ನೀರವ್ ಮೋದಿ ಜಾಮೀನು ಅರ್ಜಿ ಮತ್ತೆ ತಿರಸ್ಕರಿಸಿದ ಲಂಡನ್ ನ್ಯಾಯಾಲಯ
ಲಂಡನ್, ಜೂನ್ 12: ಉದ್ದೇಶಪೂರ್ವಕ ಸುಸ್ತೀದಾರ ನೀರವ್ ಮೋದಿ ಅವರು ಲಂಡನ್‌ನಲ್ಲಿ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯು ಮತ್ತೆ ತಿರಸ್ಕೃತವಾಗಿದೆ.
ಭಾರತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಇನ್ನೂ ಕೆಲವು ಬ್ಯಾಂಕುಗಳಿಗೆ ವಂಚನೆ ಮಾಡಿ ಪರಾರಿ ಆಗಿರುವ ನೀರವ್ ಮೋದಿ ಸದ್ಯ ಲಂಡನ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನಿಗಾಗಿ ಅರ್ಜಿ ಹಾಕಿದ್ದರು.
ನೀರವ್ ಮೋದಿ ಅವರು ಭಾರತವನ್ನು ಬಿಟ್ಟು ಬಂದಿದ್ದು ಬಂಡವಾಳ ಕ್ರೂಡೀಕರಣಕ್ಕೆ ಲಂಡನ್‌ಗೆ ಬಂದಿದ್ದರು ಎಂದು ನೀರವ್ ಮೋದಿ ಪರ ವಕೀಲರು ನಿನ್ನೆ ನ್ಯಾಯಾಲಯದಲ್ಲಿ ವಾದಿಸಿದ್ದರು.

ನೀರವ್ ಮೋದಿ ಅವರಿಗೆ ಜಾಮೀನು ನೀಡಿದರೆ ಸಹ ಅವರಿಗೆ ಮೊಬೈಲ್ ನೀಡಲಾಗುವುದು, ಲಂಡನ್‌ನ ಕಾನೂನಿನಂತೆ ಅವರಿಗೆ ಟ್ರಾಕರ್ ಅಳವಡಿಸಲಾಗುವುದು ಹಾಗಾಗಿ ಅವರು ಲಂಡನ್ ಬಿಟ್ಟು ಹೋಗದಂತೆ ನಿಗಾ ಇಡಬಹುದು ಎಂದು ಮನವರಿಕೆ ಮಾಡಲು ಯತ್ನಿಸಲಾಗಿತ್ತು.
ನೀರವ್ ಮೋದಿ ಅವರ ಮಕ್ಕಳು ಲಂಡನ್‌ನಲ್ಲಿಯೇ ವಿಶ್ವವಿದ್ಯಾಲಯ ಸ್ಥಾಪಿಸುತ್ತಿದ್ದು, ನೀರವ್ ಮೋದಿ ಅವರು ಲಂಡನ್ ಬಿಟ್ಟು ಹೋಗುವ ಪ್ರಮೇಯವೇ ಇಲ್ಲ ಎಂದು ನೀರವ್ ಪರ ವಕೀಲರು ವಾದಿಸಿದ್ದರು, ಆದರೆ ನ್ಯಾಯಾಲಯವು ನೀರವ್ ಅವರಿಗೆ ಜಾಮೀನು ನೀಡಲು ಇಂದು ನಿರಾಕರಿಸಿದೆ.
ನೀರವ್ ಮೋದಿ ಅವರನ್ನು ಭಾರತಕ್ಕೆ ಕರೆತರಲು ಇನ್ನಿಲ್ಲದ ಯತ್ನಗಳನ್ನು ವಿದೇಶಾಂಗ ಇಲಾಖೆ ಮಾಡುತ್ತಿದ್ದೆ, ಆದರೆ ಕಾನೂನು ತೊಡಕಿನಿಂದಾಗಿ ಇದು ಸಾಧ್ಯವಾಗುತ್ತಿಲ್ಲ.












Click it and Unblock the Notifications