ಕೊಪ್ಪಳ: ಬಹಿರ್ದೆಸೆಗೆಂದು ಹೋಗಿದ್ದ ಮಹಿಳೆ ಕಾಣೆ, ಪತ್ತೆಗೆ ಸಹಕರಿಸಿ

Posted By:
Subscribe to Oneindia Kannada

ಕೊಪ್ಪಳ, ನವೆಂಬರ್ 17: ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮದ ನಿವಾಸಿ ನೇತ್ರಾವತಿ (22) ಗಂಡ ಮಂಜುನಾಥ ಎಂಬ ಮಹಿಳೆ ನವೆಂಬರ್ 6ರಿಂದ ಕಾಣಿಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪೊಲೀಸ್ ಠಾಣೆಯ ಸಬ್ ಇಬ್ಸ್ ಪೆಕ್ಟರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ನೇತ್ರಾವತಿ (22) ಗಂಡ ಮಂಜುನಾಥ ಎಂಬ ಮಹಿಳೆ ನವೆಂಬರ್ 06 ರಂದು ಬೆಳಗಿನ ಜಾವ 5-30 ಗಂಟೆ ಸುಮಾರಿಗೆ ಹೊಸಳ್ಳಿ ಗ್ರಾಮದ ತಮ್ಮ ಮನೆಯಿಂದ ಬಹಿರ್ದೆಸೆಗೆಂದು ಹೋಗಿದ್ದು, ಈ ವರೆಗೆ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾಳೆ.

The Munirabad police have requested the public to identify the missing woman

ಕಾಣೆಯಾದ ಮಹಿಳೆಯ ಚಹರೆ ವಿವರ ಇಂತಿದೆ: ನೇತ್ರಾವತಿ ಗಂಡ ಮಂಜುನಾಥ (22), ಎತ್ತರ 4.2 ಫೀಟ್, ತಳ್ಳನೆಯ ಮೈಕಟ್ಟು, ಕೋಲಿ ಮುಖ, ಕೆಂಪನೆಯ ಮೈಬಣ್ಣ ಹೊಂದಿದ್ದು, ಕಾಣೆಯಾದಾಗ ಹಳದಿ ಬಣ್ಣದ ಸೀರೆ ಮತ್ತು ಕೆಂಪು ಬಣ್ಣದ ಕುಪ್ಪಸ ಧರಿಸಿದ್ದು, ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ.

ಈ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ 08539-230111, ಡಿ.ಎಸ್.ಪಿ 08539-222433, ಸಿ.ಪಿ.ಐ ಕೊಪ್ಪಳ ಗ್ರಾಮೀಣ ವೃತ್ತ 08539-221333, ಹಾಗೂ ಮುನಿರಾಬಾದ ಪೊಲೀಸ್ ಠಾಣೆ 08539-270333, 9480803748, ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Munirabad police have requested the public to identify the missing woman Netravathi (22) from Hosalli Koppal taluk. The Woman from Hosalli resident of Koppal taluk missing on November 6.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