ಲಾಡ್ಜ್ ನಲ್ಲಿ ಮಹಿಳೆ ಜತೆ ಕಲ್ಮಠ ಕೊಟ್ಟುರೇಶ್ವರ ಸ್ವಾಮಿ, ವಿಡಿಯೋ ವೈರಲ್
ಕೊಪ್ಪಳ, ಡಿಸೆಂಬರ್ 7: ಬೆಂಗಳೂರಿನ ಯಲಹಂಕದ ಹುಣಸಮಾರನಹಳ್ಳಿಯ ಮದ್ದೇವಣಾಪುರ ಜಂಗಮ ಮಠದ ಸ್ವಾಮೀಜಿ ಪುತ್ರ ದಯಾನಂದ ರಾಸಲೀಲೆ ಬಳಿಕ ಇದೀಗ ಕೊಪ್ಪಳ ಜಿಲ್ಲೆಯ ಸ್ವಾಮಿಯೊಬ್ಬರ ಕಾಮಪುರಾಣ ಬಯಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಲ್ಮಠ ಕೊಟ್ಟುರೇಶ್ವರ ಸ್ವಾಮಿ ಲಾಡ್ಜ್ ವೊಂದರ ಕೋಣೆಯಲ್ಲಿ ಮಹಿಳೆ ಜೊತೆ ಇರುವ ವಿಡಿಯೋ ವೈರಲ್ ಆಗಿದೆ. ಮಹಿಳೆಯ ಜೊತೆ ಇರುವ ಈ ವಿಡಿಯೋವನ್ನು ಸ್ವಾಮಿಯ ಕಾರು ಚಾಲಕ ಮಲ್ಲಯ್ಯಸ್ವಾಮಿ ಎನ್ನುವರು ಬಿಡುಗಡೆ ಮಾಡಿದ್ದಾರೆ. ಆದರೆ, ಈ ಆರೋಪವನ್ನು ಸ್ವಾಮಿ ತಳ್ಳಿಹಾಕಿದ್ದಾನೆ.

ಸ್ವಾಮಿ ಲಾಡ್ಜ್ ಪಲ್ಲಂಗದಾಟದ ವಿಡಿಯೋವನ್ನು ಬಿಡುಗಡೆ ಮಾಡಿದ ಡ್ರೈವರ್ ಗೆ ದೂರವಾಣಿ ಮೂಲಕ ಬೆದರಿಕೆ ಕರೆಗಳು ಬರತೊಡಗಿವೆ. ಇದರಿಂದ ಹೆದರಿದ ಡ್ರೈವರ್ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆಯ ದೂರು ದಾಖಲಿಸಿದ್ದಾನೆ.
ಸ್ವಾಮಿ ವಿಡಿಯೋ ಸಂಬಂಧ ಇಂದು (ಗುರುವಾರ) ಸಂಜೆ ಕಲ್ಮಠದ ಭಕ್ತರು ಸಭೆ ಸೇರಲಿದ್ದು, ಈ ಸಭೆಯಲ್ಲಿ ಸ್ವಾಮಿಯ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಆದರೆ, ಸ್ವಾಮಿ ಮಾತ್ರ ನಾಪತ್ತೆಯಾಗಿದ್ದಾನೆ. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications