ್ ಪಟ್ಟಿಯಲ್ಲಿರುವ ದೇಶಗಳ ಕಾನೂನು ನಿಯಮಗಳ ಪ್ರಕಾರ, ಪ್ರಯಾಣಿಕರು ಹೊರಡುವ ಮೂರು ದಿನಗಳ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿ ಕೊಳ್ಳಬೇಕು ಮತ್ತು ಇಂಗ್ಲೆಂಡಿಗೆ ಬಂದ ಮೇಲೆ ಎರಡು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಮುಂಚಿತವಾಗಿ ಬುಕ್‌ ಮಾಡಬೇಕು ಹಾಗೂ ಆಗಮನದಲ್ಲಿ ಪ್ರಯಾಣಿಕರ ಲೊಕೇಟರ್ ಫಾರ್ಮ್ ಅನ್ನು ಪೂರ್ಣಗೊಳಿಸಬೇಕು. ಇಂಗ್ಲೆಂಡಿಗೆ ಆಗಮಿಸಿದ ನಂತರ, ಪ್ರಯಾಣಿಕರು ಮನೆಯಲ್ಲಿ ಅಥವಾ ತಮ್ಮ ಸ್ಥಳವೆಂದು ದೃಢೀಕರಿಸಿದ ಸ್ಥಳದಲ್ಲಿ 10 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕು ಮತ್ತು ಎರಡನೇ ದಿನ ಅಥವಾ ಎಂಟನೇ ದಿನ ಕೋವಿಡ್ -19 ಪರೀಕ್ಷೆಗೆ ಒಳಗಾಗಬೇಕು. ಅಂಬರ್ ಪಟ್ಟಿಯಲ್ಲಿರುವವರು ಕಡ್ಡಾಯವಾಗಿ 10 ದಿನಗಳ ಹೋಟೆಲ್ ಕ್ವಾರಂಟೈನ್‌ಗೆ ಒಳಪಡಬೇಕಾಗಿಲ್ಲ.

 ಯುಕೆ ಲಸಿಕೆ ಕಾರ್ಯಕ್ರಮದಡಿ ಲಸಿಕೆ ಪಡೆದವರಿಗೆ ಇದೆ ವಿನಾಯಿತಿ

ಯುಕೆ ಲಸಿಕೆ ಕಾರ್ಯಕ್ರಮದಡಿ ಲಸಿಕೆ ಪಡೆದವರಿಗೆ ಇದೆ ವಿನಾಯಿತಿ

18 ವರ್ಷದೊಳಗಿನವರು ಮತ್ತು ಯುಕೆಯಲ್ಲಿ ಸಂಪೂರ್ಣವಾಗಿ ಕೋವಿಡ್‌ ಲಸಿಕೆ ಹಾಕಿಸಿಕೊಂಡವರು , ಇಯು ಮತ್ತು ಯುಎಸ್ ನಲ್ಲಿ ಎರಡು ಡೋಸ್ ಕೋವಿಡ್ ಲಸಿಕೆ ಪಡೆದವರು ಹೋಮ್ ಕ್ವಾರಂಟೈನ್ ನಿಂದ ವಿನಾಯಿತಿ ಪಡೆದಿದ್ದಾರೆ. "ಯುಕೆಯಲ್ಲಿ ಅಥವಾ ವಿದೇಶದಲ್ಲಿ ಯುಕೆ ಕೋವಿಡ್‌ ಲಸಿಕೆ ಕಾರ್ಯಕ್ರಮದ ಅಡಿಯಲ್ಲಿ ಸಂಪೂರ್ಣ ಲಸಿಕೆ ಪಡೆದವರಿಗೆ ವಿನಾಯಿತಿ ನೀಡಲಾಗಿದೆ. ಇದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಅನ್ವಯ. 18 ಕ್ಕಿಂತ ಕಡಿಮೆ ವಯಸ್ಸಿನವರು ಇಂಗ್ಲೆಂಡಿಗೆ ಬಂದವರು ಮತ್ತು ಯುಕೆಯಲ್ಲಿ ವಾಸಿಸುವವರು ಅಥವಾ ಯುಕೆಯಲ್ಲಿ ಅನುಮೋದನೆ ಪಡೆದ ಲಸಿಕೆ ಕಾರ್ಯಕ್ರಮ ಮತ್ತು ಯುಕೆ ಅನುಮೋದಿಸಿದ ಲಸಿಕೆ ಪ್ರಯೋಗದ ಭಾಗವಿರುವ ದೇಶದಲ್ಲಿರಿರುವವರು ಈ ವಿನಾಯಿತಿ ಪಡೆಯಲಿದ್ದಾರೆ."

ಭಾರತದಿಂದ ತಯಾರಿಸಿದ ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಲಸಿಕೆಯಾದ ಕೋವಿಶೀಲ್ಡ್ ಈ ವಿನಾಯಿತಿಯ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ.

