• search
  • Live TV
ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನವವೃಂದಾವನ ಧ್ವಂಸ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

|

ಬೆಂಗಳೂರು, ಜುಲೈ 30: ಕೊಪ್ಪಳದ ಗಂಗಾವತಿ ತಾಲ್ಲೂಕಿನ ಆನೆಗುಂದಿ ಸಮೀಪದ ನವವೃಂದಾವನದ ಶ್ರೀ ವ್ಯಾಸರಾಜರ ವೃಂದಾವನ ದ್ವಂಸಗೊಳಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಶ್ರೀನಿವಾಸ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ವೃಂದಾವನ ಧ್ವಂಸ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀನಿವಾಸ ರೆಡ್ಡಿ ಸಿಕಂದರಾಬಾದ್‌ನಲ್ಲಿ ಅಡಗಿಕೊಂಡಿದ್ದ. ಆತನ ಪತ್ತೆಗೆ ತೀವ್ರ ಶೋಧ ನಡೆಸಿದ್ದ ಪೊಲೀಸರು ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಎಂಟು ಆರೋಪಿಗಳನ್ನು ಬಂಧಿಸಿದಂತಾಗಿದೆ.

ವ್ಯಾಸರಾಜ ಗುರುಗಳ ವೃಂದಾವನ ಧ್ವಂಸ: ತರ್ಕಕ್ಕೆ ನಿಲುಕದ ಪ್ರಶ್ನೆಗಳು ವ್ಯಾಸರಾಜ ಗುರುಗಳ ವೃಂದಾವನ ಧ್ವಂಸ: ತರ್ಕಕ್ಕೆ ನಿಲುಕದ ಪ್ರಶ್ನೆಗಳು

ಇದಕ್ಕೂ ಮುನ್ನ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಏಳು ಆರೋಪಿಗಳನ್ನು ಕಳೆದ ವಾರ ಬಂಧಿಸಿದ್ದರು. ನಿಧಿಯಾಸೆಯಿಂದ ವೃಂದಾವನದ ಕಂಬಗಳನ್ನು ಕಿತ್ತು ಧ್ವಂಸಗೊಳಿಸಿದ್ದಾಗಿ ಅವರು ಹೇಳಿಕೆ ನೀಡಿದ್ದರು.

ಆಂಧ್ರಪ್ರದೇಶದ ತಾಡಪತ್ರಿಯ ಶ್ರೀ ಬುಗ್ಗ ರಾಮಲಿಂಗೇಶ್ವರ ದೇವಸ್ಥಾನದ ಅರ್ಚಕ ಟಿ. ಬಾಲನರಸಯ್ಯ, ಡ. ಮನೋಹರ ಡೆರಂಗಲು, ಶ್ರೀರಾಮುಲು, ಬಿ. ವಿಜಯಕುಮಾರ್, ಕೆ. ಕುಮ್ಮಟ ಕೇಶವ, ಮುರಳಿ ಮನೋಹರ್ ರೆಡ್ಡಿ ಅವರನ್ನು ಜುಲೈ 21ರಂದು ಬಂಧಿಸಲಾಗಿತ್ತು.

ವ್ಯಾಸರಾಜರ ವೃಂದಾವನ ಮುಂಚಿನಂತೆ ಕಾಣುವಂತೆ ಮಾಡಿದವರು 'ಇವರಿಬ್ಬರು'ವ್ಯಾಸರಾಜರ ವೃಂದಾವನ ಮುಂಚಿನಂತೆ ಕಾಣುವಂತೆ ಮಾಡಿದವರು 'ಇವರಿಬ್ಬರು'

ಜುಲೈ 17ರಂದು ನವವೃಂದಾವನಕ್ಕೆ ಬಂದಿದ್ದ ಈ ದುಷ್ಕರ್ಮಿಗಳ ತಂಡ, ರಾತ್ರಿ 8.30ರಿಂದ 2.40ರವರೆಗೂ ಅಗೆದು ಕಂಬಗಳನ್ನು ಕಿತ್ತಿದ್ದರು. ಅದಕ್ಕೂ ಮುನ್ನ ಅರ್ಚಕ ವೃಂದಾವನಕ್ಕೆ ಪೂಜೆ ಸಲ್ಲಿಸಿದ್ದ. ಆದರೆ, ಅವರಿಗೆ ಕೆಳಗೆ ಕಲ್ಲು ಸಿಕ್ಕಿತ್ತು. ನಿಧಿ ಸಿಗದ ಕಾರಣ ಅವರು ಅದನ್ನು ಅಲ್ಲಿಯೇ ಬಿಟ್ಟು ಇನ್ನೋವಾ ಕಾರ್‌ನಲ್ಲಿ ಪರಾರಿಯಾಗಿದ್ದರು. ಈ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಸಮುದಾಯದ ಜನರು ಒಗ್ಗೂಡಿ ಒಂದು ದಿನದಲ್ಲಿಯೇ ವೃಂದಾವನವನ್ನು ಅದೇ ರೂಪದಲ್ಲಿ ಮರು ನಿರ್ಮಾಣ ಮಾಡಿದ್ದರು.

English summary
One of the main accused in Vyasaraja Navavrindavan gaddi case, Sreenivasa Reddy was arrested in Secunderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X