 ಯಾವ ದೇಶಗಳಲ್ಲಿ ಮಾಸ್ಕ್‌ ಧರಿಸಬೇಕಾಗಿಲ್ಲ? - ಇಲ್ಲಿದೆ ಮಾಹಿತಿ ಯಾವ ದೇಶಗಳಲ್ಲಿ ಮಾಸ್ಕ್‌ ಧರಿಸಬೇಕಾಗಿಲ್ಲ? - ಇಲ್ಲಿದೆ ಮಾಹಿತಿ

 ಕೆಂಪು ಪಟ್ಟಿಯಲ್ಲಿ ಇದ್ದರೇನು ಕಷ್ಟ

ಕೆಂಪು ಪಟ್ಟಿಯಲ್ಲಿ ಇದ್ದರೇನು ಕಷ್ಟ

ಸಂಪೂರ್ಣ ಕೋವಿಡ್‌ ಲಸಿಕೆ ಪಡೆದ ಯುಕೆ ಪ್ರಯಾಣಿಕರು ಪ್ರತಿನಿಧಿಸುವ ದೇಶ ಕೆಂಪು ಪಟ್ಟಿಯಲ್ಲಿದ್ದರೆ ಕಡ್ಡಾಯವಾಗಿ 10 ದಿನಗಳ ಹೋಟೆಲ್ ಕ್ವಾರಂಟೈನ್‌ಗೆ ಒಳಪಡಬೇಕಾಗುತ್ತದೆ. ಈ ನಡುವೆ ಕ್ವಾರೆಂಟೈನ್ ಹೋಟೆಲ್‌ನಲ್ಲಿ ಉಳಿದಿರುವ ಕೆಂಪು ಪಟ್ಟಿಯಲ್ಲಿರುವ ಸ್ಥಳಗಳಿಂದ ಏಕವ್ಯಕ್ತಿ ಪ್ರಯಾಣಿಕರ ವೆಚ್ಚ ಆಗಸ್ಟ್ 12 ರಿಂದ ಜಿಬಿಪಿ 1,750 ರಿಂದ ಜಿಬಿಪಿ 2,285 ಕ್ಕೆ ಏರಿಕೆಯಾಗಲಿದೆ ಎಂದು ಪ್ರಕಟಣೆಯೊಂದಿಗೆ ಪ್ರಯಾಣ ಪಟ್ಟಿಯ ನವೀಕರಣವು ಬಂದಿದೆ. ರೂಮ್ ಅನ್ನು ಹಂಚಿಕೊಳ್ಳುವ ಹೆಚ್ಚುವರಿ ವಯಸ್ಕರಿಗೆ ಶುಲ್ಕವು ಜಿಬಿಪಿ 650 ರಿಂದ ಜಿಬಿಪಿ 1,430 ಕ್ಕೆ ಹೆಚ್ಚಾಗುತ್ತದೆ. ಸರ್ಕಾರದ ಪ್ರಕಾರ, ಇದು "ಹೆಚ್ಚಿದ ವೆಚ್ಚವನ್ನು ಉತ್ತಮವಾಗಿ ಪ್ರತಿಬಿಂಬಿಸುತ್ತದೆ".

ಈ ನಡುವೆ ಮೆಕ್ಸಿಕೋ, ಜಾರ್ಜಿಯಾ, ಲಾ ರಿಯೂನಿಯನ್ ಮತ್ತು ಮಯೋಟ್ಟೆ ಈ ನಾಲ್ಕು ದೇಶಗಳನ್ನು ಕೆಂಪು ಪಟ್ಟಿಯಲ್ಲಿ ಸೇರಿಸಲಾಗಿದೆ.

 ಹಸಿರು ಪಟ್ಟಿಗೆ ಸೇರ್ಪಡೆ

ಹಸಿರು ಪಟ್ಟಿಗೆ ಸೇರ್ಪಡೆ

ಏತನ್ಮಧ್ಯೆ, ಏಳು ದೇಶಗಳು ಹಸಿರು ಪಟ್ಟಿಗೆ ಹೋಗುತ್ತಿವೆ. ಜರ್ಮನಿ, ಆಸ್ಟ್ರಿಯಾ, ಸ್ಲೊವೇನಿಯಾ, ಸ್ಲೊವಾಕಿಯಾ, ಲಾಟ್ವಿಯಾ, ರೊಮೇನಿಯಾ ಮತ್ತು ನಾರ್ವೆ ಮತ್ತು ಫ್ರಾನ್ಸ್ ಅನ್ನು "ಅಂಬರ್ ವಾಚ್ ಲಿಸ್ಟ್" ನಿಂದ ಸ್ಥಳಾಂತರಿಸಲಾಗಿದೆ. ಹಸಿರು ಪಟ್ಟಿಯಲ್ಲಿರುವ ದೇಶಗಳಿಗೆ, ಜನರು ಈ ರಾಷ್ಟ್ರಗಳಿಂದ ಹಿಂದಿರುಗುವಾಗ, ಕೋವಿಡ್‌ ಲಸಿಕೆ ಸ್ಥಿತಿಯನ್ನು ಲೆಕ್ಕಿಸದೆ, ಕ್ಯಾರಂಟೈನ್ ಮಾಡಬೇಕಾಗಿಲ್ಲ, ಆದರೂ ಅವರು ನಿರ್ಗಮನ ಪೂರ್ವ ಪರೀಕ್ಷೆ ಮತ್ತು ಬಂದ ಎರಡು ದಿನಗಳ ನಂತರ ಮತ್ತೆ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. "ಹಸಿರು ವೀಕ್ಷಣೆ ಪಟ್ಟಿ", ಪ್ರಯಾಣಿಕರಿಗೆ ಹಸಿರು ಸ್ಥಿತಿ ಬದಲಾಗುವ ಅಪಾಯದಲ್ಲಿರುವ ದೇಶಗಳ ಸೂಚನೆಯನ್ನು ನೀಡುತ್ತದೆ.

(ಒನ್‌ಇಂಡಿಯಾ ಸುದ್ದಿ)

English summary
Fully vaccinated passengers from India will no longer be subjected to compulsory 10-day hotel quarantine as the UK moved the country from its "red" to "amber" list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X